ಬಂಟ್ಸ್ ನ್ಯೂಸ್, ಮಂಗಳೂರು: ಮಂಗಳೂರಿನ ಬಂಟ್ಸ್ ಹಾಸ್ಟೆಲ್ನ
ಓಂಕಾರನಗರದಲ್ಲಿ ನಡೆಯಲಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ
ಆ.20ರಂದು ಬಂಟ್ಸ್ ಹಾಸ್ಟೆಲ್ನ ಶ್ರೀ ರಾಮಕೃಷ್ಣ
ಕಾಲೇಜು ಮೈದಾನದಲ್ಲಿ ಅಂತರ್
ಜಿಲ್ಲಾ ಮಟ್ಟದ ಬಂಟಕ್ರೀಡೋತ್ಸವ ನಡೆಯಿತು.
ಉದ್ಘಾಟನೆ: ಬಂಟ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದ
ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ
ಹಾಗು ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನದ
ಮ್ಯಾನೆಜಿಂಗ್ ಟ್ರಸ್ಟಿ ಅಜಿತ್ಕುಮಾರ್
ರೈ ಮಾಲಾಡಿ, ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದ ಕ್ರೀಡಾತಾರೆಗಳು ಬೆಳಕಿಗೆ
ಬರಲು ಬಂಟ ಕ್ರೀಡೋತ್ಸವದಂತಹ ಕ್ರೀಡಾಕೂಟಗಳು
ಪ್ರೇರಣೆ ಸ್ಫೂರ್ತಿ ನೀಡಲು ಹಾಗೂ ಜಾತಿ
ಮತದ ಭೇದವೆಣಿಸದೆ ವಿವಿಧ ಬಂಟರ ಸಂಘಗಳು
ಇಂತಹ ಕ್ರೀಡಾಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಿ ಎಂದು ಹೇಳಿದರು.
ಸನ್ಮಾನ: ಶ್ರೀ ಸಿದ್ಧಿ ವಿನಾಯಕ
ಪ್ರತಿಷ್ಟಾನ ಹಾಗೂ ಸಾರ್ವಜನಿಕ ಶ್ರೀ
ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಮಂಗಳೂರಿನ
ಬಂಟ್ಸ್ಹಾಸ್ಟೆಲ್ನ ಓಂಕಾರನಗರದಲ್ಲಿ ನಡೆಯಲಿರುವ
ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ
ಬಂಟ್ಸ್ ಹಾಸ್ಟೆಲ್ನಲ್ಲಿ ಆಯೋಜಿಸಲಾದ ಅಂತರ್
ಜಿಲ್ಲಾ ಬಂಟ ಕ್ರೀಡೋತ್ಸವದ ಸಮಾರೋಪ
ಸಮಾರಂಭದಲ್ಲಿ ವಿವಿಧ ಕ್ರೀಡಾ ಸಾಧಕರನ್ನು
ಸನ್ಮಾನಿಸಿ ಗೌರವಿಸಲಾಯಿತು.
ರಾಷ್ಟ್ರಮಟ್ಟದಲ್ಲಿ ಸಾಧನೆಗೈದ
ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಬಬಿತಾ ಶೆಟ್ಟಿ
ಸುರತ್ಕಲ್, ಭಾಗೀರತಿ ಶೆಟ್ಟಿ, ಕೋಕೋ
ಕ್ರೀಡೆಯಲ್ಲಿ ಭವಿಷ್ ಶೆಟ್ಟಿ ಚೇಳಾೈರ್,
ಕರಾಟೆಯಲ್ಲಿ ಸೋಹನ್
ಎಂ.ರೈ, ಈಜು ಸಾಧಕಿ
ಸಾನ್ಯ ಡಿ.ಶೆಟ್ಟಿ ಹಾಗೂ ಎನ್ಎಸ್ಎಸ್ನಲ್ಲಿ ರಚನಾ
ಶೆಟ್ಟಿ ಅವರ ಸಾಧನೆಯನ್ನು
ಪರಿಗಣಿಸಿ, ಅಭಿನಂದಿಸಲಾಯಿತು.
ಫಲಿತಾಂಶ: ಹಗ್ಗ ಜಗ್ಗಾಟ ಪಂದ್ಯಾಟದ
ಪುರುಷರ ವಿಭಾಗದಲ್ಲಿ ಪುತ್ತೂರು ಬಂಟ್ಸ್ ತಂಡ ಪ್ರಥಮ
ಸ್ಥಾನ ಗಳಿಸಿ ಪ್ರಶಸ್ತಿ ಪಡೆಯಿತು. ಮಹಿಳೆಯರ
ವಿಭಾಗದಲ್ಲಿ ಎಕ್ಕಾರು ಬಂಟರ ಸಂಘ
ಪ್ರಥಮ ಸ್ಥಾನ ಪಡೆದು ಪ್ರಶಸ್ತಿ
ಗಳಿಸಿತು.
