ಬಂಟ್ಸ್ ನ್ಯೂಸ್, ಮಂಗಳೂರು: ಕಾವ್ಯಾಳ ಆತ್ಮಹತ್ಯೆ ಪ್ರಕರಣವನ್ನು
ಮುಂದಿಟ್ಟುಕೊಂಡು ವಿನಾಕಾರಣ ಮೋಹನ್ ಆಳ್ವಾ ಮತ್ತು
ಅವರ ಸಂಸ್ಥೆಯ ತೇಜೋವಧೆ ಮಾಡಲಾಗುತ್ತಿದೆ.
ಆಳ್ವಾಸ್ ವಿದ್ಯಾ ಸಂಸ್ಥೆಯ ಆಡಳಿತ
ವ್ಯವಸ್ಥೆ ಪ್ರಾಮಾಣಿಕವಾಗಿದೆ. ಆಳ್ವಾರವರೂ ಕೂಡ ಪಾರದರ್ಶಕ ವ್ಯಕ್ತಿತ್ವದವರಾಗಿದ್ದಾರೆ.
ಆಳ್ವಾರವರು ಖುದ್ದು ತನಿಖೆಗೆ ಸಿದ್ಧರಿರುವಾಗ
ಮಾಧ್ಯಮಗಳಲ್ಲಿ ಅಪಪ್ರಚಾರ ಸರಿ ಅಲ್ಲ ಎಂದು
ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ಫೇರ್
ಟ್ರಸ್ಟ್ ಅಧ್ಯಕ್ಷ
ಎ.ಸದಾನಂದ ಶೆಟ್ಟಿ
ತಿಳಿಸಿದ್ದಾರೆ.
ಮೋಹನ್ ಆಳ್ವಾರನ್ನು ಅಪರಾಧಿಯಂತೆ ಬಿಂಬಿಸುವುದು ಸರಿಯಲ್ಲ. ಕಾವ್ಯಾಳ ಸಾವಿನ ವಿಷಯದ
ತನಿಖಾ ವರದಿ ಬಂದ ಬಳಿಕ
ಅವರಿಗಾಗುವ ಮಾನಸಿಕ ಹಿಂಸೆ ಮತ್ತು
ಸಂಸ್ಥೆಗಾದ ನಷ್ಟವನ್ನು ತುಂಬಿಕೊಡುವವರು ಯಾರು ಎಂದು ಸದಾನಂದ
ಶೆಟ್ಟಿ ಪ್ರಶ್ನಿಸಿದ್ದಾರೆ.
ಆಳ್ವಾಸ್
ವಿದ್ಯಾ ಸಂಸ್ಥೆಯಲ್ಲಿ ಇಪ್ಪತ್ತಾರು ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ
ಅವರ ಪೆÇೀಷಕರು ಆತಂಕಕ್ಕೀಡಾಗಿದ್ದಾರೆ.
ಈ ಸಂಸ್ಥೆಯಲ್ಲಿ ವಿವಿಧ
ಜಾತಿ ಧರ್ಮಗಳ ನಾಲ್ಕು ಲಕ್ಷಕ್ಕಿಂತ
ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದ್ದಾರೆ. ಇಲ್ಲಿ ವಿದ್ಯಾರ್ಜನೆ ಮಾಡಿದವರು
ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ
ಸ್ಥಾನದಲ್ಲಿದ್ದಾರೆ. ಈಗಲೂ ಈ ಸಂಸ್ಥೆಯಲ್ಲಿ
ತಮ್ಮ ಮಕ್ಕಳನ್ನು ವಿದ್ಯಾರ್ಜನೆಗೆ ಕಳುಹಿಸಲು ಪೋಷಕರು ತುದಿಗಾಲಲ್ಲಿ ನಿಂತಿದ್ದಾರೆ.
ಒಂದೇ ಮನೆಯ ಎರಡು ಮೂರು
ಮಕ್ಕಳು ಈ ಸಂಸ್ಥೆಯಲ್ಲಿ ವಿದ್ಯಾರ್ಜನೆ
ಮಾಡುತ್ತಿದ್ದಾರೆ. ಇನ್ನಾದರೂ ತೇಜೋವಧೆ ನಿಲ್ಲಿಸಿ, ಸತ್ಯ
ಅರಿತು ಮಾತನಾಡಿ, ಕಾವ್ಯಾಳ ಸಾವಿನ ವಿಷಯದಲ್ಲಿ
ಪಾರದರ್ಶಕ ತನಿಖೆಯಾಗಲಿ ಎಂದು ಎ.ಸದಾನಂದ
ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.