ಸುರತ್ಕಲ್ ಬಂಟರ ಸಂಘ ಇತರ ಸಂಘಗಳಿಗೆ ಮಾದರಿ: ಆನಂದ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸುರತ್ಕಲ್ ಬಂಟರ ಸಂಘ ಇತರ ಸಂಘಗಳಿಗೆ ಮಾದರಿ: ಆನಂದ ಶೆಟ್ಟಿ

Share This
ಬಂಟ್ಸ್ ನ್ಯೂಸ್, ಸುರತ್ಕಲ್: ಸುರತ್ಕಲ್ ಬಂಟರ ಸಂಘವು ಇತರ ಬಂಟರ ಸಂಘಗಳಿಗೆ ಮಾದರಿಯಾಗಿ ಕೆಲಸ ಮಾಡುತ್ತಿದೆ. ಕ್ರೀಡೆ ಇರಲಿ, ಸಾಂಸ್ಕೃತಿಕ ಸ್ಪರ್ಧೆ ಇರಲಿ, ಅವರಲ್ಲಿರುವ ಒಗ್ಗಟ್ಟು, ಏಕಾಗ್ರತೆಯಿಂದ ಇಂದು ಜಿಲ್ಲೆಯಲ್ಲಿರುವ ಇತರ ಬಂಟರ ಸಂಘಗಳಿಂದ ಸುರತ್ಕಲ್ ಬಂಟರ ಸಂಘ ಮೇಲ್ಪಂಕ್ತಿಯಲ್ಲಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಆನಂದ ಶೆಟ್ಟಿ ತಿಳಿಸಿದರು. www.buntsnews.com
ಸುರತ್ಕಲ್ ಬಂಟರ ಸಂಘ ಇತರ ಬಂಟರ ಸಂಘಗಳಿಗೆ ಮಾದರಿ : ಆನಂದ ಶೆಟ್ಟಿ

ಸುರತ್ಕಲ್ ಬಂಟರ ಸಂಘವು ಮಂಗಳಾ ಕ್ರೀಡಾಂಗಣದಲ್ಲಿ ಜರಗಿದ ಅಂತರ್ಜಿಲ್ಲಾ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಸುರತ್ಕಲ್ ಬಂಟರ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸುರತ್ಕಲ್ ಬಂಟರ ಸಂಘದಲ್ಲಿ ಬಹಳಷ್ಟು ಮಂದಿ ಪ್ರತಿಭಾವಂತ ಹಾಗೂ ಉದಯೋನ್ಮುಖ ಕ್ರೀಡಾಪಟುಗಳಿದ್ದಾರೆ. ರಾಜ್ಯ ಮಟ್ಟವನ್ನು ಪ್ರತಿನಿಧಿಸಿದ ಬಬಿತಾ ಶೆಟ್ಟಿ ಇಡ್ಯಾ ಹಾಗೂ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ ಭವಿಷ್ಯ ಶೆಟ್ಟಿ ಚೇಳಾರ್ ಅವರನ್ನು ಆನಂದ ಶೆಟ್ಟಿ ಅವರು ಗೌರವಿಸಿದರು. ಬಂಟ್ವಾಳದಲ್ಲಿ ಬಂಟರ ಭವನ ಉದ್ಘಾಟನಾ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ದೇಶ ವಿದೇಶದ ಬಂಟರಿಂದ ಶ್ಲಾಘನೆಗೆ ಒಳಪಟ್ಟ ಸುರತ್ಕಲ್ ಬಂಟರ ಸಂಘದ ಸಾಂಸ್ಕೃತಿಕ ಚಟುವಟಿಕೆಯನ್ನು ಬಂಟ್ವಾಳ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ರಂಗೋಲಿ ಶ್ಲಾಘಿಸಿದರು. ಪ್ರತಿಯೊಂದು ಪಾತ್ರಗಳ ಸೂಕ್ಷ್ಮತೆ ಮತ್ತು ನಿರ್ವಹಣೆಯಲ್ಲಿ ಏಕಾಗ್ರತೆಯನ್ನು ಕಾಪಾಡಿಕೊಂಡು ಅಭಿನಯಿಸುತ್ತಿರುವುದು ಸುರತ್ಕಲ್ ಬಂಟರ ಸಂಘದ ಸದಸ್ಯರ ಕಲಾಚಾತುರ್ಯತೆಗೆ ಸಾಕ್ಷಿಯಾಗಿದೆ ಎಂದರು. www.buntsnews.com

ಕ್ರೀಡಾ ವಿಜೇತರನ್ನು ಹಾಗೂ ಸಾಂಸ್ಕೃತಿಕ ತಂಡದಲ್ಲಿ ಭಾಗವಹಿಸಿದವರನ್ನು ಸಭೆಯಲ್ಲಿ ಗೌರವಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಉಲ್ಲಾಸ್ ಆರ್.ಶೆಟ್ಟಿ ವಹಿಸಿದ್ದರು. ಉಪಾಧ್ಯಕ್ಷ ಸುಧಾಕರ ಪೂಂಜ, ಕಾರ್ಯದರ್ಶಿ ಸೀತಾರಾಮ ರೈ, ಕೋಶಾಧಿಕಾರಿ ಪ್ರವೀಣ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ದೇವೇಂದ್ರ ಶೆಟ್ಟಿ, ಗುಣಶೇಖರ ಶೆಟ್ಟಿ, ಮಹಿಳಾ ವೇದಿಕೆ ಅಧ್ಯಕ್ಷೆ ಚಂದ್ರಕಲಾ ಶೆಟ್ಟಿ ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಜಯರಾಮ ಶೆಟ್ಟಿ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಇಡ್ಯಾ ವಂದಿಸಿದರು. www.buntsnews.com

Pages