ಜೆಸಿಐ ಸುರತ್ಕಲ್ ನ 2018 ನೇ ಸಾಲಿನ ಪದಗ್ರಹಣ: ಜಗನ್ನಾಥ ಶೆಟ್ಟಿ ಬಾಳರಿಗೆ ಸನ್ಮಾನ - BUNTS NEWS WORLD

ಜೆಸಿಐ ಸುರತ್ಕಲ್ ನ 2018 ನೇ ಸಾಲಿನ ಪದಗ್ರಹಣ: ಜಗನ್ನಾಥ ಶೆಟ್ಟಿ ಬಾಳರಿಗೆ ಸನ್ಮಾನ

Share This
ಬಂಟ್ಸ್ ನ್ಯೂಸ್ ವಲ್ಡ್, ಸುರತ್ಕಲ್: ಜೆಸಿಐ ಸುರತ್ಕಲ್ 2018 ನೇ  ಸಾಲಿನ  ಪದಗ್ರಹಣ ಸಮಾರಂಭ ಇತೀಚೆಗೆ ಬಂಟರ ಸಂಘ ಸುರತ್ಕಲ್ ನಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಜೆಸಿಐ 15 ವಲಯಾಧ್ಯಕ್ಷ ರಾಕೇಶ್ ಕುಂಜೂರ್ವ್ಯಕ್ತಿತ್ವ ವಿಕಸನ ಸಂಸ್ಥೆಯಾದ  ಜೆಸಿಐ, ಯುವ ಸಮುದಾಯವನ್ನು ಜೆಸಿ ಆಂದೋಲನದಲ್ಲಿ ಸಕ್ರಿಯರನ್ನಾಗಿಸಿ ಅವರನ್ನು ಸಮಾಜದ ಕ್ರಿಯಾಶೀಲ ನಾಗರಿಕರನ್ನಾಗಿ ಮಾಡುವ ಉದ್ದೇಶದ್ದಿಂದ ಪ್ರಸ್ತುತ ವರ್ಷದಲ್ಲಿ ಬದಲಾವಣೆ ನಮ್ಮಿಂದಲ್ಲೇ ಎಂಬ ಧ್ಯೇಯದೊಂದಿಗೆ ಕಾರ್ಯಪ್ರವರ್ತವಾಗಲಿದೆ ಮತ್ತು ಯುನೈಟೆಡ್ ನೇಷನ್ಸ್  ಸಸ್ಟೈನೇಬಲ್  ಡೆವೆಲೊಪ್ಮೆಂಟ್  ಗೋಲ್ 2030 ಕಾರ್ಯಕ್ರಮಗಳ ಪ್ರಮುಖ 6 ಅಂಶಗಳಾದ ಉತ್ತಮ ಅರೋಗ್ಯ ಮತ್ತು ಯೋಗ ಕ್ಷೇಮ , ಉತ್ತಮ ಗುಣಮಟ್ಟದ ಶಿಕ್ಷಣ , ಲಿಂಗ ಸಮಾನತೆ , ಸ್ವತ್ಛತಾ  £ೀರು ಮತ್ತು ನೈರ್ಮಲ್ಯ , ಸಮರ್ಥ£ೀಯ ನಗರ ಮತ್ತು ಸಮುದಾಯದ ಅಭಿವೃದ್ಧಿ , ಭೂಮಿಯಲ್ಲಿ ಜೀವನ ಎಂಬ ಅಂಶಗಳ ಅನುಷ್ಠಾನಕ್ಕೆ ಒತ್ತು ಕೊಡಲಿದೆ ಎಂದು ಹೇಳಿದರು.

ಮುಖ್ಯ ಅಥಿತಿಯಾಗಿ  ಬಂಟರ  ಸಂಘ ಸುರತ್ಕಲ್ ಇದರ ಅಧ್ಯಕ್ಷರಾದ  ಉಲ್ಲಾಸ್ ಶೆಟ್ಟಿ ಮಾತನಾಡಿ, ಶಿಸ್ತು, ಸಂವಿಧಾನಬದ್ದ ಮತ್ತು ಸಮಾಜಕ್ಕೆ ಒಳ್ಳೆಯ ನಾಯಕರನ್ನು  ಜೆಸಿಐ ನೀಡಿದೆ ಎಂದು ಶುಭ ಹಾರೈಸಿದರು. ಬಿಎಸ್ಫ್ ಇಂಡಿಯಾ  ಪ್ರೈವೇಟ್  ಲಿಮಿಟೆಡ್ ಇದರ ಕ್ವಾಲಿಟಿ ಕಂಟ್ರೋಲ್ ವಿಭಾಗದ ಪ್ರಬಂಧಕರಾದ   ಕಿರಣ್ ಭಟ್  ಮಾತನಾಡಿ, ನೂತನ  ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಶುಭಕೋರಿದರು.

