ಬಂಟ್ಸ್ ನ್ಯೂಸ್, ಮಂಗಳೂರು: ಶ್ರೀ ಸಿದ್ಧಿವಿನಾಯಕ ಪ್ರತಿಷ್ಟಾನ
ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಶ್ರಯದಲ್ಲಿ
ಮಂಗಳೂರಿನ ಬಂಟ್ಸ್ ಹಾಸ್ಟೆಲ್ನ
ಓಂಕಾರ ನಗರದಲ್ಲಿ ಆ.25 ರಿಂದ 27ರ
ವರೆಗೆ ನಡೆಯಲಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ
ಪತ್ರಿಕೆ ಬಿಡುಗಡೆ ಸಮಾರಂಭವು ಶ್ರೀ
ರಾಮಕೃಷ್ಣ ವಿದ್ಯಾ ಸಂಸ್ಥೆಯ ಗೀತಾ
ಎಸ್.ಎಂ.ಶೆಟ್ಟಿ ಸಭಾಂಗಣದಲ್ಲಿ
ಆ.8 ರಂದು ಜರುಗಿತು.
ಕೆನರಾ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ವಸಂತ ಶೆಟ್ಟಿ ಅವರು
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ,
ಕಳೆದ 13 ವರ್ಷಗಳಿಂದ ಅತ್ಯಂತ ವ್ಯವಸ್ಥಿತವಾಗಿ ಹಾಗೂ
ಶೃದ್ಧಾ- ಭಕ್ತಿಯಿಂದ ಆಯೋಜಿಸುತ್ತಿರುವ ಓಂಕಾರನಗರದ ಗಣೇಶೋತ್ಸವವು ಈ ಬಾರಿಯೂ ಅತ್ಯಂತ
ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಗಣೇಶೋತ್ಸವ
ಸಮಿತಿಯ ಕಾಯಾ9ಲಯ ಉದ್ಘಾಟಿಸಿದ
ನಗರದ ಖ್ಯಾತ ಚಾಟ9ಡ್9
ಎಕೌಂಟೆಂಟ್ ಶಾಂತಾರಾಮ ಶೆಟ್ಟಿ ಅವರು ಮಾತನಾಡಿ,
ಉದ್ಯಮಿ ಸುಂದರ ಶೆಟ್ಟಿ ಅಧ್ಯಕ್ಷತೆಯ
ಸಂಘಟನಾ ಸಮಿತಿಗೆ ಸರ್ವರು ಸಹಕಾರ
ನೀಡಬೇಕೆಂದು ವಿನಂತಿಸಿದರು.
ಅಧ್ಯಕ್ಷತೆ
ವಹಿಸಿದ ಶ್ರೀ ಸಿದ್ಧಿವಿನಾಯಕ ಪ್ರತಿಷ್ಟಾನದ
ಆಡಳಿತ ಟ್ರಸ್ಟಿ ಮಾಲಾಡಿ ಅಜಿತ್
ಕುಮಾರ್ ರೈ ಅವರು ಮಾತನಾಡಿ,
3 ದಿನಗಳ ಅವಧಿಯಲ್ಲಿ ನಡೆಯುವ ಶ್ರೀ ಗಣೇಶೋತ್ಸವದ
ಧಾಮಿ9ಕ ಹಾಗೂ ಸಾಂಸ್ಕೃತಿಕ
ಕಾರ್ಯಕ್ರಮಗಳಿಗೆ ಸಮಾಜದ ಎಲ್ಲರ ಸಹಕಾರ
ಯಾಚಿಸಿದರು. ಬಂಟರ ಯಾನೆ ನಾಡವರ
ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ
ವಸಂತ ಶೆಟ್ಟಿ ಅವರು ಸೇವಾ
ರಶೀದಿ ಪುಸ್ತಕ ಬಿಡುಗಡೆಗೊಳಿಸಿದರು.
ಶ್ರೀ ಸಿದ್ಧಿವಿನಾಯಕ ಪ್ರತಿಷ್ಟಾನದ ಟ್ರಸ್ಟಿ ಡಾ|ಆಶಾಜ್ಯೋತಿ
ರೈ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳ
ವಿವರ ನೀಡಿದರು. ಮಂಗಳೂರು
ತಾ|ಬಂಟರ ಸಂಘದ ಸಂಚಾಲಕ
ಉಮೇಶ್ ರೈ ಅವರು ತೆನೆ
ವಿತರಣೆಯ ವಿವರ ಒದಗಿಸಿದರು. ಶ್ರೀ ಗಣೇಶೋತ್ಸವ ಸಮಿತಿಯ
ಪ್ರಧಾನ ಕಾರ್ಯದರ್ಶಿ ದಿವಾಕರ
ಸಾಮಾನಿ ಅವರು ಸೇವಾ ವಿವರ
ಹಾಗೂ ವಿವಿಧ ಸೇವಾಕರ್ತರ ಮಾಹಿತಿ
ನೀಡಿದರು. ಮೀನಾ
ಆರ್.ಶೆಟ್ಟಿ ಅವರು ಆ.20
ರಂದು ಜರಗುವ ಬಂಟ ಕ್ರೀಡೋತ್ಸವದ
ಮಾಹಿತಿ ಒದಗಿಸಿದರು.
ಟ್ರಸ್ಟಿಗಳಾದ
ಶೆಡ್ಯೆ ಮಂಜುನಾಥ ಭಂಡಾರಿ, ರವಿರಾಜ
ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ರವಿ ಶೆಟ್ಟಿ,
ಡಾ|ದೇವದಾಸ ರೈ, ಮಂಗಳೂರು
ತಾ|ಬಂಟರ ಸಂಘದ ಸಂಚಾಲಕ
ಜಯರಾಮ ಸಾಂತ ಹಾಗೂ ವಿವಿಧ
ಬಂಟರ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಎಂ.ಸುಂದರ ಶೆಟ್ಟಿ ಪ್ರಸ್ತಾವನೆಗೈದು,
ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಸುಕೇಶ್
ಚೌಟ ಕಾರ್ಯಕ್ರಮ ನಿವ9ಹಿಸಿದರು. ಕೋಶಾಧಿಕಾರಿ ಆನಂದ ಶೆಟ್ಟಿ ಅಡ್ಯಾರು
ವಂದಿಸಿದರು.