ಬಂಟ್ಸ್ ನ್ಯೂಸ್ ವಲ್ಡ್, ಮುಂಬಯಿ: ಅಜೆಕಾರು ಕಲಾಭಿಮಾನಿ ಬಳಗದ ಸಂಯೋಜನೆಯಲ್ಲಿ ಬಂಟರ
ಸಂಘ ನಗರ ಪ್ರಾದೇಶಿಕ ಸಮಿತಿಯಿಂದ ಮುಂಬೈನ ಬಂಟರ ಭವನದಲ್ಲಿ “ಕರ್ಣ ಭೇದನ - ಕರ್ಣಾಜುನ” ಹಾಗೂ ತುಳುಸಿರಿ
ಕಲಾವೃಂದ ಭಾಂಡುಪ್ ವತಿಯಿಂದ ಐರೋಲಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ “ಶ್ರೀಕೃಷ್ಣ ಸಂಧಾನ”
ಯಕ್ಷಗಾನ ತಾಳಮದ್ದಳೆ ಆಗಸ್ಟ್ 9ರಂದು ಜರಗಿತು.
ಶಂಭು ಶರ್ಮ ವಿಟ್ಲ,
ಭಾಸ್ಕರ ರೈ ಕುಕ್ಕುವಳ್ಳಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಕೋಲ್ಯಾರು ರಾಜು ಶೆಟ್ಟಿ,ಸದಾಶಿವ ಆಳ್ವ
ತಲಪಾಡಿ, ಅವಿನಾಶ್ ಶೆಟ್ಟಿ ಉಬರಡ್ಕ ಅರ್ಥಧಾರಿಗಳಾಗಿದ್ದರು. ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಗಣೇಶ್
ಕುಮಾರ್ ಹೆಬ್ರಿ, ಇನ್ನ ಆನಂದ ಶೆಟ್ಟಿ , ಪ್ರಶಾಂತ ಶೆಟ್ಟಿ ವಗೆನಾಡು, ಮಹೇಶ್ ಕುಮಾರ್ ಮಂದರ್ತಿ ಹಿಮ್ಮೇಳದಿದ್ದರು.
ಮುಂಬೈ ಬಂಟರ ಸಂಘದ
ಅಧ್ಯಕ್ಷ ಪ್ರಭಾಕರ ಶೆಟ್ಟಿ ಬಂಟರ ಭವನದಲ್ಲಿ ಜರಗಿದ ತಾಳಮದ್ದಳೆ ಕಾರ್ಯಕ್ರಮ ಉದ್ಘಾಟಿಸಿದರು. ಸಭೆಯಲ್ಲಿ
ಊರಿನ ಪ್ರಸಿದ್ಧ ಕಲಾವಿದರನ್ನು ಗೌರವಿಸಲಾಯಿತು. ಅಜೆಕಾರು ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು.ದಿನೇಶ್
ಶೆಟ್ಟಿ ವಿಕ್ರೋಲಿ ವಂದಿಸಿದರು.
ಮಾಹಿತಿ ಕೃಪೆ: ಭಾಸ್ಕರ ರೈ ಕುಕ್ಕುವಳ್ಳಿ www.buntsnews.com