ಪುರುಷರ
ವಿಭಾಗದ ಹಗ್ಗ ಜಗ್ಗಾಟ ಪಂದ್ಯಾಟದಲ್ಲಿ
ಮಂಜೇಶ್ವರ ಬಂಟರ ಸಂಘ ದ್ವಿತೀಯ
ಹಾಗೂ ಮಂಗಳೂರು ತಾ|ಬಂಟರ
ಸಂಘ ತೃತೀಯ ಸ್ಥಾನಿಯಾದರೆ, ಮಹಿಳೆಯರ
ವಿಭಾಗದಲ್ಲಿ ಉಳ್ಳಾಲ ಬಂಟರ ಸಂಘ
ದ್ವಿತೀಯ ಸ್ಥಾನಿಯಾಗಿ ಹಾಗೂ ಮಂಜೇಶ್ವರ ಬಂಟರ
ಸಂಘ ತೃತೀಯ ಸ್ಥಾನಿಯಾಗಿ ಪ್ರಶಸ್ತಿ
ಪಡೆದುಕೊಂಡಿತು.
ಪ್ರಶಸ್ತಿ
ವಿತರಿಸಿದ ಬಂಟರ ಯಾನೆ ನಾಡವರ
ಮಾತೃ ಸಂಘದ ಅಧ್ಯಕ್ಷ ಹಾಗೂ
ಸಿದ್ಧಿವಿನಾಯಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಅಜಿತ್ ಕುಮಾರ್
ರೈ ಮಾಲಾಡಿ ಅವರು ವಿಜೇತರನ್ನು
ಅಭಿನಂದಿಸಿದರು. ಈ
ಸಂದರ್ಭದಲ್ಲಿ ಪಂದ್ಯಾಟದ ತೀರ್ಪುಗಾರರನ್ನು ಗೌರವಿಸಲಾಯಿತು. ಶ್ರೀ
ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಎಂ.ಸುಂದರ ಶೆಟ್ಟಿ, ಮಾತೃ ಸಂಘದ ಪ್ರಧಾನ
ಕಾರ್ಯದರ್ಶಿ ವಸಂತ ಶೆಟ್ಟಿ, ಶ್ರೀ
ಸಿದ್ಧಿ ವಿನಾಯಕ ಪ್ರತಿಸ್ಠಾನದ ಟ್ರಸ್ಟಿಗಳಾದ
ಶೆಡ್ಡೆ ಮಂಜುನಾಥ ಭಂಡಾರಿ, ರವೀಂದ್ರನಾಥ
ಶೆಟ್ಟಿ, ರವಿರಾಜ್ ಶೆಟ್ಟಿ, ಡಾ|ಆಶಾಜ್ಯೋತಿ ರೈ, ಜಯರಾಂ ಸಾಂತ,
ಉಮೇಶ್ ರೈ, ಜಗನ್ನಾಥ್ ಶೆಟ್ಟಿ
ಬಾಳ, ಚಂದ್ರಹಾಸ ರೈ ರಂಗೋಲಿ, ವಿವಿಧ
ಬಂಟರ ಸಂಘಗಳ ಪದಾಧಿಕಾರಿಗಳಾದ ಬಾಲಕೃಷ್ಣ
ಶೆಟ್ಟಿ ಮೇಗಿನಮಾಲಾಡಿ, ರತ್ನಾಕರ ಶೆಟ್ಟಿ, ಜಿತೇಂದ್ರ
ಶೆಟ್ಟಿ, ಉಲ್ಲಾಸ್ ಶೆಟ್ಟಿ ಪೆರ್ಮುದೆ,
ರಾಜ್ಕುಮಾರ್ ಶೆಟ್ಟಿ ಮತ್ತಿತರರು
ಉಪಸ್ಥಿತರಿದ್ದರು.
ಶ್ರೀ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ
ದಿವಾಕರ ಸಾಮಾನಿ ಚೇಳ್ಯಾರುಗುತ್ತು ಅವರು
ಕ್ರೀಡಾ ವಿಜೇತರ ಪಟ್ಟಿ ವಾಚಿಸಿದರು. ಜೊತೆ
ಕಾರ್ಯದರ್ಶಿ ಸುಕೇಶ್ ಚೌಟ ಕಾರ್ಯಕ್ರಮ
ನಿರ್ವಹಿಸಿದರು. ಬಂಟ
ಕ್ರೀಡೋತ್ಸವ ಸಮಿತಿಯ ಸಂಚಾಲಕ ಕಿರಣ್
ಪಕ್ಕಳ ವಂದಿಸಿದರು.