ಬಂಟ್ಸ್ ನ್ಯೂಸ್ ವಲ್ಡ್, ಸುರತ್ಕಲ್:
'ಇತಿಹಾಸವನ್ನು ಮರೆತವರು ಇತಿಹಾಸ ನಿರ್ಮಿಸಲು
ಸಾಧ್ಯವಿಲ್ಲ. ಆದರೆ ದಕ್ಷಿಣ ಕನ್ನಡ
ಜಿಲ್ಲೆಯ ಜನತೆ ಇತಿಹಾಸವನ್ನು ಮರೆತಿಲ್ಲದ
ಕಾರಣ ಸಾಧನೆ ಇಲ್ಲಿ ಆಗುತ್ತಿದೆ.
ಸಾಂಸ್ಕೃತಿಕ ರಂಗ ಚಟುವಟಿಕೆಗೆ ಪ್ರೋತ್ಸಾಹ
ಸಿಗುತ್ತಿದೆ. ಸಮಗ್ರ ಕರ್ನಾಟಕಕ್ಕೆ ದ.ಕ. ಜಿಲ್ಲೆಯ ಜನತೆ
ಮಾದರಿಯಾಗಿದ್ದಾರೆ' ಎಂದು ಕರ್ನಾಟಕ ಕಾರ್ಯನಿರತ
ಪತ್ರಕರ್ತರ ಸಂಘದ ಅಧ್ಯಕ್ಷ ಎನ್
ರಾಜು ಹೇಳಿದರು.
ಅವರು ದ.ಕ. ಜಿಲ್ಲಾ
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ
ಶೆಟ್ಟಿ ಬಾಳ ಅವರ ನಾಲ್ಕನೇ
ಪರಿಚಯಾತ್ಮಕ ತುಳು ಸಿನಿಮಾವಲೋಕನ ಗ್ರಂಥ
ಬಿಡುಗಡೆಗೊಳಿಸಿ ಮಾತಾಡುತ್ತಿದ್ದರು. ಸುರತ್ಕಲ್ ಬಂಟರ ಸಂಘದಲ್ಲಿ ನಿನ್ನೆ
ಸಂಜೆ ನಡೆದ ಸಾಹಿತ್ಯ, ಸಾಂಸ್ಕೃತಿಕ
ಸಂಘಟನೆ 'ರಂಗ ಚಾವಡಿ' ವಾರ್ಷಿಕ
ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಯಾಯಿತು.
ಈ ಸಾಲಿನ ರಂಗ ಚಾವಡಿ
ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಮನೋಹರ್
ಪ್ರಸಾದ್ ಅವರಿಗೆ ನೀಡಿ ಸನ್ಮಾನಿಸಲಾಯಿತು.
ಬಂಟರ ಯಾನೆ ನಾಡವರ ಮಾತೃ
ಸಂಘದ ಅಧ್ಯಕ್ಷ ಅಜಿತ್ ಕುಮಾರ್
ರೈ ಮಾಲಾಡಿ ಸನ್ಮಾನ ಮಾಡಿದರು.
ಕದ್ರಿ ನವನೀತ ಶೆಟ್ಟಿ ಸನ್ಮಾನಿತರ
ಪರಿಚಯವನ್ನು ಮಾಡಿದರು. ಸನ್ಮಾನಕ್ಕೆ ಉತ್ತರವಾಗಿ ಮಾತನಾಡುತ್ತಾ ಮನೋಹರ್ ಪ್ರಸಾದ್ ಅವರು,
'ನಮ್ಮಲ್ಲಿ ಇಂದು ನಗು ಮಾಯವಾಗಿದೆ.
ಇದಕ್ಕೆ ನಮ್ಮ ಕುಟುಂಬ ಪದ್ಧತಿ
ಮಾಯವಾಗಿರುವುದೇ ಕಾರಣ. ಇದರಿಂದಾಗಿ ನಮ್ಮಲ್ಲಿ
ಮರೆಗುಳಿತನದಂತಹ ರೋಗ ಜಾಸ್ತಿಯಾಗುತ್ತಿದೆ ಎಂದು
ಹೇಳಿದರು.
