ಬೆಂಗಳೂರು ಬಂಟರ ಸಂಘದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ: ಜಯಕರ್ನಾಟಕ ತಂಡಕ್ಕೆ ಜಯ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬೆಂಗಳೂರು ಬಂಟರ ಸಂಘದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ: ಜಯಕರ್ನಾಟಕ ತಂಡಕ್ಕೆ ಜಯ

Share This
ಬಂಟ್ಸ್ ನ್ಯೂಸ್ ವಲ್ಡ್, ಬೆಂಗಳೂರು: ಬಂಟರ ಪ್ರತಿಭೆಯನ್ನು ಪ್ರದರ್ಶಿಸಿಸಲು ಸುಂದರವಾದ ವೇದಿಕೆಯ ಕನಸನ್ನು ಹೊತ್ತ ಬೆಂಗಳೂರು ಬಂಟರ ಸಂಘದ ಕ್ರೀಡಾಧ್ಯಕ್ಷ ಸುರೇಂದ್ರ ಶೆಟ್ಟಿ ಕೆ ಅವರು ಕಳೆದ ವರ್ಷ ಕ್ರೀಡಾ ಸಮಿತಿಯೊಂದಿಗೆ ಸೇರಿ ಸತತ ಪ್ರಯತ್ನದಿಂದ ಮೊದಲು ಬಾರಿಗೆ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಹುಟ್ಟು ಹಾಕಿದರು. ಸತತವಾಗಿ ಎರಡನೇ ವರ್ಷವೂ ಕೂಡ ಅತ್ಯಂತ ವೈಭವದಿಂದ ಶನಿವಾರ ಬಂಟರ ಸಂಘ ಬೆಂಗಳೂರಿನ ಆವರಣದಲ್ಲಿ ಸುರೇಂದ್ರ ಶೆಟ್ಟಿ ಯವರ ನೇತೃತ್ವದಲ್ಲಿ ಜರುಗಿತು.
ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಬಂಟರ ಸಂಘದ ಅಧ್ಯಕ್ಷ  ಚಂದ್ರಹಾಸ ರೈ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬೆಂಗಳೂರು ನಗರ ಡಿಎಸ್ಪಿ ಮುಧಾವಿಯವರು ಆಗಮಿಸಿದ್ದರು. ಬಂಟರ ಸಂಘದ ಕಾರ್ಯದರ್ಶಿ ಸಂತೋಷ ಶೆಟ್ಟಿಯವರು ಆಟಗಾರರಿಗೆ  ಶುಭ ಹಾರೈಸಿದರು. ಕ್ರೀಡಾ ಚೇರ್ಮನ್ ಸುರೇಂದ್ರ ಶೆಟ್ಟಿ ಸ್ವಾಗತಿಸಿದರು. ಕಾರ್ಪೊರೇಟರ್ ಉಮೇಶ್ ಶೆಟ್ಟಿಯವರು ಆಗಮಿಸಿ ಶುಭ ಹಾರೈಸಿದರು.
ಪಂದ್ಯಾವಳಿಯಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವಾಲಿಬಾಲ್ ಪಟುಗಳು ಭಾಗವಹಿಸಿದ್ದರು. ಜಯಕರ್ನಾಟಕ ತಂಡವು ಪಂದ್ಯಾವಳಿಯಲ್ಲಿ ಜಯ ಗಳಿಸಿತು. ಸೂರಾಲ್ ವಾರಿಯರ್ಸ್ತಂಡವು ರನ್ನರ್ಸ್ ಅಪ್ ಪ್ರಶಸ್ತಿ ಪಡೆಯಿತು. ಮಹಿಳೆಯರು ವಿಭಾಗದಲ್ಲಿ ಬಂಟ್ಸ್ ಸೋಲಾರ್ ಪ್ರಥಮ ಸ್ಥಾನ ಹಾಗೂ ಎಸ್.ಕೆ.ಎಪ್ ದ್ವೀತಿಯ ಸ್ಥಾನ  ಪಡೆದಿದೆ.
ಇನ್ನುಳಿದಂತೆ ಹಗ್ಗ ಜಗ್ಗಾಟ, ಗುಂಡು ಎಸೆತ, ಉದ್ದ ಜಿಗಿತ ಇನ್ನಿತರ ಅನೇಕ ಕ್ರೀಡೆಗಳನ್ನು ಎರ್ಪಡಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಭಾಗವಹಿಸಿದ್ದರು.

Pages