ಸುರತ್ಕಲ್‍ನಲ್ಲಿ ಬಂಟರ ಕ್ರೀಡಾಕೂಟ : ಇಡ್ಯಾ ಗ್ರಾಮಕ್ಕೆ ಸಮಗ್ರ ಪ್ರಶಸ್ತಿ - BUNTS NEWS WORLD
ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸುರತ್ಕಲ್‍ನಲ್ಲಿ ಬಂಟರ ಕ್ರೀಡಾಕೂಟ : ಇಡ್ಯಾ ಗ್ರಾಮಕ್ಕೆ ಸಮಗ್ರ ಪ್ರಶಸ್ತಿ

Share This
ಬಂಟ್ಸ್ ನ್ಯೂಸ್ ವಲ್ಡ್, ಸುರತ್ಕಲ್ಸುರತ್ಕಲ್ ಬಂಟರ ಸಂಘ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ತಾಲೂಕು ಸಮಿತಿ ಆಶ್ರಯದಲ್ಲಿ ಗೋವಿಂದದಾಸ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಬಂಟರ ಕ್ರೀಡೋತ್ಸವದಲ್ಲಿ ಇಡ್ಯಾ ಗ್ರಾಮ ಅತೀ ಹೆಚ್ಚು ಅಂಕ ಸಂಪಾದಿಸುವ ಮೂಲಕ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿತು.
ಬಳಿಕ ಕಾಲೇಜು ಕ್ರೀಡಾಂಗಣದ ಆವರಣದಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಬಂಟರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿ ಸಂಚಾಲಕರಾದ ಜಯರಾಮ ಸಾಂತ, ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ, ಸುರೇಶ್ ರೈ ಮಕರ ಜ್ಯೋತಿ, ಉದ್ಯಮಿ ಹರೀಶ್ ಶೆಟ್ಟಿ, ಕೃಷ್ಣರಾಜ ಸುಲಾಯ, ಕಾರ್ಪೋರೇಟರ್ ಗುಣಶೇಖರ ಶೆಟ್ಟಿ ಭಾಗವಹಿಸಿದ್ದರು.

ಕ್ರೀಡಾಕೂಟದಲ್ಲಿ ಸುರತ್ಕಲ್ ಬಂಟರ ಸಂಘದ ವ್ಯಾಪ್ತಿಯ 17 ಗ್ರಾಮಗಳು ಭಾಗವಹಿಸಿತ್ತು. ಇಡ್ಯಾ ಗ್ರಾಮ ಅತೀ ಹೆಚ್ಚಿನ ಅಂಕ ಪಡೆದು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ಇಡ್ಯಾ ತಂಡದ ಪರವಾಗಿ ಲೀಲಾಧರ ಶೆಟ್ಟಿ, ಗುಣಶೇಖರ ಶೆಟ್ಟಿ ದೇವೇಂದ್ರ ಶೆಟ್ಟಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ಸಮಾರಂಭದಲ್ಲಿ ಸಂಘದ ಅಧ್ಯಕ್ಷ  ಉಲ್ಲಾಸ್ ಶೆಟ್ಟಿ, ಉಪಾಧ್ಯಕ್ಷ ಸುಧಾಕರ ಪೂಂಜ, ಕಾರ್ಯದರ್ಶಿ ಸೀತಾರಾಮ ರೈ , ಜತೆ ಕಾರ್ಯದರ್ಶಿ  ಜಯರಾಮ ಶೆಟ್ಟಿ, ಕೋಶಾಧಿಕಾರಿ ಪ್ರವೀಣ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ದೇವೇಂದ್ರ ಶೆಟ್ಟಿ, ಮಹಿಳಾ ವೇದಿಕೆಯ  ಅಧ್ಯಕ್ಷೆ ಚಂದ್ರಕಲಾ ಶೆಟ್ಟಿ ಉಪಸ್ಥಿತರಿದ್ದರು. ರಾಜೇಶ್ವರಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Pages