ಕರಾವಳಿಯಾದ್ಯಂತ ಪತ್ತನಾಜೆ ತೆರೆಗೆ : ಮಂಗಳೂರಿನಲ್ಲಿ ಪ್ರೀಮಿಯರ್ ಶೋ ಉದ್ಘಾಟನೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕರಾವಳಿಯಾದ್ಯಂತ ಪತ್ತನಾಜೆ ತೆರೆಗೆ : ಮಂಗಳೂರಿನಲ್ಲಿ ಪ್ರೀಮಿಯರ್ ಶೋ ಉದ್ಘಾಟನೆ

Share This
ಮಂಗಳೂರು: ತುಳುನಾಡಿನ ಜನಜೀವನ ಹಾಗೂ ನಂಬಿಕೆ ಆಚರಣೆಗಳ ಕುರಿತಂತೆ ನಿರ್ಮಾಣವಾದ ಪತ್ತನಾಜೆ ಚಿತ್ರ ತುಳು ಚಿತ್ರರಂಗದಲ್ಲಿ ಹೊಸ ಮನ್ವಂತರ ವನ್ನು ದಾಖಲಿಸುವಂತಾಗಲಿ ಎಂದು ಶ್ರೀಕ್ಷೇತ್ರ ಕಟೀಲಿನ ಅರ್ಚಕ ಹರಿನಾರಾಯಣ ಆಸ್ರಣ್ಣ ಹೇಳಿದರು.


ಇಂದಿನಿಂದ ಕರಾವಳಿಯಾದ್ಯಂತ ತೆರೆಕಾಣಲಿರುವ ಡಾ. ತೋನ್ಸೆ ವಿಜಯ್ ಕುಮಾರ್ ಶೆಟ್ಟಿಯವರ ಕಲಾಜಗತ್ತು ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾದ `ಪತ್ತನಾಜೆ' ಚಿತ್ರ ನಗರದ ಬಿಗ್ಸಿನೆಮಾದಲ್ಲಿ ನಡೆದ ಪ್ರೀಮಿಯರ್ ಶೋ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಪತ್ತನಾಜೆ ಎಂಬುದು ತುಳುನಾಡಿನ ಹಿರಿಮೆಯ ಸಂಕೇತ. ಹೆಸರಿನ ಮೂಲಕ ತಯಾರಾದ ಚಿತ್ರ ತುಳುನಾಡು ಹೊರತುಪಡಿಸಿ ಜಗತ್ತಿನ ಮೂಲೆ ಮೂಲೆಗೂ ತಲುಪುವಂತಾಗಬೇಕು ಎಂದು ಆಸ್ರಣ್ಣ ಶುಭ ಹಾರೈಸಿದರು.

ಚಿತ್ರನಟ ರಾಮಕೃಷ್ಣ ಮಾತನಾಡಿ, ಪ್ರಸ್ತುತ ತುಳು ಭಾಷೆಯಲ್ಲಿ ಅದ್ಬುತ ಚಿತ್ರಗಳು ತೆರೆ ಕಾಣುತ್ತಿವೆ. ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ತುಳುಚಿತ್ರಗಳ ಸಾಲಿಗೆ ಪತ್ತನಾಜೆಯೂ ಸೇರ್ಪಡೆಗೊಳ್ಳಲಿ. ಮೂಲಕ ಜಗತ್ತಿನಾದ್ಯಂತ ತುಳು ಭಾಷೆಯ ಚಿತ್ರಗಳು ಪಸರಿಸಲಿ, ಚಿತ್ರವು ಯಶಸ್ವಿಯಾಗಲಿ ಎಂದರು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಮಾಲಾಡಿ, ಪ್ರಮುಖರಾದ ಹರೀಶ್ ಶೆಟ್ಟಿ ಐಕಳ, ಎರ್ಮಾಳ್ ಹರೀಶ್, ಶಾಂತಾರಾಮ ಶೆಟ್ಟಿ, ರಾಜ್ಗೋಪಾಲ್, ಫ್ರಾಂಕ್ಲಿನ್, ಸುರೇಶ್ ಬಾಬು, ಭಾಸ್ಕರ್ ರೈ ಕುಕ್ಕುವಳ್ಳಿ, ಫ್ರಾಂಕ್ ಫೆರ್ನಾಂಡಿಸ್, ದಯಾಸಾಗರ್ ಚೌಟ, ಶಮೀನಾ ಆಳ್ವಾ, ತೋನ್ಸೆ ಪುಷ್ಕಲ್ ಕುಮಾರ್, ರವೀಂದ್ರ ಶೆಟ್ಟಿ, ಸದಾನಂದ ಪೆರ್ಲ, ಚಿತ್ರನಟ ಶಿವಧ್ವಜ್, ನಟ ಸೂರ್ಯರಾವ್, ಪ್ರತೀಕ್ ಶೆಟ್ಟಿ, ನಾಯಕಿ ರೇಷ್ಮಾ ಶೆಟ್ಟಿ, ಕಾಜಲ್, ಚೇತನ್ ರೈ ಮಾಣಿ, ರಮೇಶ್ ಕುಕ್ಕುವಳ್ಳಿ, ಸುಂದರ್ ರೈ ಮಂದಾರ, ಮಂಗೇಶ್ ಭಟ್ ಮುಂತಾದವರು ಉಪಸ್ಥಿತರಿದ್ದರು.

Pages