ನಿಸ್ವಾರ್ಥ ಸೇವೆಯ ಸೂಲಗಿತ್ತಿ ಪರಮೇಶ್ವರಿ ಅಮ್ಮನಿಗೆ ಶಿರೂರು ಪೀಠಾಧಿಪತಿ ಲಕ್ಷ್ಮೀವರತೀರ್ಥರಿಂದ ಸನ್ಮಾನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ನಿಸ್ವಾರ್ಥ ಸೇವೆಯ ಸೂಲಗಿತ್ತಿ ಪರಮೇಶ್ವರಿ ಅಮ್ಮನಿಗೆ ಶಿರೂರು ಪೀಠಾಧಿಪತಿ ಲಕ್ಷ್ಮೀವರತೀರ್ಥರಿಂದ ಸನ್ಮಾನ

Share This
ಬಂಟ್ಸ್ ನ್ಯೂಸ್, ಬಂಟ್ವಾಳ: ಸಮಾಜದಲ್ಲಿ ಯಾವುದೆ ಸೇವೆಯನ್ನು ಮಾಡುವುದಿದ್ದರೂ  ಪ್ರತಿಫಲಪೇಕ್ಷೆಯನ್ನು ಸಾಮನ್ಯವಾಗಿ ಹೆಚ್ಚಿನವರು ನಿರೀಕ್ಷಿಸುತ್ತಾರೆ. ಆದರೆ ಯಾವುದೆ ಆಸೆ ಆಕಾಂಕ್ಷೆಗಳಿಲ್ಲದೆ ಸೇವೆ ಸಲ್ಲಿಸುತ್ತಿರುವವರು ಅಪರೂಪ. ಅಂತಹ ಅಪರೂಪದ ವ್ಯಕ್ತಿಯೊಬ್ಬರು ಬಂಟ್ವಾಳ ತಾಲೂಕಿನ ಕಾರಿಂಜೇಶ್ವರ ದೇವಸ್ಥಾನದ ಬಳಿಯ ಕುಡೇಲು ಎಂಬಲ್ಲಿ ಇರುವ ಮನೆಯಲ್ಲಿರುವ ಪರಮೇಶ್ವರಿ ಅಮ್ಮನವರು.

ವಯಸ್ಸು 104 ಆಗಿದ್ದರೂ ಇಂದಿಗೂ ಸಮಾಜಸೇವೆಯಲ್ಲಿ ಉತ್ಸಾಹದ ಚಿಲುಮೆಯೆ ಆಗಿರುವ ಪರಮೇಶ್ವರಿ ಅಮ್ಮನವರು ಹಲವು ದಶಕಗಳ ಕಾಲ  ಮಾಡಿದ ನಿಸ್ವಾರ್ಥ ಸೇವೆಗೆ  ಅವರ ಮನೆಯಲ್ಲಿಯೆ ಶಿರೂರು ಪೀಠಾಧಿಪತಿ ಲಕ್ಷ್ಮೀವರತೀರ್ಥ ಸ್ವಾಮಿಜಿ ಅಭಿನಂದಿಸಿದರು.

ಪರಮೇಶ್ವರಿ ಅಮ್ಮನವರು ಕಳೆದ ಹಲವು ದಶಕಗಳಿಂದ  ಸೂಲಗಿತ್ತಿ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ನಿಸ್ವಾರ್ಥವಾಗಿ ಸೂಲಗಿತ್ತಿ ಕಾರ್ಯ ಮಾಡುವ ಪರಮೇಶ್ವರಿ ಅಮ್ಮನವರು ಇದಕ್ಕಾಗಿ ಯಾವುದೇ ಹಣವನ್ನು ಪಡೆದುಕೊಳ್ಳುವುದಿಲ್ಲ ಮತ್ತು ಯಾರಾದರೂ ಕೊಟ್ಟರು ಸ್ವೀಕರಿಸುವುದಿಲ್ಲ. ಸಾವಿರಾರು ಮಂದಿ ಗರ್ಭಿಣಿಯರ ಹೆರಿಗೆ ಮಾಡಿಸಿದ ಪರಮೇಶ್ವರಿ ಅಮ್ಮನವರಿಗೆ ಹೆರಿಗೆ ಬಳಿಕ ತಾಯಿ ಖುಷಿ ಪಡುವುದರಿಂದಲೆ ತೃಪ್ತಿ ಪಡುತ್ತಾರೆ.

ಗರ್ಭಿಣಿ ಮಹಿಳೆಯರಿಗೆ ಮಾತ್ರವಲ್ಲ, ಹಸುಗಳ ಹೆರಿಗೆ ಸಂದರ್ಭದಲ್ಲಿರೂ ಇವರು ಸಹಾಯಕ್ಕೆ ಬರುತ್ತಾರೆ. ಗರ್ಭಿಣಿ ಮಹಿಳೆಯರಿಗೆ ಬೇಕಾದ ಮನೆಮದ್ದನ್ನು ತಾವೇ ತಯಾರಿಸಿ ಕೊಡುತ್ತಾರೆಇವರ ಪುತ್ರ ಚಂದ್ರಶೇಖರ್ ರೈ ಅವರು ಕೂಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದು ತುಳು ಚಿತ್ರ ರೈಟ್ ಬೊಕ್ಕ ಲೆಪ್ಟ್ ಚಿತ್ರದ ನಿರ್ಮಾಪಕರು ಆಗಿದ್ದಾರೆಮೂರು ಮಕ್ಕಳು ಮತ್ತು 8 ಮೊಮ್ಮಕ್ಕಳೊಂದಿಗೆ ಖುಷಿ  ಜೀವನ ಸಾಗಿಸುತ್ತಿರುವ 104 ವರ್ಷದ ಅಜ್ಜಿಗೆ  ಹೀರೆಕಾಯಿ, ಅಂಜಲ್ ಮೀನೆಂದರೆ ಪ್ರಾಣ. ಅಪರೂಪದ ಅಜ್ಜಿಗೆ ಗೌರವಿಸುವ ಸಂದರ್ಭದಲ್ಲಿ ಹಲವರು ಸಾಕ್ಷಿಯಾದರು.

Pages