ಫರಂಗಿಪೇಟೆ ಬಂಟರ ಸಂಘದ “ಬಂಟರ ಸಂಗಮ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ” - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಫರಂಗಿಪೇಟೆ ಬಂಟರ ಸಂಘದ “ಬಂಟರ ಸಂಗಮ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ”

Share This
ಬಂಟ್ಸ್ ನ್ಯೂಸ್ ವಲ್ಡ್, ಬಂಟ್ವಾಳ: ಫರಂಗಿಪೇಟೆ ವಲಯ ಬಂಟರ ಸಂಘ ಇದರ ವತಿಯಿಂದಬಂಟರ ಸಂಗಮ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ” ಸಮಾರಂಭವು ಫರಂಗಿಪೇಟೆ ಸೇವಾಂಜಲಿ ಸಭಾಭವನ ದಲ್ಲಿ ಜರುಗಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಬಂಟರ ಸಂಘ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಮಾತನಾಡಿ, ಸಮಾಜದ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ತಮ್ಮ ಸಂಘದ ಮೂಲಕ 32 ಲಕ್ಷ ರೂ.ಗಳನ್ನು ವಿತರಿಸಿದ್ದು, ಇನ್ನೂ ಮುಂದಿನ ದಿನಗಳಲ್ಲಿ ವಿದ್ಯಾರ್ಜನೆಗೆ ಹೆಚ್ಚಿನ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಭರವಸೆ ಇತ್ತರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಮಾತನಾಡಿ, ಬಂಟ ಸಮುದಾಯವು ಎಲ್ಲಾ ಜಾತಿ ಮತ ಧರ್ಮಗಳ ಪ್ರೀತಿಗೆ ಪಾತ್ರವಾಗಿದ್ದು ಸಮಾಜದ ಅಭಿಲಾಷೆಗೆ ತಕ್ಕಂತೆ ಬಂಟರ ಸಂಘವು ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬಂಟ ಜನಾಂಗವು ಉತ್ತಮ ನಾಯಕತ್ವದ ಗುಣಗಳನ್ನು ಹೊಂದಿದ್ದು ಸಮಾಜ ಕೂಡಾ ಅದನ್ನು ಸ್ವೀಕಾರ ಮಾಡಿದೆ. ಹಾಗೂ ಇನ್ನೂ ಹೆಚ್ಚಿನ ರೀತಿಯಲ್ಲಿ ಇದನ್ನು ಮುಂದುವರೆಸಿಕೊಂಡು ಹೋಗಲು ನಮಗೆ ಶಕ್ತಿಯನ್ನು ಕೊಟ್ಟಿದ್ದು, ಸಮಾಜಮುಕಿಯಾಗಿ ಎಲ್ಲರನ್ನು ಒಗ್ಗೂಡಿಸುವ ಭರವಸೆಯನ್ನು ನೀಡಿದರು. ಬಂಟವಾಳ ಬಂಟರ ಭವನದ ನೂತನ ಸಭಾಂಗಣದ ರುವಾರಿ ನಗ್ರಿಗುತ್ತು ವಿವೇಕ ಶೆಟ್ಟಿಯವರನ್ನು ಶ್ಲಾಘಿಸುತ್ತಾ ಮುಂದಿನ ದಿನಗಳಲ್ಲಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್ನಲ್ಲಿ ನಿರ್ಮಾಣಗೊಳ್ಳಬೇಕಾಗಿರುವ ಬಂಟರಭವನವು ಎಲ್ಲರ ಸಹಯೋಗದೊಂದಿಗೆ ಅತೀ ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಫರಂಗಿಪೇಟೆ ವಲಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶಶಿರಾಜ್ ಶೆಟ್ಟಿ ಕೊಳಂಬೆ ಇವರು ಮಾತನಾಡುತ್ತಾ ಸಂಘದ ಅಭಿವೃದ್ಧಿಗಾಗಿ ಎಲ್ಲರನ್ನು ಒಟ್ಟಾಗಿ ಸೇರಿಸಿಕೊಂಡು ಪ್ರಾಮಾಣಿಕವಾಗಿ ನಿಷ್ಠೆಯಿಂದ ದುಡಿದಲ್ಲಿ ಮಾತ್ರ ಸಂಘವು ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಶಕ್ತಿ ಹಾಗೂ ಪ್ರೋತ್ಸಾಹ ದೊರಕಲಿದ್ದು ಸಂಘದ ವತಿಯಿಂದ 2 ಉಚಿತ ಮನೆಗಳನ್ನು ವಸತಿರಹಿತ ಬಡಕುಟುಂಬಗಳಿಗೆ ಕಟ್ಟಿಸಿಕೊಡುವುದಾಗಿ ಅಧ್ಯಕ್ಷರ ನೆಲೆಯಲ್ಲಿ ಶಶಿರಾಜ್ ಶೆಟ್ಟಿ ಕೊಳಂಬೆಯವರು ಸಂದರ್ಭದಲ್ಲಿ ಭರವಸೆ ನೀಡಿದರು.

