ಬಂಟ್ಸ್ ನ್ಯೂಸ್ ವಲ್ಡ್,ಮಂಜೇಶ್ವರ:
ಬಂಟ ಸಮಾಜದ ಮಹಿಳೆಯರಿಗಾಗಿ ಜ.
26ರಂದು ಬೆಳಿಗ್ಗೆ 9ರಿಂದ ರಾತ್ರಿ 9ರ
ವರೆಗೆ ಮಂಗಳೂರಿನ
ಬಂಟ್ಸ್ ಹಾಸ್ಟೆಲ್ ಆವರಣದಲ್ಲಿ ನಡೆಯಲಿರುವ ಶಕ್ತಿ ಸಂಗಮ ಕಾರ್ಯಕ್ರಮದಲ್ಲಿ
ಬಂಟ್ಸ್ ಮಜಿಬೈಲ್ ನ ಎಲ್ಲಾ
ಮಹಿಳೆಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೋಳಿಸಬೇಕೆಂದು ಮಾತೃಸಂಘದ ಮಹಿಳಾ ಘಟಕದ ರೂವರಿ
ಡಾ. ಆಶಾಜ್ಯೋತಿ ರೈ ಕೋರಿದರು.
ಅವರು ಕರಿಬೈಲ್
ಮಹಾ ಮಲರಾಯ ದೈವಸ್ಥಾನದಲ್ಲಿ ನಡೆದ
ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಅನಾದಿ ಕಾಲದಿಂದಲೂ ಮಾತೃ ಪ್ರಧಾನವಾದ ಬಂಟ
ಸಮಾಜವು ಮಹಿಳೆಯರಿಗೆ ವಿಶೇಷ ಸ್ಥಾನಮಾನಗಳನ್ನು ನೀಡಿದೆ.
ಮಾತೃ ಸ್ವರೂಪಿಯಾದ ಹೆಣ್ಣು ಒಬ್ಬ ವ್ಯಕ್ತಿಯ
ಜೀವನದಲ್ಲಿ ತಾಯಿಯಾಗಿ, ಸಹೋದರಿಯಾಗಿ, ಮಗಳಾಗಿ, ಸೊಸೆ, ಹೆಂಡತಿ
ಮತ್ತು ಗೆಳತಿಯಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿತ್ತಾಳೆ.
ಅವಳನ್ನು ಎಂದಿಗೂ ಸಂತೋಷದಿಂದ ಮತ್ತು
ನಗುಮುಖದಿಂದ ನೊಡಿಕೊಳ್ಳುವುದು ನಮ್ಮೆಲ್ಲರ ಆಶಯ ಎಂದರು.
ಸಭೆಯಲ್ಲಿ
ಶಿಲ್ಪ ಚೌಟ,ಮಾತೃ ಸಂಘದ
ಕಾರ್ಯಕಾರಿ ಸಮಿತಿ ಸದಸ್ಯರಾದ ಮೊಹನ್
ರೈ, ಮುಕ್ತನಂದ ರೈ, ಕಾರ್ತಿಕ್ ಶೆಟ್ಟಿ
ಮಜಿಬೈಲ್ ಉಪಸ್ಥಿತರಿದ್ದರು. ಆಗಮಿಸಿದ ಅತಿಥಿಗಳಿಗೆ ಚಂದ್ರಪ್ರಭ
ಪ್ರವೀಣ್ ಶೆಟ್ಟಿ ಕರಿಬೈಲ್ , ಚಿತ್ರ
ಪ್ರಸಾದ್ ಶೆಟ್ಟಿ ಹೊಸಮನೆ, ನಂದಿನಿ
ಪ್ರದಿಪ್ ಶೆಟ್ಟಿ ಬಲ್ಲಂಗುಡೇಲ್, ಬಟ್ಯಪ್ಪ
ರೈ ಕರಿಬೈಲ್,ವಿಶ್ವನಾಥ ಆಳ್ವ
ಕರಿಬೈಲ್, ಆನಂದ ಆಳ್ವ ಮಾಟೆ
ಶಾಲು ಇವರು ಹೊದೆಸಿ ಸ್ವಾಗತಿಸಿದ್ದರು.
ಸಭೆಯ ನೆತೃತ್ವವನ್ನು ಕಾರ್ತಿಕ್ ಶೆಟ್ಟಿ ಮಜಿಬೈಲ್,ಉದಯ
ಕುಮರ್ ಶೆಟ್ಟಿ ಕರಿಬೈಲ್, ವಿಜಯ್
ಕುಮರ್ ಶೆಟ್ಟಿ ಗಾಣದಮೂಲೆ, ಪ್ರದಿಪ್
ಶೆಟ್ಟಿ ಬಲ್ಲಂಗುಡೆಲ್, ರಾಜರಾಮ ಆಳ್ವ ಕರಿಬೈಲ್,
ಸುದಕಾರ ಶೆಟ್ಟಿ ಕುಂಬೆಹಿತ್ಲು, ಸತೀಶ್
ಶೆಟ್ಟಿ ಕರಿಬೈಲ್ ವಹಿಸಿದ್ದರು. ಅಣ್ಣಪ್ಪ
ಹೆಗ್ಡೆ ಕರಿಬೈಲ್
ಸ್ವಾಗತಿಸಿ, ಶ್ರೀಮತಿ ವಿನೂತ ಉದಯ
ಕುಮರ್ ಶೆಟ್ಟಿ ಕರಿಬೈಲ್ ದನ್ಯವಾದವಿತ್ತರು.
ಬಂಟರ ಯಾನೆ ನಾಡವರ ಮಾತೃ
ಸಂಘ (ರಿ) ಮತ್ತು ಮಹಿಳಾ
ವಿಭಾಗ-ಶಕ್ತಿ ಅರ್ಪಿಸುವ ಅಂತರ್
ಜಿಲ್ಲಾ ಬಂಟ ಮಹಿಳೆಯರ ಸಮಾಗಮ
"ಶಕ್ತಿ ಸಂಗಮ"ಜ.26 ರಂದು ವಿವಿಧ
ಆಟೋಟ ಸ್ಪರ್ದೆ, ವಿವಿಧ ವಿನೋದಾವಳಿ, ಆಹಾರ
ಮೇಳ, ವಸ್ತುಪ್ರದರ್ಶನಗಳ ಸಂಗಮದೊಂದಿಗೆ
ಜರಗಲಿದೆ. ವರದಿ: ವಿಜಯ ಕುಮರ್ ಶೆಟ್ಟಿ
ಗಾಣದಮೂಲೆ