ಬಂಟ್ಸ್ ನ್ಯೂಸ್.ಕಾಂ, ಬೆಂಗಳೂರು: ಇತ್ತಿಚೇಗೆ ಪೋಲೆಂಡ್ ನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ
“ಮಿಸ್ ಸುಪ್ರನ್ಯಾಷನಲ್ ಅವಾರ್ಡ್ ಪಡೆದ ಮಂಗಳೂರಿನ ಬೆಡಗಿ ಶ್ರೀನಿಧಿ ಶೆಟ್ಟಿ ಅವರ ಮನದಾಳದ ಮಾತು
ಇಲ್ಲಿದೆ.
ಈ ಸೌಂದರ್ಯ ಸ್ಪರ್ಧೆಯಲ್ಲಿ 81 ಕ್ಕೂ ಹೆಚ್ಚು ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಅಂತಿಮ ಸುತ್ತಿನಲ್ಲಿ ಶ್ರೀನಿಧಿ
ಶೆಟ್ಟಿ ಮಿಸ್ ಸುಪ್ರನ್ಯಾಷನಲ್ ಕಿರೀಟ ವಿಜೇತರಾಗಿದ್ದಾರೆ. ಈ ಸ್ಪರ್ಧೆಯಲ್ಲಿ ವೆನಿಜುವೆಲಾದ ವಲೆರಿಯಾ
ವೆಸ್ಪೋಲಿ ಮೊದಲ ರನ್ನರ್ ಅಪ್, ಸುರಿ ನೇಮ್ ನ ಜಲಿಸಾ ಪಿಗಾಟ್ ಎರಡನೇ ರನ್ನರ್ ಅಪ್ ಆಗಿದ್ದಾರೆ. ಮೂಲತಃ ಮಂಗಳೂರಿನವರಾದ
ಶ್ರೀನಿಧಿ ಶೆಟ್ಟಿ ಮೂಲ್ಕಿ ರಮೇಶ್ ಶೆಟ್ಟಿ ಹಾಗೂ ತಾರಿಪಾಡಿಗುತ್ತು ಕುಶಾಲ ದಂಪತಿಯ ಮಗಳು.