ವರದಿ: ವಿಜಯ್
ಮಂಜೇಶ್ವರ
[www.buntsnews.com]
ಬಂಟ್ಸ್
ನ್ಯೂಸ್,ದುಬೈ:
ಯುಎಇ ಬಂಟ್ಸ್
ನ 43ನೇ
ವರ್ಷದ ಕೂಡುಕಟ್ಟ್
ಕಳೆದ ಶುಕ್ರವಾರ
ನಗರದ ಅಮಲ್
ಬಾಲ್ ರೂಮ್
ಆಫ್ ಜೆ.ಡಬ್ಲ್ಯೂ
ಮೆರಿಯೊಟ್ ಹೋಟೆಲ್
ದೇರದಲ್ಲಿ ವಿವಿಧ
ಕಾರ್ಯಕ್ರಮಗಳೊಂದಿಗೆ ಬಹಳ
ವಿಜೃಂಬಣೆಯಿಂದ ಯಶಸ್ವಿಯಾಗಿ
ಜರಗಿತು.
ಕೇರಳದ ಚೆಂಡೆ,ಕುಂಭ
ಕಲಶದೊಂದಿಗೆ ಮೆರವಣಿಗೆಯಲ್ಲಿ
ಗಣ್ಯರನ್ನು ವೇದಿಕೆಗೆ
ಕರೆತರಲಾಯಿತು.ನಂತರ
ಸಂಗೀತ ಶೆಟ್ಟಿ
ಮತ್ತು ವೈಷ್ಣವಿ
ಶೆಟ್ಟಿ ಯವರ
ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು
ಆರಂಭಗೊಂಡಿತು. ಕಾರ್ಯಕ್ರಮವನ್ನು
ಯುಎಇ ಬಂಟ್ಸ್ ನ
ಮಹಾಪೋಷಕರಾದ ಡಾ.ಬಿ.
ಆರ್ ಶೆಟ್ಟಿ,
ಯುಎಇ ಎಕ್ಸ್
ಚೇಂಜ್ ನ
ನಿರ್ದೇಶಕ ಸುಧೀರ್
ಶೆಟ್ಟಿ, ನ್ಯಾಯಮೂರ್ತಿಗಳಾದ
ಸಂತೋಷ್ ಹೆಗ್ಡೆ,
ಉದ್ಯಮಿಗಳಾದ ಸುಂದರ್
ಶೆಟ್ಟಿ ದಂಪತಿ
,ಶೇಖರ್ ಶೆಟ್ಟಿ
ದಂಪತಿ ,ಪ್ರವೀಣ್
ಶೆಟ್ಟಿ, ಯುಎಇ
ಬಂಟ್ಸ್ ನ
ರುವಾರಿ ಸರ್ವೋತ್ತಮ
ಶೆಟ್ಟಿ, ಹಾಗೂ
ಕಾರ್ಯಕಾರಿ ಸಮಿತಿಯ
ಸದಸ್ಯರ ಉಪಸ್ಥಿತಿಯಲ್ಲಿ
ದೀಪ ಬೆಳಗಿಸುವುದರ
ಮೂಲಕ ಉದ್ಘಾಟಿಸಲಾಯಿತು.
ನಂತರ ಕರ್ನಾಟಕದ ಗೌರವಾನ್ವಿತ
ನ್ಯಾಯಮೂರ್ತಿಗಳಾದ ಸಂತೋಷ್
ಹೆಗ್ಡೆ ಯವರಿಗೆ
ಯುಎಇ
ಬಂಟರ ಸಮ್ಮುಖದಲ್ಲಿ
ಡಾ.ಬಿ.ಆರ್
ಶೆಟ್ಟಿ ಯವರ
ಅಧ್ಯಕ್ಷತೆಯಲ್ಲಿ 2017ನೇ
ಸಾಲಿನ "ಬಂಟ
ವಿಭೂಷಣ" ಪ್ರಶಸ್ತಿ
ನೀಡಿ ಗೌರವಿಸಲಾಯಿತು.
