ತುಳುನಾಡಿನ ಕೊರಗಜ್ಜ ದೈವಕ್ಕೆ ಅಪಹಾಸ್ಯ ಮಾಡಿದ್ದ “ಮನೋಜ್ ಪಂಡಿತ್”ನಿಂದ ದೈವ ಸನ್ನಿಧಿಯಲ್ಲಿ ಕ್ಷಮಾ ಯಾಚನೆ - BUNTS NEWS WORLD

ತುಳುನಾಡಿನ ಕೊರಗಜ್ಜ ದೈವಕ್ಕೆ ಅಪಹಾಸ್ಯ ಮಾಡಿದ್ದ “ಮನೋಜ್ ಪಂಡಿತ್”ನಿಂದ ದೈವ ಸನ್ನಿಧಿಯಲ್ಲಿ ಕ್ಷಮಾ ಯಾಚನೆ

Share This
ಬಂಟ್ಸ್ ನ್ಯೂಸ್ ವಲ್ಡ್, ಮಂಗಳೂರು: ತುಳುನಾಡಿನ ಆರಾಧ್ಯ ದೈವ ಸ್ವಾಮಿ ಕೊರಗಜ್ಜನಿಗೆ ಫೇಸ್’ಬುಕ್ ಸಾಮಾಜಿಕ ತಾಣದಲ್ಲಿ ಅಪಹಾಸ್ಯ ಮಾಡಿ ವಿಕೃತಿ ಮೆರೆದಿದ್ದ ಮನೋಜ್ ಪಂಡಿತ್ ಇದೀಗ ಮಂಗಳೂರಿನ ಕೊರಗಜ್ಜ ಸನ್ನಿಧಿಗೆ ತೆರಳಿ ಹರಕೆಯೊಪ್ಪಿಸಿ ಕ್ಷಮೆ ಯಾಚಿಸಿದ್ದಾನೆ.
ತಿಂಗಳ ಹಿಂದಷ್ಟೇ ಮನೋಜ್ ಪಂಡಿತ್ ತನ್ನ ನಕಲಿ ಫೇಸ್’ಬುಕ್ ಐಡಿ ಮೂಲಕ ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಬಗ್ಗೆ ಅವಹೇಳನಕಾರಿಯಾಗಿ, ಕೀಳಾಗಿ ಅಪಹಾಸ್ಯ ಮಾಡಿ ಪೋಸ್ಟ್ ಮಾಡಿದ್ದ. ಇದಾದ ಕೆಲವೇ ದಿನಗಳಲ್ಲೇ ಈತನನ್ನು ಪೊಲೀಸರು ಬಂಧಿಸಿ ಷರತ್ತಿನ ಮೇಲೆ ಬಿಡುಗಡೆಗೊಳಿಸಿದ್ದರು.

ನಂತರದ ದಿನಗಳಲ್ಲಿ ಆತನ ತಾಯಿ ಅನಾರೋಗ್ಯಕ್ಕೆ ಒಳಗಾಗಿದ್ದು ತನ್ನ ತಪ್ಪಿನಿಂದ ಈ ರೀತಿಯಾಗಿದೆ, ನಾನು ದೈವ ನಿಂದನೆ ಮಾಡಿರುವುದಕ್ಕೆ ಕ್ಷಮೆ ಯಾಚನೆಗೆ ಸಿದ್ಧರಿರುವುದಾಗಿ ಹೇಳಿಕೆ ನೀಡಿದ್ದ. ಇದೀಗ ವಜ್ರದೇಹಿ ಶ್ರೀಗಳ ಸಾರತ್ಯದ  ಹಿಂದೂ ಸಂರಕ್ಷಣಾ ಸಮಿತಿಯ ಸದಸ್ಯರ ಉಪಸ್ಥಿತಿಯಲ್ಲಿ ಕೊರಗಜ್ಜ ಕ್ಷೇತ್ರಕ್ಕೆ ಬಂದು ಹರಕೆ ಒಪ್ಪಿಸಿ ಕ್ಷಮೆ ಯಾಚಿಸಿದ್ದಾನೆ.

Pages