ಬಾಲಿವುಡ್ ನಟಿ ಐಶ್ಚರ್ಯ ರೈ ತಂದೆ ಕೃಷ್ಣರಾಜ್ ರೈ ನಿಧನ - BUNTS NEWS WORLD

ಬಾಲಿವುಡ್ ನಟಿ ಐಶ್ಚರ್ಯ ರೈ ತಂದೆ ಕೃಷ್ಣರಾಜ್ ರೈ ನಿಧನ

Share This
ಬಂಟ್ಸ್ ನ್ಯೂಸ್, ಮುಂಬಯಿ, ಮಾ. 18: ಪ್ರಸಿದ್ಧ ಬಾಲಿವುಡ್ ನಟಿ ಐಶ್ಚರ್ಯ ರೈ ಅವರ ತಂದೆ ಕೃಷ್ಣರಾಜ್ ರೈ (78.) ಅವರು ಇಂದಿಲ್ಲಿ ಶನಿವಾರ (18.03.2017) ಬಾಂದ್ರಾ ಪಶ್ಚಿಮದ ಲೀಲಾವತಿ ಅಸ್ಪತ್ರೆಯಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು.

ಕೃಷ್ಣರಾಜ್ ಅವರು ದಕ್ಷಿಣ ಕನ್ನಡದ ಮಂಗಳೂರಿನ ಕೌಡೂರು ಮೂಲದವರಾಗಿದ್ದು, ಪತ್ನಿ ವೃಂದಾ ಕೆ.ರೈ, ಪುತ್ರ ಆದಿತ್ಯ ರೈ, ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್, ಮೊಮ್ಮಗಳು ಆರಾಧ್ಯ ಬಚ್ಚನ್ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಶನಿವಾರ ರಾತ್ರಿ ನೇರವೇರಲಿದೆ ಎಂದು ಮೂಲಗಳು ತಿಳಿಸಿವೆ.

Pages