ಬಂಟ್ಸ್ ನ್ಯೂಸ್, ಮಂಗಳೂರು: ಮುಂಬೈಯಲ್ಲಿ ಹೋಟೆಲ್ ಉದ್ಯಮಿ ಮರವೂರಿನ ಪಾಪ್ಯುಲರ್ ಜಗದೀಶ್ ಶೆಟ್ಟಿ
ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ.
1986-87ರಲ್ಲಿ ಬಜ್ಪೆಯ ಮರವೂರಿಗೆ
ಆಗಮಿಸಿ ತಮ್ಮೂರಿನ ಅಭಿವೃದ್ಧಿಯ ಜೊತೆಗೆ ಹಿಂದು-ಮುಸ್ಲಿಂ
ಸೌಹಾರ್ದತೆಯ ಕನಸು ಕಂಡಿದ್ದ ಪಾಪ್ಯುಲರ್
ಜಗದೀಶ್ ಶೆಟ್ಟಿ ಅವರು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದರು. ಬಜ್ಪೆಯಲ್ಲಿ
ಸೌಹಾರ್ದ ಸಮಿತಿ ಸ್ಥಾಪಿಸಿ ಊರಿನಲ್ಲಿ
ಶಾಂತಿ, ನೆಮ್ಮದಿಯ ವಾತಾವರಣ ನಿರ್ಮಿಸಿದ್ದ ಮರವೂರು
ಜಗದೀಶ್ ಶೆಟ್ಟಿಯವರು ಊರಿನ ಮಕ್ಕಳಿಗಾಗಿ ಪಾಪ್ಯುಲರ್
ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು.
ಕೊಡುಗೈ
ದಾನಿಯಾಗಿದ್ದ ಜಗದೀಶ್ ಶೆಟ್ಟಿ ಅವರು ಕಟೀಲು ಶ್ರೀ ದೇವಿಯ ಭಕ್ತನಾಗಿ ದೇವಳದಲ್ಲಿ
ನಾನಾ ಜೀರ್ಣೋದ್ಧಾರ ಕಾರ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.