“ಮಿಸ್ ಸುಪ್ರನ್ಯಾಷನಲ್ ” ಶ್ರೀನಿಧಿ ಶೆಟ್ಟಿಗೆ ಬಂಟರ ಮಾತೃ ಸಂಘದಿಂದ ಸನ್ಮಾನ - BUNTS NEWS WORLD

“ಮಿಸ್ ಸುಪ್ರನ್ಯಾಷನಲ್ ” ಶ್ರೀನಿಧಿ ಶೆಟ್ಟಿಗೆ ಬಂಟರ ಮಾತೃ ಸಂಘದಿಂದ ಸನ್ಮಾನ

Share This
ಬಂಟ್ಸ್ ನ್ಯೂಸ್.ಕಾಂ, ಮಂಗಳೂರು: ಪೆÇಲೇಂಡ್‍ನಲ್ಲಿ ನಡೆದ  ಜಾಗತಿಕ ಸೌಂದರ್ಯ ಸ್ಥರ್ಧೆಯಲ್ಲಿ  2016  ಮಿಸ್ ಸುಪ್ರ ನ್ಯಾಷನಲ್ ಪ್ರಶಸ್ತಿಗೆದ್ದುಕೊಂಡ ತಾಳಿಪಾಡಿ ಗುತ್ತು ಶ್ರೀನಿಧಿ ರಮೇಶ್ ಶೆಟ್ಟಿ ಅವರನ್ನು ಕಿನ್ನಿಗೋಳಿ ರಾಜಾಂಗಣ ಸಭಾಭವನದಲ್ಲಿ  ಡಿ. 13 ರಂದು ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಸನ್ಮಾನಿಸಲಾಯಿತು

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಅಜಿತ್‍ಕುಮಾರ್ ರೈ ಮಾಲಾಡಿ ಅವರು ಶ್ರೀನಿಧಿ ಶೆಟ್ಟಿ ಅವರನ್ನು ಬಂಟರ ಮಾತೃ ಸಂಘದ ಪರವಾಗಿ ಸನ್ಮಾನಿಸಿ ಶ್ರೀನಿಧಿ ಭಾರತ ದೇಶವನ್ನು ಪ್ರತಿನಿಧಿಸಿ ಪ್ರಶಸ್ತಿ ವಿಜೇತಳಾಗಿರುವುದು ನಮಗೆಲ್ಲ ಹೆಮ್ಮೆ ತಂದಿದೆ. ಶ್ರೀನಿಧಿ ತುಳುನಾಡಿಗೆ ಕೀರ್ತಿ ತಂದಿದ್ದಾಳೆ. ಅವಳ ಭವಿಷ್ಯ ಉಜ್ವಲವಾಗಲಿ ಎಂದು ಅವರು ಶುಭ ಹಾರೈಸಿದರು.

ಸಮಾರಂಭದಲ್ಲಿ ಬಂಟರ ಮಾತೃ ಸಂಘದ  ಕಾರ್ಯದರ್ಶಿ ವಸಂತ ಶೆಟ್ಟಿ , ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ , ಕೋಶಾಧಿಕಾರಿ ರವೀಂದ್ರನಾಥ ಶೆಟ್ಟಿ, ಜೆತೆಕಾರ್ಯದರ್ಶಿ ಕಾವು ಹೇಮನಾಥ ಶೆಟ್ಟಿಕಾರ್ಯಕಾರಿ ಸಮಿತಿಯ ಸದಸ್ಯರಾದ ಮೇಘನಾಥ ಶೆಟ್ಟಿ, ಸುರೇಶ್ಚಂದ್ರ ಶೆಟ್ಟಿ , ಸುಂದರ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಶಶಿರಾಜ ಶೆಟ್ಟಿ ಕೊಳಂಬೆ, ಜಯರಾಮ ಸಾಂತ, ಉಮೇಶ್ ರೈ, ಬಿ. ಕರುಣಾಕರ ಶೆಟ್ಟಿ, ಡಾ| ಆಶಾಜ್ಯೋತಿ ರೈ, ಚಂದ್ರಹಾಸ ಶೆಟ್ಟಿ ರಂಗೋಲಿ , ದಿವಾಕರ ಸಾಮಾನಿ, ಆನಂದ ಶೆಟ್ಟಿ ಅಡ್ಯಾರ್, ವಿಕಾಸ್ ಶೆಟ್ಟಿ, ಜಯಲಕ್ಷ್ಮೀ ಶೆಟ್ಟಿ, ನಿವೇದಿತಾ ಶೆಟ್ಟಿ ಹಾಗೂ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ  ಉಲ್ಲಾಸ್ ಆರ್ ಶೆಟ್ಟಿ , ಉಪಾಧ್ಯಕ್ಷ ಸುಧಾಕರ ಪೂಂಜ, ಚಂದ್ರಕಲಾ ಶೆಟ್ಟಿ, ಕೇಸರಿ ಪೂಂಜ ಮತ್ತಿತರರು ಉಪಸ್ಥಿತರಿದ್ದರುwww.buntsnews.com ಬಂಟ್ಸ್ ನ್ಯೂಸ್ ವರ್ಲ್ಡ್

Pages