ಸಿನಿಮಾ ನಟಿ
ಪೂಜಾ ಹೆಗ್ಡೆ,
ನಿರೂಪಕ ಸಾಹಿಲ್
ರೈ, ಗಾಯಕ
ನಿಶಾನ್ ರೈ,
ಮಂಗಳೂರು ಮಾತೃ
ಸಂಘದ ಪ್ರದೀಪ್
ಶೆಟ್ಟಿ
ಇವರಿಗೆ ಸ್ಮರಣಿಕೆ
ನೀಡಿ ಗೌರವಿಸಲಾಯಿತು.
43ನೇ ವರ್ಷದ
ಕೂಡುಕಟ್ಟ್ ಕಾರ್ಯಕ್ರಮದ
ಕಾರ್ಯಕಾರಿ ಸಮಿತಿಯ
ಸದಸ್ಯರುಗಳಾದ ಗುರುಪ್ರಸಾದ್
ಶೆಟ್ಟಿ ದಂಪತಿ
ರಾಜೀವ್ ಶೆಟ್ಟಿ
ದಂಪತಿ,ಡಾ.ಪ್ರದೀಪ್
ಶೆಟ್ಟಿ ದಂಪತಿ,ರಾಹುಲ್
ಶೆಟ್ಟಿ ದಂಪತಿ
ಗಣನಾತ್ ಮಲ್ಲಿ
ದಂಪತಿ, ಪ್ರದೀಪ್
ಕುಮಾರ್ ಶೆಟ್ಟಿ
ದಂಪತಿ ಶರತ್
ಶೆಟ್ಟಿ ದಂಪತಿ,
ರಾಕೇಶ್ ಹೆಗ್ಡೆ
ದಂಪತಿ, ಸಂಜೀವ್
ಶೆಟ್ಟಿ ದಂಪತಿ
ಇವರನ್ನು ಅಭಿನಂದಿಸಲಾಯಿತು.
ಹಾಗೂ ಪತ್ರಿಕಾ
ಮಾಧ್ಯಮ ಮಿತ್ರರನ್ನು
,ಪ್ರಾಯೋಜಕರನ್ನು,ಪೊರ್ಲುದ
ಸಂಸಾರ ಮತ್ತು
ನೃತ್ಯ ಕಾರ್ಯಕ್ರಮದ
ತೀರ್ಪುಗಾರನ್ನು ಜೊತೆಗೆ
ಯುಎಇ ಯ
ಶಾಲೆಯಲ್ಲಿ ಕಲಿಯುತ್ತಿರುವ
ಅತ್ಯುತ್ತಮ ಅಂಕಗಳನ್ನು
ಗಳಿಸಿದ ಬಂಟ
ಮಕ್ಕಳನ್ನು ಗಣ್ಯರ
ಸಮ್ಮುಖದಲ್ಲಿ ಅಭಿನಂದಿಸಲಾಯಿತು.
ಮುಂಜಾನೆಯಿಂದ ಸಂಜೆಯವರೆಗೆ
ಜರಗಿದ ಕಾರ್ಯಕ್ರಮದಲ್ಲಿ
ವಿಶೇಷ ಆಕರ್ಷಣೆಯಾಗಿ
"ಪೊರ್ಲುದ ಸಂಸಾರ"ಎಂಬ
ಕಾರ್ಯಕ್ರಮ ಜರಗಿತು.ದೊಡ್ಡವರಿಂದ
ಮತ್ತು ಮಕ್ಕಳಿಂದ
ನೃತ್ಯ ಕಾರ್ಯಕ್ರಮ
ಜರಗಿತು. ಯೂತ್
ಬಂಟ್ಸ್ ಇದರ
ಸದಸ್ಯರಿಂದ ಕನ್ನಡ
ಮತ್ತು ಹಿಂದಿ
ಸಿನಿಮಾ ಗೀತೆಗಳ
ಸಂಗೀತ ರಸಮಂಜರಿ
ಜರಗಿತು.ವಿಶೇಷವಾಗಿ
ಝೀ ಟಿವಿ
ಯ ಸರಿಗಮಪ
ಖ್ಯಾತಿ ಯುವ
ಗಾಯಕ ನಿಶಾನ್
ರೈ ಆವರ
ಹಾಡುಗಾರಿಕೆ ಎಲ್ಲರ
ಮನ ತಣಿಸಿತು.ಸ್ವಚ್ಚ
ತುಳುವಿನಲ್ಲಿ ನಿರೂಪನೆ
ಮಾಡಿದ ಸಾಹಿಲ್
ರೈ ಸಭಿಕರನ್ನು
ಮೂಕ ವಿಸ್ಮಿತಗೊಳಿಸಿದರು.
