ಬಂಟ್ಸ್ ನ್ಯೂಸ್.ಕಾಂ, ಉಡುಪಿ: ಇತ್ತಿಚೆಗೆ ಆಸ್ಟ್ರೇಲಿಯಾದ ಪರ್ತ್’ನಲ್ಲಿ ನಡೆದ
22ನೇ ಅಂತರಾಷ್ಟ್ರೀಯ ಹಿರಿಯರ ಅತ್ಲೆಟಿಕ್’ ಚಾಂಪಿಯನ್’ಶಿಪ್ನ ಜಾವೆಲಿನ್ ಕ್ರೀಡೆಯಲ್ಲಿ ಕಂಚಿನ ಪದಕ
ವಿಜೇತೆ ಶಾಲಿನಿ ಶೆಟ್ಟಿ ಅವರಿಗೆ ಉಡುಪಿ ಹಿರಿಯರ ಅತ್ಲೆಟಿಕ್ ಅಸೋಸಿಯೇಶನ್ ವತಿಯಿಂದ ಸನ್ಮಾನ, ಅಭಿನಂದನಾ
ಕಾರ್ಯಕ್ರಮ ನಡೆಯಿತು.
ಶನಿವಾರ ಕಿದಿಯೂರು
ಹೊಟೇಲಿನ ಮಹಾಜನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಮಕೂರಿನ ಟಿ.ಕೆ ಆನಂದ ಅವರು ಶಾಲಿನಿ ಅವರನ್ನು
ಸನ್ಮಾನಿಸಿದರು. ಈ ಸಂದರ್ಭ ಉದ್ಯಮಿ ಅರುಣ್ ಡಿ.ಶೆಟ್ಟಿ, ಬ್ರಹ್ಮಾವರ ಜಿ.ಎಂ. ವಿದ್ಯಾನಿಕೇತನ ಶಾಲೆಯ
ಸಂಚಾಲಕ ಪ್ರಕಾಶ್’ಚಂದ್ರ ಶೆಟ್ಟಿ, ಸಂಸ್ಥೆಯ ಉಪಾಧ್ಯಕ್ಷ ವಿಠಲ ಶೆಟ್ಟಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
www.buntsnews.com---------------------------------------------------------------------------------------------------------------------