ಆ.13ಕ್ಕೆ ಮುಂಬೈನಲ್ಲಿ ಯಕ್ಷಧ್ರುವ ಪಟ್ಲ ಸಂಭ್ರಮ “ಪೊಲ್ಯರಿಗೆ ಯಕ್ಷಧ್ರುವ ಪ್ರಶಸ್ತಿ” - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಆ.13ಕ್ಕೆ ಮುಂಬೈನಲ್ಲಿ ಯಕ್ಷಧ್ರುವ ಪಟ್ಲ ಸಂಭ್ರಮ “ಪೊಲ್ಯರಿಗೆ ಯಕ್ಷಧ್ರುವ ಪ್ರಶಸ್ತಿ”

Share This
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮುಂಬಯಿ ಘಟಕದ ಆಶ್ರಯದಲ್ಲಿ ಯಕ್ಷಧ್ರುವಪಟ್ಲ ಸಂಭ್ರಮ 2017 ಆಗೋಸ್ಟ್ 13 ಭಾನುವಾರ ಮಧ್ಯಾಹ್ನ 2 ಗಂಟೆಗೆ ಮುಂಬಯಿಯ ಕುರ್ಲಾದಲ್ಲಿರುವ  ರಾಧಾ ಬಾೈ ಟಿ. ಭಂಡಾರಿ ಸಭಾಗೃಹದ ಬಂಟರ ಭವನದಲ್ಲಿ ಜರಗಲಿದೆ ಎಂದು ಮುಂಬಯಿ ಸಮಿತಿಯ ಗೌರವಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಸಮಿತಿಯ ಅಧ್ಯಕ್ಷ ಕಡಂದಲೆ  ಸುರೇಶ್ ಭಂಡಾರಿ ತಿಳಿಸಿದ್ದಾರೆ.


ಮುಂಬಯಿಯಲ್ಲಿ ಯಕ್ಷಧ್ರುವ ಪ್ರಶಸ್ತಿಯನ್ನು ಖ್ಯಾತ ಭಾಗವತರಾದ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಪಡೆಯಲಿದ್ದಾರೆ. ಯಕ್ಷಧ್ರುವ ಕಲಾ ಗೌರವವನ್ನು ತಾಳಮದ್ದಳೆ ಅರ್ಥದಾಂ ಚಿಕ್ಕಯ್ಯ ಶೆಟ್ಟಿ, ಯಕ್ಷಗಾನ ಸಾಹಿತಿ  ಕೋಲ್ಯಾರು ರಾಜು ಶೆಟ್ಟಿ, ಚೆಂಡೆ ವಾದಕ ಕೆ.ಕೆ.ದೇವಾಡಿಗ, ಪ್ರಸಂಗ ಕರ್ತ ಎಂ.ಟಿ.ಪೂಜಾರಿ, ಭಾಗವತ ದೇವಲ್ಕುಂದ ಭಾಸ್ಕರಶೆಟ್ಟಿ, ಹಾಗೂ ಕಲಾವಿದ ಭೋಜ ಬಂಗೇರ ಪಡೆಯಲಿದ್ದಾರೆ.

ಅಂದು ಮಧ್ಯಾಹ್ನ 2 ಗಂಟೆಗೆ ಅಬ್ಬರ ತಾಳ ನಡೆಯಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಬಯಿ  ಬಂಟರ ಸಂಘದ ಅಧ್ಯಕ್ಷ ಪ್ರಭಾಕರ್ ಎಲ್. ಶೆಟ್ಟಿ ವಹಿಸಲಿದ್ದಾರೆ. ಉದ್ಯಮಿ ಶಾಂತಾರಾಮ್ ಶೆಟ್ಟಿ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಸುವರ್ಣ ಬಾಬ ಶುಭಾಶಂಸನೆಗೈಯ್ಯಲಿದ್ದಾರೆ. ಮುಖ್ಯ ಅತಿಥಿಯಾಗಿ ಸಂಸದ ಗೋಪಾಲ್ ಸಿ. ಶೆಟ್ಟಿ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಗಾನವೈಭವ, ನಾಟ್ಯ ವೈಭವ ಮತ್ತು ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ ನಡೆಯಲಿದೆ.

ಸಮಾರೋಪ ಪ್ರಶಸ್ತಿ  ಪ್ರಧಾನ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಎಂಆರ್ಜಿ ಗ್ರೂಫ್ ಮುಖ್ಯಸ್ಥ ಪ್ರಕಾಶ್ ಕೆ.ಶೆಟ್ಟಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಧೀರ್ ಶೆಟ್ಟಿ ಮತ್ತು ಚಿತ್ರನಟ ಸುನೀಲ್ ಶೆಟ್ಟಿ ಭಾಗವಹಿಸಲಿದ್ದಾರೆ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹಾಗೂ ಪೌಂಡೇಶನ್ ಕೇಂದ್ರ ಸಲಹಾ ಮಂಡಳಿಯ ಪದಾಧಿಕಾ ರಿಗಳು ಭಾಗವಹಿಸಲಿದ್ದಾರೆ ಎಂದು ಮುಂಬಯಿ ಘಟಕದ ಗೌರವ ಕಾರ್ಯದರ್ಶಿ ಕರ್ನೂರು ಮೋಹನ್  ರೈ ತಿಳಿಸಿದ್ದಾರೆ

Pages