ಬಂಟ್ಸ್ ನ್ಯೂಸ್ ವಲ್ಡ್, ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆಯ
ನಿವಾಸಿ ಕೃಷ್ಣಯ್ಯ ಶೆಟ್ಟಿ ಮತ್ತು ಪ್ರೇಮ ಅವರ ಮಗ ನಾಗರಾಜ (31) ಕಳೆದ 12 ವರ್ಷಗಳಿಂದ ಹಾಸಿಗೆಯಲ್ಲೆ
ದಿನದೂಡುತ್ತಿದ್ದಾರೆ.
ನಾಗರಾಜ ಅವರು
2005ರಲ್ಲಿ ವಿದ್ಯುತ್ ಕಂಬದಲ್ಲಿ ಕಾರ್ಯನಿರ್ವಹಿಸುವ ಸಂದರ್ಭ ಕಂಬದಿಂದ ಬಿದ್ದಿದ್ದರು. ಅವರು ವಿದ್ಯುತ್
ಕಂಬದಿಂದ ಬಿದ್ದ ತೀವ್ರತೆಗೆ ಸೊಂಟದ ಕೆಳಭಾಗ ಸ್ವಾಧೀನತೆ ಕಳೆದುಕೊಂಡಿದೆ. ಇದರಿಂದಾಗಿ ನಾಗರಾಜ್ ಅವರು
ನಡೆದಾಡುವ ಶಕ್ತಿಯನ್ನು ಕಳೆದುಕೊಂಡಿದ್ದು ಹಾಸಿಗೆಯಲ್ಲೇ ದಿನದೂಡುತ್ತಿದ್ದಾರೆ.
ಹಲವು ಭಾರಿ ಶಸ್ತ್ರಚಿಕಿತ್ಸೆ
ಮಾಡಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಈಗಾಗಲೇ ಇವರೆಗಿನ ಚಿಕಿತ್ಸೆಗೆ ಸರಿ ಸುಮಾರು 9 ಲಕ್ಷದಷ್ಟು
ಖರ್ಚಾಗಿದೆ. ಒಬ್ಬನೆ ಅಣ್ಣನ ಆದಾಯದಲ್ಲಿ ಅನಾರೋಗ್ಯ ಪೀಡಿತ ತಾಯಿ, ತಂದೆ ಹಾಗೂ ನಾಗರಾಜರ ಚಿಕಿತ್ಸೆಯ
ವೆಚ್ಚವನ್ನು ಭರಿಸುವುದು ಬಡ ಕುಟುಂಬಕ್ಕೆ ಕಷ್ಟವಾಗಿದೆ. ಸಹೃದಯಿಗಳು ನಾಗರಾಜ್ ಅವರಿಗೆ ನೆರವು ನೀಡಬೇಕಾಗಿ
ಈ ಮೂಲಕ ಕೋರುತ್ತೇವೆ.
ನಾಗರಾಜ್ ಅವರಿಗೆ ನೆರವು ನೀಡಬಯಸುವವರು ಅಜೆಕಾರಿನ
ಕಾರ್ಪೊರೇಶನ್ ಬ್ಯಾಂಕ್ ಶಾಖೆಯ ಖಾತೆ ನಂ. 520101229478634 IFSC CODE: CORP000098 ಇಲ್ಲಿಗೆ
ಸಹಾಯಧನ ಕಳುಹಿಸಬಹುದು. ನಾಗರಾಜ್ ಅವರನ್ನು ಭೇಟಿಯಾಗಲಿಚ್ಛಿಸುವವರು ನಾಗರಾಜ ಶೆಟ್ಟಿ, ಬಿನ್ ಕೃಷ್ಣಯ್ಯ
ಶೆಟ್ಟಿ, ಅನಂತ ನಿಲಯ, ಬಂಗ್ಲೆಗುಡ್ಡೆ, ಅಂಚೆ-ಅಜೆಕಾರು, ಮರ್ಣೆ ಗ್ರಾಮ, ಕಾರ್ಕಳ ತಾಲೂಕು, ಉಡುಪಿ
ಜಿಲ್ಲೆ ಇಲ್ಲಿ ಸಂಪರ್ಕಿಸಬಹುದು. ಮೊಬೈಲ್: 7760940737
(ವಿ.ಸೂ : ನಾಗರಾಜ್ ಅವರಿಗೆ ಸಹಾಯ ಧನ ಕಳಿಸಿದ
ದಾನಿಗಳು ಈ ಬಗ್ಗೆ ಮಾಹಿತಿಯನ್ನು ಬಂಟ್ಸ್ ನ್ಯೂಸಿಗೆ ನೀಡಿ ಸಹಕರಿಸಬೇಕಾಗಿ ವಿನಂತಿ. Email: newsbunts@gmail.com,
ಮೊಬೈಲ್: 9743166567 )