ಡಾ. ಶಾಂತಾರಾಂ ಶೆಟ್ಟಿ ಅವರಿಗೆ “ಕರಾವಳಿ ಗೌರವ ಪ್ರಶಸ್ತಿ 2017” - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಡಾ. ಶಾಂತಾರಾಂ ಶೆಟ್ಟಿ ಅವರಿಗೆ “ಕರಾವಳಿ ಗೌರವ ಪ್ರಶಸ್ತಿ 2017”

Share This
ಬಂಟ್ಸ್ ನ್ಯೂಸ್ ವಲ್ಡ್, ಮಂಗಳೂರು: ವ್ಯಕ್ತಿ ಎಷ್ಟೇ ಮೇಲಕ್ಕೇರಿದರೂ ಸಮಾಜದ ಋಣ ಅವನ ಮೇಲಿದ್ದು, ಅದನ್ನು ತೀರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಖ್ಯಾತ ವೈದ್ಯ ಡಾ.ಶಾಂತರಾಂ ಶೆಟ್ಟಿ ತಿಳಿಸಿದ್ದಾರೆ.
ಕಳೆದ 10 ದಿನಗಳಿಂದ ನಡೆದ  ಕರಾವಳಿ ಉತ್ಸವ ಸಮಾರೋಪ ಪ್ರಯುಕ್ತ ಪಣಂಬೂರು ಕಡಲಕಿನಾರೆಯಲ್ಲಿ ನಡೆದ ಸಮಾರಂಭದಲ್ಲಿ ಕರಾವಳಿ ಗೌರವ ಪ್ರಶಸ್ತಿ 2017 ಸ್ವೀಕರಿಸಿ ಅವರು  ಮಾತನಾಡಿದರು. ಕರಾವಳಿ ಗೌರವ ಪ್ರಶಸ್ತಿ ಸ್ವೀಕರಿಸುವುದು ತನಗೆ ಅತೀವ ಸಂತೋಷ ತಂದಿದೆ. ಸಾಕಷ್ಟು ವಿದ್ಯಾಸಂಸ್ಥೆಗಳ ಮೂಲಕ ದೇಶದಲ್ಲೇ ಖ್ಯಾತಿಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತನ್ನ ಸೇವೆ ಅತ್ಯಲ್ಪವಾಗಿದ್ದು, ಕರಾವಳಿ ಗೌರವ ಪ್ರಶಸ್ತಿಯು ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು.

ಮಂಗಳೂರು ನಗರವು ಅಭಿವೃದ್ಧಿ ಹಾಗೂ ಶುಚಿತ್ವದಲ್ಲಿ ಇನ್ನಷ್ಟು ಮೇಲಕ್ಕೇರಿ ದೇಶದಲ್ಲಿ ನಂಬರ್ ಒನ್ ಆಗಿ ಬರಬೇಕು ಎಂದು ಡಾ. ಶಾಂತರಾಂ ಶೆಟ್ಟಿ ಹೇಳಿದರು.

ಪ್ರಶಸ್ತಿ ಪ್ರದಾನ ಮಾಡಿದ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಕರಾವಳಿ ಉತ್ಸವವು ಮುಂದಿನ ದಿನಗಳಲ್ಲಿ ಇನ್ನಷ್ಟು ಆಕರ್ಷಯುತವನ್ನಾಗಿ ಆಚರಿಸಲಾಗುವುದು. ಜಿಲ್ಲೆಯಲ್ಲಿ ಎಲ್ಲರೂ ಪರಸ್ಪರ ಸಾಮರಸ್ಯ ದಿಂದ ಜೀವಿಸಿ ಮೇಲಕ್ಕೇರಿಸುವುದು ನಮ್ಮ ಧ್ಯೇಯವಾಗಲಿ ಎಂದು ಹೇಳಿದರು.

ಮಂಗಳೂರು ಉತ್ತರ ಶಾಸಕ ಬಿ.. ಮೊಹಿದೀನ್ ಬಾವಾ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಕವಿತಾ ಸನಿಲ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್. ಖಾದರ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಮತ್ತಿತರರು ಇದ್ದರು.

Pages