ಯಕ್ಷರಂಗದ ಹೊಸ ದಿಶೆ- ದಿಶಾ ಶೆಟ್ಟಿ ಕಾಟ್ಲ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಯಕ್ಷರಂಗದ ಹೊಸ ದಿಶೆ- ದಿಶಾ ಶೆಟ್ಟಿ ಕಾಟ್ಲ

Share This
Posted By : Suguna Rai – www.buntsnews.com
ಗಂಡುಕಲೆ ಎಂದೇ ಹೆಸರು ಪಡೆದಿರುವ ಯಕ್ಷಗಾನದಲ್ಲಿ ಇಂದು ಸ್ತ್ರೀಯರು ಕೂಡ ತಮ್ಮ ಕಲಾ ಪ್ರದರ್ಶನದ ಮೂಲಕ ತನ್ನದೇ ಆದ ಸಾಧನೆ ಮಾಡುತ್ತಿದ್ದಾರೆ. ಅತಂಹ ಅನೇಕ ಕಲಾ ಸಾಧಕರಲ್ಲಿ ಸುರತ್ಕಲ್ ದಿಶಾ ಶೆಟ್ಟಿ ಅವರು ಓರ್ವರು. ಹೆತ್ತವರು ಚಂದ್ರಶೇಖರ ಶೆಟ್ಟಿ ಪ್ರಮಾದಶೆಟ್ಟಿ ದಿಶಾ ಅವರ ತಾಯಿ ಹಾಗೂ ಶುಭಾದ ಶೆಟ್ಟಿ ಯಕ್ಷಗಾನ ಕ್ಷೇತ್ರದ ಶೇಷ್ಠಕಲಾವಿದರು. ಇದು ಇವರ ಮನೆಯೆ ಕಲಾ ಆಲಯದಂತೆ ಇರುವುದರಿಂದ ದಿಶಾಶೆಟ್ಟಿಗೆ ವರದಾನವಾಯಿತ್ತು. ಬಾಲ್ಯದಲ್ಲಿ ಯಕ್ಷಗಾನದ ಬಗ್ಗೆ ಬಹಳ ಆಸಕ್ತಿ ಬೆಳೆಸಿಕೊಂಡ ಇವಳು ಸಹೋದರ ತಾಯಿ ನಾಟ್ಯಭ್ಯಾಸ ಮಾಡುವಾಗ ನಾನು ಕೂಡ ಯಕ್ಷಗಾನ ಕಲಾವಿದೆಯಾಗಿ ಕುಣಿಯಬೇಕು ಎಂಬ ಕನಸನ್ನ ಕಟ್ಟಿಕೊಂಡಳು. ದಿಶಾಶೆಟ್ಟಿಯವರ ಇವರ ಆಸೆಯನ್ನು ಸಾಕರಗೊಳಿಸುವಲ್ಲಿ ಪೋಷಕರ ಕೊಡುಗೆ ಅಪಾರವಾಗಿದೆ. www.buntsnews.com
Disha Shetty Katla yakshagana

ತನ್ನ ಐದನೇ ವಯಸ್ಸಿಗೆ ಒಡ್ಡೋಲಗದ ಅಗ್ನಿಯಾಗಿ ರಂಗಸ್ಥಳವನ್ನೇರಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ಭವಿಷ್ಯದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡುವ ಸೂಚನೆಯನ್ನ ಅವಾಗಲೇ ನೀಡಿದ್ದಳು. ಪ್ರಸುತ್ತ ಶಾರದ ವಿದ್ಯಾನಿಲಯದಲ್ಲಿ ಪಿಯು ವಿದ್ಯಾರ್ಥಿನಿ . ತಾಯಿಯೇ ಮೊದಲ ಗುರು ಎಂಬಂತೆ ಈಕೆ ತಾಯಿ ಮತ್ತು ಚಿಕ್ಕಮ ಹೇಳಿಕೊಟ್ಟ ಹೇಳಿಕೊಟ್ಟ ಯಕ್ಷನಾಟ್ಯವನ್ನ ಶೃದ್ದೆಯಿಂದ ಕಲಿತಳು. www.buntsnews.com

ದಿಶಾ ಶೆಟ್ಟಿ ಯಕ್ಷಗಾನದಲ್ಲಿ ಧೂಮಾಕ್ಷ, ಶಿಶುಪಾಲ, ಕಾಳಿ, ರಾಧೆ, ಕಮಲ ಧ್ವಜ, ಚಂಡಾಸುರ ಹೀಗೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು ಸ್ತೀ ಪುರುಷ ವೈವಿಧ್ಯಮಯ ವೇಷಗಳನ್ನು ತೊಟ್ಟು ಯಕ್ಷಗಾನ ಕ್ಷೇತ್ರದಲ್ಲಿ ತನ್ನದೆ ಆದ ಛಾಪನ್ನ ಮೂಡಿಸಿದ್ದಾಳೆ. ದಿಶಾ ಶೆಟ್ಟಿಯವರ ಪ್ರತಿಭೆ ಯಕ್ಷಗಾನ ಮಾತ್ರಕ್ಕೇ ಸೀಮಿತವಾಗದೇ ಸಂಗೀತ, ಭರತನಾಟ್ಯ,ಕ್ರೀಡೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಹುಮುಖ ಪ್ರತಿಭೆ ದಿಶಾಶೆಟ್ಟಿಗೆ ಅನೇಕ ಸಂಘಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. www.buntsnews.com

ನೃತ್ಯ ವಿದುಷಿ ಪ್ರತಿಮಾ ಶ್ರೀಧರ್ ಅವರಿಂದ ಮೂರುವರ್ಷಗಳ ಕಾಲ ಭರತನಾಟ್ಯವನ್ನ ಅಭ್ಯಾಸ ಮಾಡಿದ ಯಕ್ಷಬಾಲೆ ರತ್ನಾಕರ್ ಅವರಿಂದ ಸಂಗೀತ ಕಲಿತಳು. ಹೊಸನಗರ ಮೇಳದ ರಕ್ಷಿತ್ ಶೆಟ್ಟಿ ಯಕ್ಷನಾಟ್ಯ ಪ್ರಭಾವವು ಇವಳ ಮೇಲಿದೆ. ಕಾಟಿಪಾಳ್ಯ ಶ್ರೀಸಿದ್ದಿವಿನಾಯಕ ಮಹಿಳಾ ಯಕ್ಷಗಾನ ಮಂಡಳಿಯ ಪ್ರಧಾನಕಲಾವಿದೆಯೂ ಕೂಡ ಆಗಿದ್ದಾಳೆ. ಓದು ಯಕ್ಷಗಾನ ಲಲಿತ ಕಲೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಇತರರಿಗೆ ಸ್ಪೂರ್ತಿಯಾಗಿರುವ ದಿಶಾಶೆಟ್ಟಿಯವರು ಯಕ್ಷಗಾನ ಕ್ಷೇತ್ರದಲ್ಲಿ ಇನಷ್ಟು ಸಾಧನೆ ಮಾಡಲಿ ಎಂದು ನಾವೆಲ್ಲಾ ಶುಭಹಾರೈಸೋಣ.
ಬರಹ ಕೃಪೆ: ಸತೀಶ್ ಶೆಟ್ಟಿ ಚೆರ್ಕಾಡಿ www.buntsnews.com

Pages