ಬಂಟ್ಸ್ ನ್ಯೂಸ್.ಕಾಂ, ಪುತ್ತೂರು: ಉಪ್ಪಿನಂಗಡಿಯಲ್ಲಿ ನಡೆದ 26ನೇ ರಾಜ್ಯ ಮಟ್ಟದ ಕರಾಟೆ
ಟೂರ್ನಮೆಂಟಲ್ಲಿ ಚಿನ್ನದ ಪದಕವನ್ನು ಕೃಷ್ಣ ಶೆಟ್ಟಿ ಹಾಗೂ ಅವರ ಮಕ್ಕಳು ಗೆದ್ದಿದ್ದಾರೆ.
ಕೃಷ್ಣ ಶೆಟ್ಟಿ ಅವರು
2 ಚಿನ್ನದ ಪದಕಗಳನ್ನು ಗೆದ್ದರೆ ಅವರ ಪುತ್ರ ನಿದಿತ್ ಶೆಟ್ಟಿ ಹಾಗೂ ಮನ್ವಿತಾ ಶೆಟ್ಟಿ ತಲಾ ಒಂದೊಂದು
ಚಿನ್ನದ ಪದಕವನ್ನು ಪಡೆದಿದ್ದಾರೆ. ಈ ಹಿಂದೆಯೂ ಕರಾಟೆ ಪಂದ್ಯಾಟದಲ್ಲಿ ಅನೇಕ ಪದಕಗಳನ್ನು ಕೃಷ್ಣ ಶೆಟ್ಟಿ
ಅವರು ಪಡೆದಿದ್ದು ಮಕ್ಕಳಿಗೆ ಮಾರ್ಗದರ್ಶಕರಾಗಿದ್ದಾರೆ.
ಇಂತಹ ಅಪೂರ್ವ ಸಾಧಕರಿಗೆ ಬಂಟ್ಸ್ ನ್ಯೂಸ್ ವತಿಯಿಂದ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ರಾಷ್ಟ್ರ – ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧಾನೆ ಮಾಡುವಂತಾಗಲೀ ಎಂದು ಬಂಟ್ಸ್ ನ್ಯೂಸ್ ಹಾರೈಸುತ್ತಿದೆ.www.buntsnews.com ಬಂಟ್ಸ್ ನ್ಯೂಸ್ ವರ್ಲ್ಡ್