ತುಳುನಾಟಕ ಕಲಾವಿದರ ಒಕ್ಕೂಟ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ತುಳುನಾಟಕ ಕಲಾವಿದರ ಒಕ್ಕೂಟ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ

Share This
ಮಂಗಳೂರು: ತುಳುನಾಟಕ ಕಲಾವಿದರ ಒಕ್ಕೂಟ (ರಿ) ಮಂಗಳೂರು ಇದರ 2016-17 ನೇ ಸಾಲಿನ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಕದ್ರಿಯ ಗೋಕುಲ್ ಸಭಾ ಭವನದಲ್ಲಿ .ಕಿಶೋರ್ ಡಿ.ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಕುಮಾರ್ ಮಲ್ಲೂರ್ರವರು ಸ್ವಾಗತಿಸಿ, 2016-17ನೇ ಸಾಲಿನ Àರದಿ ಮಂಡಿಸಿದರು. ಕೋಶಾಧಿಕಾರಿ ಮೋಹನ ಕೊಪ್ಪಲ ಕದ್ರಿ ಲೆಕ್ಕಪತ್ರ ಮಂಡಿಸಿದರು. 2017-18 ಮತ್ತು 2018-19ನೇ ಸಾಲಿಗೆ ಪದಾಧಿಕಾರಿಗಳನ್ನು ಹಾಗೂ ಕಾರ್ಯಸಮಿತಿಗೆ ಸದಸ್ಯರನ್ನು ಆರಿಸಲಾಯಿತು.

.ಕಿಶೋರ್ ಡಿ.ಶೆಟ್ಟಿಯವರು ಅಧ್ಯಕ್ಷರಾಗಿ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಗೋಕುಲ್ ಕದ್ರಿ .ಶಿವಾನಂದ ಕರ್ಕೇರಾ ಮತ್ತು  ವಸಂತಿ ಜೆ.ಪೂಜಾರಿಯವರು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮಣ ಕುಮಾರ್ ಮಲ್ಲೂರು, ಕೋಶಾಧಿಕಾರಿಯಾಗಿ ಮೋಹನ ಕೊಪ್ಪಲ ಕದ್ರಿ, ಕ್ಷೇಮನಿಧಿ ಸಂಚಾಲಕರಾಗಿ ಪ್ರದೀಪ್ ಆಳ್ವ ಕದ್ರಿ ಪುನರಾಯ್ಕೆಯಾದರು, ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಕುಂಪಲ ಮತ್ತು ಶೋಭಾ ಶೆಟ್ಟಿಯವರನ್ನು ಆರಿಸಲಾಯಿತು. ವಿ.ಜಿ.ಪಾಲ್ ಮತ್ತು ಕಮಲಾಕ್ಷ ಶೆಟ್ಟಿಯವರನ್ನು ಸಲಹೆಗಾರರನ್ನಾಗಿ ಆರಿಸಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಶಿಧರ ಶೆಟ್ಟಿ ನಿಟ್ಟೆ, ತಾರಾನಾಥ ಶೆಟ್ಟಿ ಬೋಳಾರ, ಸಂಜೀವ ಅಡ್ಯಾರ್, ಶರ್ಮಿಳಾ ತೇಜ್ಪಾಲ್, ರಾಜೀವ ಶೆಟ್ಟಿ ಸಲ್ಲಾಜೆ, ನಾಗೇಶ್ ದೇವಾಡಿಗ ಕದ್ರಿ, ಮೋಹನ್ ಕೆ.ಬೋಳಾರ್, ಅಶ್ವಿನಿ ರೈ, ಭಾಸ್ಕರ ಕುಲಾಲ್ ಬರ್ಕೆ, ಶೇಖರ ಶೆಟ್ಟಿ ಹೊಯಿಗೆಬೈಲು, ಮನೋಜ್ ಅತ್ತಾವರ್, ದಿನೇಶ್ ಅತ್ತಾವರ್, ನಾಗೇಶ್ ಕುಲಾಲ್, ಕ್ಯಾಲಿ ಡಿ.ಎಸ್, ರಂಜನ್ ಬೋಳೂರು ಇವರನ್ನು ಆರಿಸಲಾ ಯಿತು.

ಅಧ್ಯಕ್ಷರಾದ ಕಿಶೋರ್ ಡಿ.ಶೆಟ್ಟಿಯವರು ಒಕ್ಕೂಟದ ಕಾರ್ಯಕಲಾಪಗಳ ಬಗ್ಗೆ ಸದಸ್ಯರ ಸಹಕಾರವನ್ನು ಯಾಚಿಸುತ್ತಾ, ನೆಂಪು ಕಾರ್ಯಕ್ರಮದಲ್ಲಿ ಸ್ಮರಿಸಬೇಕಾದ ಕೀರ್ತಿಶೇಷ ಕಲಾವಿದರ ವಿವರ ಗಳನ್ನು, ಸನ್ಮಾನಕ್ಕೆ ಅರ್ಹರಿರುವ ಕಲಾವಿದರ ತಂತ್ರಜ್ಞರ ವಿವರಗಳನ್ನು ಹಾಗೂ ಅಶಕ್ತ ಕಲಾವಿದರು ಆರ್ಥಿಕ ನೆರವು ಅಪೇಕ್ಷಿಸುವವರ ವಿವರಗಳನ್ನು ಮುಂಚಿತವಾಗಿ ಒಕ್ಕೂಟಕ್ಕೆ ತಿಳಿಸುವಂತೆ ಸದಸ್ಯರಲ್ಲಿ ಕೋರಿದರು. ಕ್ಷೇಮನಿಧಿ ಸಂಚಾಲಕರಾದ ಪ್ರದೀಪ್ ಆಳ್ವ ಕದ್ರಿ ವಂದಿಸಿದರು.

Pages