ನ.22-23 ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ ವರ್ಷಾವಧಿ ಕೋಲ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ನ.22-23 ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ ವರ್ಷಾವಧಿ ಕೋಲ

Share This
ಬಂಟ್ಸ್ ನ್ಯೂಸ್ ವಲ್ಡ್, ಬಂಟ್ವಾಳ: ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದ ವರ್ಷಾವಧಿ ಕೋಲವು ಇದೇ ನ.22-23ರಂದು ನಡೆಯಲಿದೆ.
ನ.22ರ  ಬುಧವಾರ ಸಂಜೆ ಗಂಟೆ 5.59 ಕ್ಕೆ ಕೊಪ್ಪರಿಗೆ ಮುಹೂರ್ತ ನಡೆಯಲಿದೆ. ಸಂಜೆ ಗಂಟೆ 6.00ರಿಂದ ಭಜನೆ " ಶ್ರೀ ಕೃಷ್ಣಾ ಭಜನಾ ಮಂದಿರ " ಪಣೋಲಿಬೈಲು. ಸಂಜೆ ಗಂಟೆ 6.30ರಿಂದ 8.00 ತನಕ : ನೃತ್ಯ  ಸುಧಾ ಮಂಗಳೂರು, ವಿದುಷಿ ಶ್ರೀಮತಿ ಸೌಮ್ಯ ಸುಧೀಂದ್ರ ರಾವ್ ಇವರಿಂದ "ಭರತನಾಟ್ಯ ಮತ್ತು ನೃತ್ಯ ವೈಭವ"

ರಾತ್ರಿ ಗಂಟೆ 8.00 ರಿಂದ  9.00 ತನಕ : ಅಮ್ಮ ಡ್ಯಾನ್ಸ್ಗ್ರೂಪ್ ಮಾರ್ನಬೈಲ್ ಇದರ " ಮಕ್ಕಳಿಂದ ಡ್ಯಾನ್ಸ್ ಕಾರ್ಯಕ್ರಮ "ರಾತ್ರಿ ಗಂಟೆ 9.00  ರಿಂದ 12.00 ತನಕ : . ಕಿಶೋರ್ ಡಿ. ಶೆಟ್ಟಿ ನಿರ್ದೇಶನದಲ್ಲಿ ಲಕುಮಿ ತಂಡದ ಕುಸಲ್ದ ಕಲಾವಿದರು ಅಭಿನಯಿಸುವ  ತುಳು ಹಾಸ್ಯಮಯ ಸಾಮಾಜಿಕ ನಾಟಕ "ಒವೂಲ ಒಂತೆ ದಿನಾನೇ" ಸಂಗೀತ : ನಾಗರ್ಜುನ್ ಮಂಗಲ್ಪಾಡಿ ರಚನೆ: ತುಳಸಿದಾಸ್ ಮಂಜೇಶ್ವರ

ನ.23 ಗುರುವಾರ ಬೆಳಿಗ್ಗೆ ಗಂಟೆ 9.00ರಿಂದ : ನವಕ, ಕಲಶ ಪ್ರಧಾನ ಮತ್ತು 12 ತೆಂಗಿನ ಕಾಯಿಯ ಗಣಹೋಮ, ಬೆಳಿಗ್ಗೆ ಗಂಟೆ 11.00 ರಿಂದ : ನಾಗತಂಬಿಲ, ಮಧ್ಯಾಹ್ನ ಗಂಟೆ 1.00 ರಿಂದ : ಸಾರ್ವಜನಿಕ ಅನ್ನಸಂತರ್ಪಣೆ, ಅಪರಾಹ್ನ ಗಂಟೆ 2.30 ರಿಂದ : ಶ್ರೀ ಅಯ್ಯಪ್ಪ ಬಯಲಾಟ ಸೇವಾ ಸಮಿತಿ ಪಣೋಲಿಬೈಲು ಇವರಿಂದ " ಭಜನಾ ಕಾರ್ಯಕ್ರಮ ", ಅಪರಾಹ್ನ ಗಂಟೆ 3.30 ರಿಂದ : ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ಭಜನಾ ಮಂಡಳಿ ಇವರಿಂದ "ಭಜನೆ", ಅಪರಾಹ್ನ ಗಂಟೆ 4.30ರಿಂದ : ಗೌರಿ ಗಣೇಶ ಭಜನಾ ಮಂಡಳಿ, ತೊಕ್ಕೊಟ್ಟು ಇವರಿಂದ " ಭಜನಾ ಕಾರ್ಯಕ್ರಮ "

