ಬೆಂಗಳೂರಿನಲ್ಲಿ ಯುವೈಕ್ಯ 2018 ರಾಷ್ಟ್ರೀಯ ಯುವ ಬಂಟ ಸಮಾವೇಶ: ಮಾತೃಸಂಘದಲ್ಲಿ ಪೂರ್ವಭಾವಿ ಸಭೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬೆಂಗಳೂರಿನಲ್ಲಿ ಯುವೈಕ್ಯ 2018 ರಾಷ್ಟ್ರೀಯ ಯುವ ಬಂಟ ಸಮಾವೇಶ: ಮಾತೃಸಂಘದಲ್ಲಿ ಪೂರ್ವಭಾವಿ ಸಭೆ

Share This
ಬಂಟ್ಸ್ ನ್ಯೂಸ್ ವಲ್ಡ್, ಮಂಗಳೂರು: ಬೆಂಗಳೂರು ಬಂಟರ ಸಂಘದ ಯುವ ವಿಭಾಗದ ವತಿಯಿಂದ ಜನವರಿ 13 ಮತ್ತು 14ರಂದು ಬೆಂಗಳೂರಿನ ವಿಜಯನಗರದಲ್ಲಿರುವ ಬಂಟ್ಸ್ ಸಂಘ ಕಾಂಪ್ಲೆಕ್ಸ್ನಲ್ಲಿ `ಯುವೈಕ್ಯ-2018' ರಾಷ್ಟ್ರೀಯ ಯುವ ಸಮಾವೇಶ ಜರಗಲಿದ್ದು, ಕಾರ್ಯಕ್ರಮದ ಕುರಿತು ಪೂರ್ವಭಾವಿಯಾಗಿ ಬಂಟ್ಸ್ ಹಾಸ್ಟೆಲ್ ಬಂಟರ ಮಾತೃ ಸಂಘದ ಅಮೃತೋತ್ಸವ ಕಟ್ಟಡದಲ್ಲಿ ಸಭೆ ಜರಗಿತು.

ಸಭೆಯ ಅಧ್ಯಕ್ಷತೆಯನ್ನು ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ವಹಿಸಿದ್ದರು. ಬೆಂಗಳೂರಿನಲ್ಲಿ ನಡೆಯುವ ಯುವೈಕ್ಯ -2018 ಸಮಾವೇಶದಲ್ಲಿ ಜಿಲ್ಲೆಯ ಸುಮಾರು 500ಕ್ಕೂ ಮಿಕ್ಕಿದ ಯುವ ಸಮುದಾಯ ಭಾಗವಹಿಸುವ ಕುರಿತು ಚರ್ಚೆ ನಡೆಯಿತು. ಮುಖ್ಯವಾಗಿ ಎರಡು ದಿನಗಳ ರಾಷ್ಟ್ರೀಯ ಯುವ ಸಮಾವೇಶದಲ್ಲಿ ವಿದ್ಯಾರ್ಥಿ, ಉದ್ಯೋಗಿ, ಉದ್ಯಮಿ ಹಾಗೂ ಇತರ ವಿಭಾಗಗಳ ಯುವ ಜನರಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿಗಳು ಜರಗಲಿವೆ. ಇದರಲ್ಲಿ ರಾಷ್ಟ್ರೀಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡಲಿದ್ದಾರೆ ಎಂದು ಅಜಿತ್ ಕುಮಾರ್ ರೈ ಸಭೆಯಲ್ಲಿ ತಿಳಿಸಿದರು.

 ಸಮಾವೇಶದಲ್ಲಿ ದಕ್ಷಿಣ ಕನ್ನಡಉಡುಪಿಕಾಸರಗೋಡು ಜಿಲ್ಲೆಗಳಲ್ಲಿರುವ ಬಂಟರ ಸಂಘದ ಸದಸ್ಯರು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ, ಕೋಶಾಧಿಕಾರಿ ರವೀಂದ್ರನಾಥ ಶೆಟ್ಟಿ, ಮಾಜಿ ಕಾರ್ಯದರ್ಶಿ ಸುಂದರ ಶೆಟ್ಟಿ, ಮಂಗಳೂರು ತಾಲೂಕು ಸಂಘದ ಅಧ್ಯಕ್ಷ ನಿಟ್ಟೆಗುತ್ತು ರವಿರಾಜ ಶೆಟ್ಟಿ, ಸಂಚಾಲಕ ಜಯರಾಮ ಸಾಂತ, ಸಹ ಸಂಚಾಲಕ ಉಮೇಶ್ ರೈ ಪದವು ಮೇಗಿನಮನೆ, ರತ್ನಾಕರ್ ಶೆಟ್ಟಿ ಎಕ್ಕಾರ್ ಹಾಗೂ ವಿವಿಧ ಬಂಟರ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಶೆಟ್ಟಿ ಪೆರ್ಮುದೆ, ಬಂಟರ ಮಾತೃ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ, ಶಿಶಿರ್ ಶೆಟ್ಟಿ ಪೆರ್ಮುದೆ, ಸುಹಾನ್ ಶೆಟ್ಟಿ ನೀರುಮಾರ್ಗ, ಉಳ್ಳಾಲ ಬಂಟರ ಸಂಘದ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಜಪ್ಪು ಬಂಟರ ಸಂಘದ ಅಧ್ಯಕ್ಷ ಸುನೀಲ್ ಶೆಟ್ಟಿ ಮೊದಲಾದವರು ಅನಿಸಿಕೆಗಳನ್ನು ಸಭೆಯಲ್ಲಿ ವ್ಯಕ್ತಪಡಿಸಿದರು.

ಯುವ ಸಮುದಾಯವನ್ನು ಒಟ್ಟು ಸೇರಿಸುವ ಜವಾಬ್ದಾರಿಯನ್ನು ಯುವ ಘಟಕದ ಅಧ್ಯಕ್ಷ ಅಶ್ವತ್ಥಾಮ ಹೆಗ್ಡೆ, ಶಶಿರಾಜ ಶೆಟ್ಟಿ ಕೊಳಂಬೆ, ಉಲ್ಲಾಸ್ ಶೆಟ್ಟಿ, ಶಿಶಿರ್ ಶೆಟ್ಟಿ, ಸುಹಾನ್ ಶೆಟ್ಟಿಯವರಿಗೆ ನೀಡಲಾಯಿತು.

Pages