ಪೊರ್ಲುದ ಸಂಸಾರ-2017
ಕಿರೀಟವನ್ನು
ಸಂತೋಷ್ ಶೆಟ್ಟಿ
ದಂಪತಿಗಳು ತಮ್ಮದಾಗಿಸಿಕೊಂಡರು.
ಇದರಲ್ಲಿ ಪ್ರಥಮ
ಸ್ಥಾನಕ್ಕೆ ಮಹೇಶ್
ಶೆಟ್ಟಿ ದಂಪತಿ
ಹಾಗು ದ್ವಿತೀಯ
ಸ್ಥಾನಕ್ಕೆ ನಿರಂಜನ್
ಶೆಟ್ಟಿ ದಂಪತಿಗಳು
ತೃಪ್ತಿ ಪಟ್ಟರು.
ಮೋಕೆದ ಸಂಸಾರ ರಾಜರಾಮ್
ಶೆಟ್ಟಿ ದಂಪತಿ,
ಪುಗರ್ತೆದ ಸಂಸಾರ
ಸಂತೋಷ್ ಶೆಟ್ಟಿ
ದಂಪತಿ, ಪೊರ್ಲುದ
ಐತದ ಸಂಸಾರ
ಸಂತೋಷ್ ಶೆಟ್ಟಿ
ದಂಪತಿ ಕುಸಾಲ್
ದ ಸಂಸಾರ
ಮಹೇಶ್ ಶೆಟ್ಟಿ
ದಂಪತಿ ಪೊರ್ಲುದ
ಪರಿಚಯ ಮಹೇಶ್
ಶೆಟ್ಟಿ ದಂಪತಿ
ಇವರು ವಿಜೇತರಾದರು.
ದೊಡ್ಡವರ ನೃತ್ಯ
ಕಾರ್ಯಕ್ರಮದಲ್ಲಿ ಪೊಸಗುತ್ತು
ಶಾರ್ಜ ಪ್ರಥಮ
ಸ್ಥಾನವನ್ನು ನಾಟ್ಯಲಾಸಂ
ಅಬುದಾಬಿ ದ್ವಿತೀಯ
ಸ್ಥಾನವನ್ನು, ಗೋಲ್ಡನ್
ಸ್ಪಾರ್ಕ್ ಲರ್ಸ್
ಮುಸಫ ತೃತೀಯ
ಸ್ಥಾನವನ್ನುಗಳಿಸಿತು. ಮಕ್ಕಳ
ನೃತ್ಯ ಸ್ಪರ್ಧೆಯಲ್ಲಿ
ಲಾಸ್ಯರೆವ ಅಬುದಾಬಿ
ಪ್ರಥಮ ,ರಾಡಿಕಲ್
ಬಂಟ್ಸ್ ದುಬಾಯಿ
ದ್ವಿತೀಯ, ಬೂಗಿ
ಬೌನ್ಸರ್ಸ್ ಮುಸಫ ತೃತೀಯ ಸ್ಥಾನ
ಗಳಿಸಿದರು . ಗಣನಾಥ
ಮಲ್ಲಿ ಸ್ವಾಗತಿಸಿ
. ಆರಂಭದಿಂದ ಕೊನೆಯ
ತನಕ ಯು
ಎ ಇ
ಯ ಬಂಟ್ಸ್
ನ ರೂವರಿ
ಸರ್ವೋತ್ತಮ ಶೆಟ್ಟಿ,
ಯುವ ನಿರೂಪಕ
ಸಂಪತ್ ಶೆಟ್ಟಿ
ಕಾರ್ಯಕ್ರಮ ನಿರೂಪಿಸಿ
ವಂದಿಸಿದರು.