ಮಾ.18ಕ್ಕೆ ಅರ್ಜುನ್ ವೆಡ್ಸ್ ಅಮೃತ ಚಿತ್ರದ ಧ್ವನಿ ಸುರುಳಿ ಬಿಡುಗಡೆ - BUNTS NEWS WORLD

ಮಾ.18ಕ್ಕೆ ಅರ್ಜುನ್ ವೆಡ್ಸ್ ಅಮೃತ ಚಿತ್ರದ ಧ್ವನಿ ಸುರುಳಿ ಬಿಡುಗಡೆ

Share This
Posted By: Rajesh Shetty– www.buntsnews.com
ಬಂಟ್ಸ್ ನ್ಯೂಸ್, ಮಂಗಳೂರು: ಬೆದ್ರ 9 ಕ್ರಿಯೇಷನ್ ಲಾಂಛನದಲ್ಲಿ ರಘು ಶೆಟ್ಟಿ ನಿರ್ದೇಶನದ ಅರ್ಜುನ್ ವೆಡ್ಸ್ ಅಮೃತ ತುಳು ಸಿನಿಮಾದ ಧ್ವನಿಸುರುಳಿ ಬಿಡುಗಡೆ ಸಮಾರಂಭವು ಮಾರ್ಚ್ 18ರಂದು ಶನಿವಾರ ಸಂಜೆ 6.30ಕ್ಕೆ ಮಂಗಳೂರು ಪುರಭವನದಲ್ಲಿ ಜರಗಲಿದೆ. ಸಿನಿಮಾದ ಪೋಸ್ಟ್ ಪ್ರೋಡಕ್ಷನ್ ಕೆಲಸ ಕಾರ್ಯಗಳು ಫಿನಿಶಿಂಗ್ ಹಂತದಲ್ಲಿದ್ದು ಮೇ ತಿಂಗಳಲ್ಲಿ  ಅರ್ಜುನ್ ವೆಡ್ಸ್ ಅಮೃತ ತೆರೆಕಾಣಲಿದೆ ಎಂದು  ನಿರ್ದೇಶಕ ರಘು ಶೆಟ್ಟಿ ತಿಳಿಸಿದ್ದಾರೆ. www.buntsnews.com

ಅರ್ಜುನ್ ವೆಡ್ಸ್ ಅಮೃತ ರೋಮ್ಯಾಂಟಿಕ್ ಲವ್ ಸ್ಟೋರಿಯಾಗಿದ್ದು, ಆಕ್ಷನ್ ಇಲ್ಲದ ಲವ್, ಸೆಂಟಿಮೆಂಟ್ ಹಾಗೂ ಹಾಸ್ಯ ಮಿಶ್ರಿತದಿಂದ ಕೂಡಿದೆ. ಪ್ರಥಮ ಬಾರಿಗೆ ಮಹಿಳೆಯೊಬ್ಬರು ತುಳು ಸಿನಿಮಾಕ್ಕೆ ಸಂಗೀತ ನಿರ್ದೇಶನ ನೀಡಿದ್ದಾರೆ. ಸುಮಾ ಎಲ್.ಎನ್.ಶಾಸ್ತ್ರಿ ಅವರ ಸಂಗೀತದಲ್ಲಿ ಹಾಡುಗಳು ಚೆನ್ನಾಗಿ ಮೂಡಿಬಂದಿದೆ.

ರಾಜೇಶ್ ಶೆಟ್ಟಿ, ದಾಮೋದರ ದೊಂಡೋಲೆ ಲೋಕುಕುಡ್ಲ ಅವರ ಸಾಹಿತ್ಯ ಇದೆ. ಕಿರಣ್ ತರುಣ್ರಾಜ್ ಕೊರಿಯೋಗ್ರಾಫರ್ ಆಗಿದ್ದಾರೆ. ರಾಜೇಶ್ ಕೃಷ್ಣನ್. ಹೇಮಂತ್, ಎಲ್.ಎನ್. ಶಾಸ್ತ್ರಿ ಸುಪ್ರಿಯಾ ಮತ್ತು ಸುಮಾ ಎಲ್.ಎನ್ ಶಾಸ್ತ್ರಿ ಸ್ವರ ನೀಡಿದ್ದಾರೆ. ಚೇತನ್ ಮುಂಡಾಡಿ ಕಲಾ ನಿರ್ದೇಶಕರು ಆನಂದ ಸುಂದರೇಶ್ ಅವರು ಛಾಯಾಗ್ರಾಹಕರಾಗಿ ದುಡಿದಿದ್ದಾರೆ. ಸಹ ನಿರ್ದೇಶಕರಾಗಿ ತ್ರಿಶೂಲ್ ಶೆಟ್ಟಿ, ರಾಮ್ ದಾಸ್ ಸಸಿಹಿತ್ಲು  ದುಡಿದಿದ್ದಾರೆ.

ಅನೂಪ್ಸಾಗರ್ ನಾಯಕನಟರಾಗಿ, ಆರಾಧ್ಯ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಮುಖ್ಯ ಪಾತ್ರದಲ್ಲಿ ಕುಸೇಲ್ದರಸೆ ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಉಮೇಶ್ ಮಿಜಾರ್ಸಂದೀಪ್ ಶೆಟ್ಟಿ, ಪ್ರಸನ್ನ ಶೆಟ್ಟಿ , ರಮೇಶ್ ರೈ ಕುಕ್ಕುವಳ್ಳಿ, ಸುನೀಲ್ ನೆಲ್ಲಿಗುಡ್ಡೆ, ಸುಧೀರ್ ರಾಜ್ ಉರ್ವಾ, ಸತೀಶ್ ಬಂದಲೆ, ಪವಿತ್ರ ಶೆಟ್ಟಿ ಕಟಪಾಡಿ, ಹರಿಣಿ ಕಾರ್ಕಳ ಆರ್.ಜೆ.ಅನುರಾಗ್ ಮೊದಲಾದವರಿದ್ದಾರೆ. ರಘು ಶೆಟ್ಟಿ ಅವರದೇ ಕಥೆ, ಚಿತ್ರಕಥೆ ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆwww.buntsnews.com  ಸುದ್ದಿ ಕೃಪೆ: ಜಗನ್ನಾಥ ಶೆಟ್ಟಿ ಬಾಳ

Pages