ಮುಖ್ಯ ಅತಿಥಿಯಾಗಿ ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷ ಶ್ರೀ ಕರ್ನಿರೆ ವಿಶ್ವನಾಥ ಶೆಟ್ಟಿ, ಜಯರಾಮ ಸಾಮಾನಿ ತುಂಬೆ(ಪ್ರಗತಿಪರ ಕೃಷಿಕ), ಎನ್ ರವಿರಾಜ್ ಶೆಟ್ಟಿ ನಿಟ್ಟೆಗುತ್ತು (ಅಧ್ಯಕ್ಷರು ಮಂಗಳೂರು ತಾಲೂಕು ಬಂಟರ ಸಂಘ ಮತ್ತು ನಿರ್ದೇಶಕರು ಮಾತೃ ಸಂಘ), ಸುರೇಶ್ ಚಂದ್ರ ಶೆಟ್ಟಿ, (ನಿರ್ದೇಶಕರು ಬಂಟರ ಯಾನೆ ನಾಡವರ ಮಾತೃ ಸಂಘ), ಫ್ರೋ. ಬಿ. ಶಿವರಾಮ ಶೆಟ್ಟಿ, ಪ್ರಾಂಶುಪಾಲರು, ಕನ್ನಡ ಅಧ್ಯಯನ ಸಂಸ್ಥೆ, ಮಂಗಳೂರು ವಿಶ್ವವಿದ್ಯಾನಿಲಯ ಇವರುಗಳು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ವಿಠಲ ಶೆಟ್ಟಿ ನಿರೋಳ್ಪೆ (ಗೌರವಾಧ್ಯಕ್ಷರು), ಅರುಣ್ ಕುಮಾರ್ ಶೆಟ್ಟಿ, ನುಳಿಯಾಲ ಗುತ್ತು, ಶೈಲಜಾ ಸುಂದರ ಶೆಟ್ಟಿ, ಕಲ್ಲತಡಮೆ (ಉಪಾಧ್ಯಕ್ಷರು), ಸುಕೇಶ್ ಶೆಟ್ಟಿ, ತೇವು (ಕಾರ್ಯದರ್ಶಿ), ದೇವದಾಸ್ ಶೆಟ್ಟಿ, ಕೊಡ್ಮಾಣ್ (ಕೋಶಾಧಿಕಾರಿ), ಶೈಲಜಾ ಪದ್ಮನಾಭ ಶೆಟ್ಟಿ, ಕೊಟ್ಟಿಂಜ (ಜೊತೆ ಕಾರ್ಯದರ್ಶಿ), ಸುಕನ್ಯಾ ವಿ. ಶೆಟ್ಟಿ, ಕೊಟ್ರಬೆಟ್ಟು (ಅಧ್ಯಕ್ಷರು, ಮಹಿಳಾ ವಿಭಾಗ), ಸಂತೋಷ್ ಗಾಂಭೀರ, ಸುಜೀರ್ ಗುತ್ತು, ಮಮತ . ಶೆಟ್ಟಿ, ಕಲ್ಲತಡಮೆ (ಸಂಘಟನಾ ಕಾರ್ಯದರ್ಶಿಗಳು), ಭಾರತಿ ಗಿರೀಶ್ ಶೆಟ್ಟಿ, ಕುಂಪಣಮಜಲು, (ಕಾರ್ಯದರ್ಶಿ ಮಹಿಳಾ ವಿಭಾಗ), ಭುವನ್ ರೈ, ಸುಜೀರುಗುತ್ತು, (ಅಧ್ಯಕ್ಷರು, ಯುವ ವಿಭಾಗ), ಸತೀಶ್ ಶೆಟ್ಟಿ , ಕುಂಪಣಮಜಲು (ಕಾರ್ಯದರ್ಶಿ, ಯುವ ವಿಭಾಗ) ಇವರೆಲ್ಲಾ ಉಪಸ್ಥಿತರಿದ್ದರು.

ಸದಾನಂದ ಆಳ್ವ ಪ್ರಸ್ತಾವನೆ ಗೈದರು. ನವೀನ್ ಶೆಟ್ಟಿ ಮುಂಡಾಜೆಗುತ್ತು ಸ್ವಾಗತಿಸಿದರು. ಸುಮಾ ನವೀನ್ ಶೆಟ್ಟಿ ಮುಂಡಾಜೆಗುತ್ತು ಮತ್ತು ಭುವನೇಶ್ವರಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Pages