ಪ್ರಥಮಾರ್ಧದ  ಸಭಾಧ್ಯಕ್ಷತೆಯನ್ನು ಚೇತನಾ ದತ್ತಾತ್ರೆಯ ವಹಿಸಿ, ಅತಿಥಿಗಳನ್ನು ಸ್ವಾಗತಿಸಿದರು. ನೂತನ ಅಧ್ಯಕ್ಷರಾಗಿ ಪ್ರವೀಣ್ ಶೆಟ್ಟಿ  ಅಧಿಕಾರ ಸ್ವೀಕರಿಸಿ ಸಭೆಯನ್ನು ಮುಂದುವರಿಸಿದರು. ಉಪಾಧ್ಯಕರಾಗಿ ದಿನೇಶ್ ದೇವಾಡಿಗ, ಯೋಗೀಶ್ ದೇವಾಡಿಗ, ಶಶಿಕುಮಾರ್, ಸುಜೀರ್ ಶೆಟ್ಟಿ, ಜ್ಯೋತಿ ಜೆ ಶೆಟ್ಟಿ ಕಾರ್ಯದರ್ಶಿಯಾಗಿ ಲೋಕೇಶ ರೈ  ಕೆ, ಜೊತೆ ಕಾರ್ಯದರ್ಶಿಯಾಗಿ ಶ್ರೀಶಯ್ ಶೆಟ್ಟಿಕೋಶಾಧಿಯಾರಿಯಾಗಿ  ರಾಕೇಶ್  ಹೊಸಬೆಟ್ಟು, ಜೆಸಿರೇಟ್ ಅಧ್ಯಕ್ಷೆಯಾಗಿ ಜ್ಯೋತಿ ಪಿ ಶೆಟ್ಟಿ, ಜೂನಿಯರ್ ಜೆಸಿ ಅಧ್ಯಕ್ಷೆಯಾಗಿ ಬಿಂದಿಯಾ   ಶೆಟ್ಟಿ ಪ್ರಮಾಣವಚನ ಸ್ವೀಕರಿಸಿದರು. ಪದಗ್ರಹಣ ಅಧಿಕಾರಿಯಾಗಿ ರೀಜನ ವಲಯ ಉಪಾಧ್ಯಕ್ಷ ಜೆಸಿಐ  ಸೆನೆಟರ್ ಪಶುಪತಿ ಶರ್ಮ ಭಾಗವಹಿಸಿ ನೂತ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ನೂತನ  ಸದಸ್ಯರಾಗಿ  ಶಿಶೀರ್ ಶೆಟ್ಟಿ , ಆಶ್ರಯ್ ಶೆಟ್ಟಿ , ದೀಪಕ್ ಶೆಟ್ಟಿ , ಗುರುಪ್ರಸಾದ್ , ಭಾರತೀ ನಿರಂಜನ್ , ಜಯರಾಜ್ ಆಚಾರ್ಯ , ರೂಪ ಜಯೇಶ್ , ಲಾವಣ್ಯ,   ಹರೀಶ್ ಶೆಟ್ಟಿ , ವಾಣೀಶ್ರೀ , ಹರಿಪ್ರಸಾದ್ ಶೆಟ್ಟಿ ,ಮಹೇಶ್ ಶೆಟ್ಟಿ , ವಿನೋದ್ ಶೆಟ್ಟಿಶ್ರೀಜಿತ್ ಶೆಟ್ಟಿ  ಪ್ರಮಾಣವಚನ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಜೆಸಿಐನ ವಲಯಾಧಿಕಾರಿಗಳಾದ , ಶ್ರೀನಿವಾಸ್  ಭಟ್ , ರಮ್ಯಾ ರಾವ್, ಸುರೇಂದ್ರ ಭಟ್, ಇತರ ಘಟಕ ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ,ಜೆಸಿಐ ಸುರತ್ಕಲ್    ಎಲ್ಲಾ ಪೂರ್ವಾಧ್ಯಕ್ಷರುಗಳು ,ಸದಸ್ಯರು ಉಪಸ್ಥಿತರಿದ್ದರು.
ಜಯೇಶ್ ಗೋವಿಂದ್  ಅತಿಥಿಗಳನ್ನು ವೇದಿಕೆಗೆ  ಆಹ್ವಾನಿಸಿದರು , ಕಾರ್ಯದರ್ಶಿ ಲೋಕೇಶ ರೈ ಕೆ  ಧನ್ಯವಾದ ಸಮರ್ಪಿಸಿದರು . ಜಿತಿನ್ ಶೆಟ್ಟಿ  , ವಿನಾಯಕ್ , ತಸ್ವಿ ರೈ , ಸ್ತುತಿಲೇಖನಜಾ£್ವ  ಮುಂತಾದವರಿಂದ  ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು .

ಸನ್ಮಾನ ಕಾರ್ಯಕ್ರಮ: ಸಂದರ್ಭದಲ್ಲಿ 2017ನೇ ಸಾಲಿನ ಕರ್ನಾಟಕ  ಮಾಧ್ಯಮ ಅಕಾಡಮಿ ಪ್ರಶಸ್ತಿ ಪುರಸ್ಕೃತ ,   . ಜಿಲ್ಲಾ ಕಾರ್ಯರತ ಪತ್ರಕರ್ತರ ಸಂಘದ  ಅಧ್ಯಕ್ಷ ಜಗನಾಥ ಶೆಟ್ಟಿ ಬಾಳ, ಮತ್ತು ಜೆಸಿ ಸುರತ್ಕಲ್ 2017 ಸಾಲಿನ ಅಧ್ಯಕ್ಷೆ ಚೇತನಾ ದತ್ತಾತ್ರೆಯ  ದಂಪತಿಗಳನ್ನು ಸನ್ಮಾನಿಸಲಾಯಿತು .

Pages