ಮಾ.3ರಂದು ಶ್ರೀ ಕ್ಷೇತ್ರ ಕಟೀಲಿನಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ - BUNTS NEWS WORLD

ಮಾ.3ರಂದು ಶ್ರೀ ಕ್ಷೇತ್ರ ಕಟೀಲಿನಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ

Share This
ಬಂಟ್ಸ್ ನ್ಯೂಸ್ ವಲ್ಡ್, ಕಟೀಲು:  ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾರ್ಚ್ 3ರ ಶನಿವಾರ ರಾತ್ರಿ 8ಗಂಟೆಗೆ ಅಷ್ಟಪವಿತ್ರ ನಾಗಮಂಡಲೋತ್ಸವವು ನಡೆಯಲಿದೆ.
ಮಾ.3ರ ಸಂಜೆ 6ಕ್ಕೆ ಹಾಲಿಟ್ಟು ಸೇವೆಯ ನಂತರ ಕಟೀಲು ದೇವಳದ ಮೂಲ ಕ್ಷೇತ್ರ ಭ್ರಾಮರೀವನದಲ್ಲಿ (ಕುದುರು) ಶಿಬರೂರು ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳ ಆಚಾರ್ಯತ್ವದಲ್ಲಿ, ಅಸ್ರಣ್ಣರ ಅರ್ಚಕತ್ವದಲ್ಲಿ ಮತ್ತು ಮಾರ್ಗದರ್ಶನದಲ್ಲಿ ಉಡುಪಿ ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗರ ನೇತೃತ್ವದಲ್ಲಿ ಮದ್ದೂರು ಶ್ರೀ ಕೃಷ್ಣಪ್ರಸಾದ, ಬಾಲಕೃಷ್ಣ, ನಟರಾಜ ವೈದ್ಯ ಬಳಗದವರ ಸಹಭಾಗಿತ್ವದಲ್ಲಿ ಎರ್ಮಾಳು ಪೂಲ ಶ್ರೀಮತಿ ರಾಧಾ ವಿಠಲ ಶೆಟ್ಟಿ ಮತ್ತು ಮಕ್ಕಳ ಸೇವಾರೂಪವಾಗಿ ‘ಅಷ್ಟಪವಿತ್ರ ನಾಗಮಂಡಲೋತ್ಸವ’ವು ಜರಗಲಿರುವುದು.

Pages