ಬಂಟ್ಸ್ ನ್ಯೂಸ್, ಕಾರ್ಕಳ: ಸಾಣೂರು ಬಂಟರ ಸಂಘದ ಉದ್ಘಾಟನೆ ಹಾಗೂ ಪದಗ್ರಹಣ
ಕಾರ್ಯಕ್ರಮವು ಇತ್ತಿಚೇಗೆ ನಡೆಯಿತು.
ಸಾಣೂರು ಬಂಟರ ಸಂಘವನ್ನು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ತಾಲೂಕು ಬಂಟರ ಸಂಘದ ಸಂಚಾಲಕ ನಂದಳಿಕೆ ಅರಮನೆ ಚಾವಡಿಯ ಸುಹಾನ್
ಹೆಗ್ಡೆ ವಹಿಸಿದ್ದರು. ಯಕ್ಷದ್ರುವ ಪಟ್ಲ ಟ್ರಸ್ಟಿನ
ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಕಾರ್ಕಳ ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಜ್ಯೋತಿ
ಸುನಿಲ್ ಕುಮಾರ್ ಶೆಟ್ಟಿ, ಕುಕ್ಕಂದೂರು ಬಂಟರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಸಾಣೂರು ಪೊರ್ಲೊಟ್ಟು
ಗುತ್ತು ವಿಜಯ್ ಶೆಟ್ಟಿ ಶುಭ ಹಾರೈಸಿದರು. www.buntsnews.com
ಸಮಾರಂಭದಲ್ಲಿ ವಿವಿಧ
ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಕೆ.ಎಸ್.ಹೆಗ್ಡೆ
ಡಾ.ಅವಿನಾಶ್ ಶೆಟ್ಟಿ, ಸಾಣೂರು ಗ್ರಾ.ಪಂ ಅಧ್ಯಕ್ಷೆ ಅಕ್ಷತಾ ಶೆಟ್ಟಿ, ಗ್ರಾ.ಪಂ ಸದಸ್ಯೆ ಮಾಲಿನಿ
ಎನ್.ರೈ, ಅಮಿತಾ ಪಿ.ಶೆಟ್ಟಿ, ಯಶೋದಾ ಶೆಟ್ಟಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಪ್ರಜ್ವಲ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಸಾದ್
ಶೆಟ್ಟಿ ಹಾಗೂ ಅಶ್ವಿನಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ಶೆಟ್ಟಿ ವಂದಿಸಿದರು. www.buntsnews.com