ಪ್ರೀತಿ
ವಿಶ್ವಾಸದಿಂದ ಕೂಡಿದ್ದ ಕೌಟುಂಬಿಕ ಮೌಲ್ಯಗಳನ್ನು
ಮರಳಿ ತರಲು ಯತ್ನಿಸಬೇಕಾಗಿದೆ. ಆದರೆ
ಆಧುನಿಕತೆಯ ಪ್ರಭಾವದಿಂದ ಅದು ಸಾಧ್ಯವಾಗುತ್ತಿಲ್ಲ ಎಂದು
ಅಭಿಪ್ರಾಯ ವ್ಯಕ್ತಪಡಿಸಿದರು. ಪತ್ರಕರ್ತ ಪಿ.ಬಿ ಹರೀಶ್
ರೈ ಸಿನಿಮಾವಲೋಕನ ಗ್ರಂಥದ ಪರಿಚಯವನ್ನು ಮಾಡಿಕೊಟ್ಟರು.
ವಿ.ಜಿ.ಪಾಲ್ ಪ್ರಸ್ತಾವನೆಗೈದರು.
ಪುಸ್ತಕ
ಬಿಡುಗಡೆ ಮಾಡಿದ ಆಳ್ವಾಸ್ ಸಂಸ್ಥೆಯ
ಅಧ್ಯಕ್ಷ ಡಾ. ಮೋಹನ್ ಆಳ್ವಾ,
ಜಗನ್ನಾಥ ಶೆಟ್ಟಿಯವರ ಸಾಧನೆಯನ್ನು ಪ್ರಶಂಸಿಸುತ್ತಾ, ಬಾಳರವರು ಎಲೆಮರೆಯ ಕಾಯಿಯಂತೆ
ತನ್ನ ಕೆಲಸವನ್ನು ಅಚ್ಚು ಕಟ್ಟಾಗಿ ಮಾಡುತ್ತಿದ್ದಾರೆ.
ಸಾಮಾಜಿಕ ಜವಾಬ್ದಾರಿ, ಸಮಾಜವನ್ನು ಕಟ್ಟುವ ಕೆಲಸವನ್ನು ಇವರು
ಮಾಡುತ್ತಿದ್ದಾರೆ. ಅಜಾತ ಶತ್ರುವಾಗಿರುವ ಬಾಳರವರಿಂದ
ಇನ್ನಷ್ಟು ಸಾಧನೆಯಾಗಲಿ ಎಂದು ಹಾರೈಸಿದರು.
ಅಜಿತ್ಕುಮಾರ್ ರೈ ಮಾಲಾಡಿ, ರಾಮ್ ಶೆಟ್ಟಿ, ಎ. ಬದ್ರಿನಾಥ್ ಕಾಮತ್, ಪ್ರಕಾಶ್ ಪಾಂಡೇಶ್ವರ, ಎಂ. ದೇವಾನಂದ ಶೆಟ್ಟಿ, ಯಾದವ ಕೋಟ್ಯಾನ್ ಪೆರ್ಮುದೆ, ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ, ರಮಾನಾಥ ಶೆಟ್ಟಿ ಮದ್ಯ, ಎ. ಶಿವಾನಂದ ಕರ್ಕೇರ, ಕಾಪೆರ್Çೀರೇಟರ್ಗಳಾದ ಪ್ರತಿಭಾ ಕುಳಾಯಿ, ಅಶೋಕ್ ಶೆಟ್ಟಿ ತಡಂಬೈಲ್, ತಮ್ಮ ಲಕ್ಷ್ಮಣ, ಸಂಘಟಕ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು. ಕರ್ನೂರು ಮೋಹನ ರೈ ಸ್ವಾಗತಿಸಿದರು, ಕು. ಬಿಂದಿಯಾ ಪ್ರಾರ್ಥಿಸಿದರು. ನರೇಶ್ ಸಸಿಹಿತ್ಲು ನಿರೂಪಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ವಂದಿಸಿದರು. ಬಳಿಕ ಪ್ರಸಂಸ ತಂಡ ಕಾಪು ಇವರಿಂದ ಬಲೆ ತೆಲಿಪುಲೆ ಕಾರ್ಯಕ್ರಮ ಮತ್ತು ನಿಶಾಂತ್ ರೈ ಮಠಂತಬೆಟ್ಟು ಇವರಿಂದ ಗಾನ ವೈಭವ ಕಾರ್ಯಕ್ರಮ ಜರಗಿತು