ಬಂಟ್ಸ್ ನ್ಯೂಸ್ ವಲ್ಡ್, ಮಂಗಳೂರು: ಬಂಟರ ಯಾನೆ ನಾಡವರ
ಮಾತೃಸಂಘವು ನವದೆಹಲಿಯ ಪ್ರಖ್ಯಾತ IAS ತರಬೇತಿ ಸಂಸ್ಥೆ
ಚಾಣಕ್ಯ ಅಕಾಡಮಿ ಇವರ ಸಹಯೋಗದೊಂದಿಗೆ
(UPSC)ಕೇಂದ್ರಿಯ ಲೋಕಸೇವಾ ಆಯೋಗದ IAS,
IFS, IPS, ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ
ಭಾಗವಹಿಸುವಂತೆ ಪ್ರೇರಣೆ ನೀಡಲು ಮತ್ತು
ಈ ಬಗ್ಗೆ ಮಾಹಿತಿ
ನೀಡಲು ಉಚಿತವಾಗಿ ಸೆಮಿನಾರನ್ನು ಸೆ.18ರಂದು ಮಂಗಳೂರಿನ
ಟೌನ್ಹಾಲ್ನಲ್ಲಿ ಬೆಳಿಗ್ಗೆ
ಗಂಟೆ 10.00ರಿಂದ ಮಧ್ಯಾಹ್ನ 2.00ಗಂಟೆಯವರೆಗೆ
ನಡೆಸಲಿದೆ.
ಸಕ್ಸಸ್
ಗುರು ಖ್ಯಾತಿವೆತ್ತ ಶ್ರೀ ಎ.ಕೆ
ಮಿಶ್ರರವರು ಈ ಸೆಮಿನಾರನ್ನು ನಡೆಸಿಕೊಡಲಿದ್ದಾರೆ.
IAS, IFS, IPS, ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ
ಹಾಜರಾಗಲು ಆಸಕ್ತಿ ಇರುವ ನಮ್ಮ
ಎರಡು ಜಿಲ್ಲೆಗಳ 45ಕ್ಕಿಂತಲೂ ಹೆಚ್ಚು ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು,
ಪ್ರಾಧ್ಯಾಪಕವರ್ಗ, ಆಡಳಿತಮಂಡಳಿಯವರು ಈ ಸೆಮಿನಾರ್ನಲ್ಲಿ
ಭಾಗವಹಿಸಲಿದ್ದಾರೆ.
ಬೆಳಿಗ್ಗೆ
10.30ಕ್ಕೆ ನಿಟ್ಟೆ ಯೂನಿರ್ವಸಿಟಿಯ ಚಾನ್ಸಲರಾದ
ಡಾ. ಎನ್. ವಿನಯ ಹೆಗ್ಡೆಯವರು
ಈ ಸೆಮಿನಾರನ್ನು ಉದ್ಘಾಟಿಸಲಿದ್ದಾರೆ.
ಗೌರವಾನ್ವಿತ ಅತಿಥಿಗಳಾಗಿ ಅಂಬಾಸಿಡರ್ ಬಾಲಕೃಷ್ಣ ಶೆಟ್ಟಿ, IFS (ನಿವೃತ್ತ), ಎಸ್.ಸಿ. ಪಾಂಡ IAS,
(ನಿವೃತ್ತ) ಮಾಜಿ
ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರಸಾರಭಾರತಿ ಇವರು ಭಾಗವಹಿಸಲಿದ್ದಾರೆ.