ಸಂಜೆ ಗಂಟೆ 5.30 ರಿಂದ ಶ್ರೀ ಕೃಷ್ಣ ಭಜನಾ ಮಂದಿರ ಕುಡುಮೂನ್ನೂರು  ಇವರಿಂದ "ಭಜನಾ ಕಾರ್ಯಕ್ರಮ" ಸಂಜೆ 6.00ರಿಂದ 7.00 ತನಕ : ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ "ಭಜನೆ" ರಾತ್ರಿ ಗಂಟೆ 7.00ಕ್ಕೆ: ಶ್ರೀ ಕೃಷ್ಣ ಭಜನಾ ಮಂದಿರ ಪಣೋಲಿಬೈಲ್ ನಿಂದ "ಶ್ರೀ ಕ್ಷೇತ್ರಕ್ಕೆ ಮೆರವಣಿಗೆ" ರಾತ್ರಿ ಗಂಟೆ 7.00ರಿಂದ 10.30 ತನಕ : ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಬಯಲಾಟ "ಮೋಕ್ಷ ಸಂಗ್ರಾಮ" ಭಾಗವತರು : ಶ್ರೀ ರವಿಚಂದ್ರ ಕನ್ನಡಿಕಟ್ಟೆ, ಶ್ರೀ ಸತೀಶ್ ಶೆಟ್ಟಿ ಪಟ್ಲ. ಚೆಂಡೆ - ಮದ್ದಳೆ : ದೇಲಂತಮಜಲು ಸುಬ್ರಹ್ಮಣ್ಯ ಭಟ್, ಪದ್ಮನಾಭ ಉಪಾಧ್ಯಾ

ರಾತ್ರಿ ಗಂಟೆ 10.30 ರಿಂದ 11.30 ತನಕ: ತುಳು ಅಪ್ಪೆ ಕಲಾವಿದರು ಬಂಟ್ವಾಳ ಇವರಿಂದ " ಸಾಂಸ್ಕೃತಿಕ ಕಾರ್ಯಕ್ರಮ" ರಾತ್ರಿ 11.30 ರಿಂದ 1.00 ತನಕ: ನಮ್ಮ ಟಿವಿ ಬಲೆ ತೆಲಿಪಾಲೆ ಖ್ಯಾತಿದ ಪ್ರಶಸ್ತಿ ವಿಜೇತ ಮಸ್ಕಿರಿ ಕುಡ್ಲ ತಂಡೊದ ತುಳುನಾಡ ಕಲಾಬಿರ್ಸೆ ದೀಪಕ್ ರೈ ಪಾಣಾಜೆ, ಜೆ.ಪಿ ತೂಮಿನಾಡು, ರಾಜೇಶ್ ಮುಗುಳಿ, ಪ್ರಕಾಶ್ ತೂಮಿನಾಡು  "ತೆಲಿಕೆ ಬಂಜಿ ನಿಲಿಕೆ" ರಾತ್ರಿ ಗಂಟೆ 1.00ಕ್ಕೆ ಸದ್ರಿ ಕ್ಷೇತ್ರದಲ್ಲಿ ವರ್ಷಾವಧಿ ಕೋಲವು  ಜರಗಲಿರುವುದು.

Pages