ತುಳು ಸಂಸ್ಕೃತಿ ರಕ್ಷಣೆ ನಮ್ಮ ಹೊಣೆ: ಡಾ. ಅಶೋಕ್ ಆಳ್ವ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ತುಳು ಸಂಸ್ಕೃತಿ ರಕ್ಷಣೆ ನಮ್ಮ ಹೊಣೆ: ಡಾ. ಅಶೋಕ್ ಆಳ್ವ

Share This

ಸುರತ್ಕಲ್ ಬಂಟರ ಸಂಘದಲ್ಲಿ ಆಟಿದ ಪೊರ್ಲು

ಬಂಟ್ಸ್ ನ್ಯೂಸ್, ಸುರತ್ಕಲ್: ಹಿಂದೆ ತುಳುನಾಡು  ಸಾಂಸ್ಕøತಿಕ , ಪ್ರಾಕೃತಿಕವಾಗಿ ಸಮೃದ್ಧವಾಗಿತ್ತು. ಇಂದಿನ ಕಾಲಘಟ್ಟದಲ್ಲಿ ತುಳು ಸಂಸ್ಕøತಿಯ ಅನೇಕ ಅಂಶಗಳು ಮರೆತು ಹೋಗುತ್ತಿವೆ. ಆಟಿ ಆಚರಣೆ ಜತೆಗೆ ತುಳು ಸಂಸ್ಕøತಿ ಯುವ ಪೀಳಿಗೆಗೆ ನೆನಪಿಸುವುದು ಅಗತ್ಯ ಹಿರಿಯರು ಮಾಡಿದ ತ್ಯಾಗ ದೊಡ್ಡದು. ಅವರು ನಮಗೆ ಜೀವನ ಬದುಕನ್ನು ಕಲಿಸಿದ್ದನ್ನು ನಾವು ಮರೆಯಬಾರದು. ಗತಿಸಿ ಹೋದವರನ್ನು ಸ್ಮರಿಸಿ ಸಂಸ್ಕøತಿ ರಕ್ಷಣೆಯನ್ನು ಉಳಿಸುವ ಕೆಲಸ ಆಗಬೇಕು ಎಂದು ಜನಪದ ವಿದ್ವಾಂಸ ಡಾ. ಅಶೋಕ್ ಆಳ್ವ ಹೇಳಿದರು.


ಸುರತ್ಕಲ್ ಬಂಟರ ಸಂಘ ಮತ್ತು ಮಹಿಳಾ ವೇದಿಕೆ ಆಶ್ರಯದಲ್ಲಿ ಭಾನುವಾರ ಆಟಿದ ಪೊರ್ಲು ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ತುಳು ಅಕಾಡೆಮಿ ಮಾಜಿ ಸದಸ್ಯೆ ರೂಪಕಲಾ  ಆಳ್ವ  ಮಾತನಾಡಿ, ತುಳು  ಸಂಸ್ಕøತಿ ರಕ್ಷಣೆ ತುಳುನಾಡಿನ ಎಲ್ಲರ ಹೊಣೆ. ಆಟಿ ಕಾರ್ಯಕ್ರಮಗಳ ಮೂಲಕ ತುಳು ಸಂಸ್ಕøತಿ ಯುವ ಪೀಳಿಗೆಗೆ ಪರಿಚಯಿಸಲು ಸಾಧ್ಯವಿದೆ ಎಂದರು.

ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಂಬೈ ಬಂಟರ ಸಂಘ ಮಾಜಿ ಅಧ್ಯಕ್ಷ ಜಯ ಕೆ. ಶೆಟ್ಟಿ, ಉದ್ಯಮಿ  ಜಯರಾಮ ಶೆಟ್ಟಿ ಮುಂಬೈ, ಬಂಟರ ಯಾನೆ ಮಾತೃ ಸಂಘದ ಕೋಶಾಧಿಕಾರಿ ರವೀಂದ್ರನಾಥ್ ಎಸ್. ಶೆಟ್ಟಿ, ಒಂದು ಮೊಟ್ಟೆಯ ಕಥೆ ಚಿತ್ರದ ನಾಯಕ ನಟ ಮತ್ತು ನಿರ್ದೇಶಕ ರಾಜ್ಬಿ. ಶೆಟ್ಟಿ ತೋಕೂರು ಶುಭ ಹಾರೈಸಿದರು.
ಸಂದರ್ಭದಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ನಾರಾಯಣ ಶೆಟ್ಟಿ ಕನಕಬೆಟ್ಟು ಸೂರಿಂಜೆ( ಕೃಷಿ), ಸುರೇಂದ್ರನಾಥ ಎನ್ ಶೆಟ್ಟಿ ಪೇಜಾವರ (ಶಿಕ್ಷಣ), ಶಿವ ಎಲ್. ಸುವರ್ಣ ಹೊಸಬೆಟ್ಟು ( ಯಕ್ಷಗಾನ), ಉಮೇಶ್ ಇಡ್ಯಾ ( ಸ್ಯಾಕ್ಸೋಫೋನ್), ನಾಗಮ್ಮ ಪೂಜಾರ್ತಿ ಮಧ್ಯ(ಸೂಲಗಿತ್ತಿ) ರವರನ್ನು ಸನ್ಮಾನಿಸಲಾಯಿತು.

ಸುರತ್ಕಲ್ ಬಂಟರ ಸಂಘ ಉಪಾಧ್ಯಕ್ಷ ಸುಧಾಕರ್ ಎಸ್ ಪೂಂಜಾ, ಕಾರ್ಯದರ್ಶಿ ಸೀತಾರಾಮ ರೈ, ಕೋಶಾಧಿಕಾರಿ ಪ್ರವೀಣ್ ಶೆಟ್ಟಿ, ಬಂಟರ ಸಂಘ ಮಹಿಳಾ ವೇದಿಕೆ ಅಧ್ಯಕ್ಷ ಚಂದ್ರಕಲಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಶ್ರೀಧರ್ ಶೆಟ್ಟಿ, ದೇವೇಂದ್ರ ಕೆ. ಶೆಟ್ಟಿ, ಕಿರಣ್ ಪ್ರಸಾದ್ ರೈ. ಭವ್ಯಾ ಅಶೋಕ್ ಶೆಟ್ಟಿ, ಭಾರತಿ ಪಿ. ಶೆಟ್ಟಿ ಪರಿಚಯಿಸಿದರು. ವಿಜಯಭಾರತಿ  ಎಸ್. ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ರಾಜೇಶ್ವರಿ ಡಿ. ಶೆಟ್ಟಿ  ಕಾರ್ಯಕ್ರಮ ನಿರೂಪಿಸಿದರು.

Pages