ರಸ್ತೆ ಬದಿ ಜೋಪಡಿಯಲ್ಲಿ ಹಿರಿಯ ಕಲಾವಿದನ ಬದುಕು: ಪಟ್ಲ ಸತೀಶ ಶೆಟ್ಟಿ ನೆರವಿನ ಭರವಸೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ರಸ್ತೆ ಬದಿ ಜೋಪಡಿಯಲ್ಲಿ ಹಿರಿಯ ಕಲಾವಿದನ ಬದುಕು: ಪಟ್ಲ ಸತೀಶ ಶೆಟ್ಟಿ ನೆರವಿನ ಭರವಸೆ

Share This
ಬಂಟ್ಸ್ ನ್ಯೂಸ್ ವಲ್ಡ್, ಮಂಗಳೂರು: ಕರಾವಳಿಯ ಪ್ರಸಿದ್ಧ ಯಕ್ಷಗಾನ ಮೇಳಗಳಲ್ಲಿ ಮಿಂಚಿದ್ದ ಕಲಾವಿದ ಪುರಂದರ ನಿರ್ಗತಿಕರಂತೆ ರಸ್ತೆ ಬದಿ ಡೇರೆ ಯಲ್ಲಿ ಬದುಕುತ್ತಿದ್ದಾರೆ. ಕಲಾವಿದನ ಕಷ್ಟಕ್ಕೆ ಸ್ಪಂದಿಸಿದ ಕಟೀಲು ಮೇಳದ ಭಾಗವತ ಪಟ್ಲ ಸತೀಶ್ ಶೆಟ್ಟಿ ನೆರವಿನ ಹಸ್ತ ಚಾಚಿದ್ದಾರೆ.

ಕಟೀಲು ಮೇಳ, ಸುಂಕದ ಕಟ್ಟೆ ಮೇಳ ಮೊದಲಾದ ಹಲವು ಮೇಳಗಳಲ್ಲಿ 24 ವರ್ಷ ತಿರುಗಾಟ ನಡೆಸಿದ ಯಕ್ಷಗಾನ ಕಲಾವಿದ ಪುರಂದರ ಅವರು ರಸ್ತೆ ಬದಿಯಲ್ಲಿ ದಿನ ದೂಡುತ್ತಿದ್ದಾರೆ. 58 ವರ್ಷ ಪ್ರಾಯದ ಪುರಂದರ ಅವರು ಗೆಜ್ಜೆ ಹಾಕಿದ ಕಾಲುಗಳಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆ ಗೆಜ್ಜೆ ಕಟ್ಟಲಾಗದೆ ಅತ್ತ ಬೇರೆ ಯಾವುದೇ ಉದ್ಯೋಗವೂ ಮಾಡಲಾಗದೆ ಕುಂಜತ್ತಬೈಲ್ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಟರ್ಪಾಲ್ ಡೇರೆಯಲ್ಲಿ ಬದುಕುತ್ತಿದ್ದಾರೆ.

ಅವರ ಅಕ್ಕ ಶಶಿಕಲ ಕೂಡ ಇದೇ ಡೇರೆಯಲ್ಲಿ ಪುರಂದರ ಅವರೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಮೊದಲು ಬಾಡಿಗೆ ಮನೆಯಲ್ಲಿದ್ದ ಇವರು ಬಾಡಿಗೆ ಕಟ್ಟಲು ಸಾಧ್ಯವಾಗದೆ ಬೀದಿಗೆ ತಳ್ಳಲ್ಪಟ್ಟರು. ಇದೀಗ ಅಲ್ಲಿ ಇಲ್ಲಿ ಮನೆಗಳಲ್ಲಿ ಮುಸುರೆ ತಿಕ್ಕಿ ಶಶಿಕಲಾ ಅವರು ತಮ್ಮ ಅಣ್ಣನ ತುತ್ತಿಗೆ ಆಸರೆಯಾಗಿದ್ದಾರೆ.

ಜೋಪಡಿಯಲ್ಲಿ ಯಾವುದೇ ಮೂಲ ಸೌಕರ್ಯ ಗಳಿಲ್ಲದೇ, ಯಕ್ಷರಂಗದ ಮೇರು ಕಲಾವಿದನೊಬ್ಬ ಜೀವನ ಸಾಗಿಸು ವುದು ನೋಡಿದಾಗ ಕಟುಕನಿಗೂ ಮನಸ್ಸು ಕರಗುತ್ತದೆ. ವಿಚಾರ ತಿಳಿದ ಭಾಗವತ ಪಟ್ಲ ಸತೀಶ್ ಶೆಟ್ಟಿ ಬಗ್ಗೆ ತಮ್ಮ ಯಕ್ಷಧ್ರುವ ಪಟ್ಲ ಫೌಂಡೇಶನ್ ಪದಾಧಿಕಾರಿಗಳಲ್ಲಿ ಚರ್ಚಿಸಿ ಟ್ರಸ್ಟ್ ವತಿಯಿಂದ ಮನೆ ನಿರ್ಮಿಸಿ ಕೊಡುವುದಾಗಿ ನಿರ್ಧರಿಸಿದ್ದಾರೆ.

ಕುಂಜತ್ತ ಬೈಲಿನಲ್ಲಿರುವ ಪುರಂದರ ಅವರ ಡೇರೆ ಮನೆಗೆ ಭೇಟಿ ನೀಡಿದ ಪಟ್ಲ ಅವರು ಪುರಂದರ ಅವರ ಈಗ ಇರುವ ಜಾಗ ಸರಕಾರಿ ಭೂಮಿಯಾಗಿದ್ದು, ಖಾಸಗಿಯವರ ಒಡೆತನದಲ್ಲಿದೆ, ಅಲ್ಲಿ ಮನೆ ನಿರ್ಮಾಣ ಮಾಡಿಕೊಡುವುದು ಕಷ್ಟ. ಹಿನ್ನೆಲೆಯಲ್ಲಿ ದಾನಿಗಳು ಸಂಕಷ್ಟದಲ್ಲಿರುವ ಅಶಕ್ತ ಕಲಾವಿದನಿಗೆ ಸೂರು ಒದಗಿಸಲು ಭೂಮಿ ನೀಡಿದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ನಿಂದ ಉಚಿತವಾಗಿ ಮನೆ ನಿರ್ಮಿಸಿ ಕೊಡಲಾಗುವುದು ಎಂದು ತಿಳಿಸಿದ್ದಾರೆ.  

ಸಂದರ್ಭದಲ್ಲಿ ಪಟ್ಲ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ  ಪುರೂಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸುದೇಶ್ ಕುಮಾರ್, ರವಿ ಶೆಟ್ಟಿ ಅಶೋಕ ನಗರ ಮೊದಲಾದವರು ಉಪಸ್ಥಿತರಿದ್ದರು.

Pages