ಹಾಡಿನ ಮೂಲಕ ಜನಮನ ಗೆದ್ದ ಪ್ರತಿಭಾವಂತ ಗಾಯಕ ನಿಶಾನ್ ರೈ ಮಠಂತಬೆಟ್ಟು - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಹಾಡಿನ ಮೂಲಕ ಜನಮನ ಗೆದ್ದ ಪ್ರತಿಭಾವಂತ ಗಾಯಕ ನಿಶಾನ್ ರೈ ಮಠಂತಬೆಟ್ಟು

Share This
ಬಂಟ್ಸ್ ನ್ಯೂಸ್, ಮಂಗಳೂರು: ತನ್ನ ಕಿರಿಯ ವಯಸ್ಸಿನಲ್ಲಿಯೇ ಹಾಡಿನ ಮೂಲಕ ಸಾಧನೆ ಮಾಡ ಜನಮನ ಗೆದ್ದಿರುವ ಪ್ರತಿಭಾವಂತ ಗಾಯಕ ನಿಶಾನ್ ರೈ ಮಠಂತಬೆಟ್ಟು ಅವರಿಗೆ ಈ ಭಾರಿಯ ನಂದಗೋಕುಲ ದೀಪಾವಳಿ ಪುರಸ್ಕಾರ ಲಭಿಸಿದೆ.
Nishan Rai Matanthabettu

ತನ್ನ ಎಳೆಯ ವಯಸ್ಸಿನಲ್ಲಿಯೇ ಹಾಡುಗಾರಿಕೆಯ ಬಗ್ಗೆ ಅಭಿರುಚಿ ಹೊಂದಿದ್ದ ನಿಶಾನ್ ರೈ ಇಂದು ಭಕ್ತಿಗೀತೆ, ಜನಪದ ಗೀತೆ ಸೇರಿದಂತೆ ಎಲ್ಲ ಪ್ರಕಾರದ ಹಾಡುಗಳನ್ನು ಹಾಡುವ ಮೂಲಕ ದೇಶ ವಿದೇಶಗಳಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈಗಾಗಲೇ ಪ್ರಖ್ಯಾತ ಮನೋರಂಜನ ವಾಹಿನಿಗಳಾದ ಸೋನಿ ಟಿ.ವಿ. ಯಂಗ್ ಸಿಂಗಿಂಗ್ ಸ್ಟಾರ್, ಜೀ ಕನ್ನಡದ ಸರಿಗಮಪ ಲಿಟ್ಲ್ ಚಾಂಪ್ಸ್ ರಿಯಾಟಿಲಿ ಹಾಡುಗಾರಿಕೆ ಸ್ಪರ್ಧೆಯಲ್ಲಿ ನಿಶಾನ್ ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದರು.

ನಿಶಾನ್ ರೈ ಅವರ ಈ ಸಾಧಾನೆಯ ಹಿಂದೆ ಪುತ್ತೂರು ಸಾಂಸ್ಕೃತಿಕ ಕಲಾಕೇಂದ್ರದ ಚಿದಾನಂದ ಕಾಮತ್, ಹೆಜ್ಜೆನಾದ ತಂಡದ ನಾಗೇಂದ್ರ ಐತಾಳ್ ಮತ್ತು ಚಿತ್ರಾ ಅವರ ಮಾರ್ಗದರ್ಶನ ಜೊತೆಗೆ ಹೆತ್ತವರ ಪ್ರೋತ್ಸಾಹವಿದೆ. ತಮ್ಮ ಸಂಗೀತ ಕಲಿಕೆಯ ಜತೆಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಉತ್ತಮ ಗಾಯಕನಾಗಲು ನಿಶಾನ್ ರೈ ಅವರಿಗೆ ಸಾಧ್ಯವಾಯಿತು. ಇಂದು ರಾಜ್ಯ - ಹೊರರಾಜ್ಯಗಳ ಹೆಚ್ಚಿನ ಕಡೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿರುವ ನಿಶಾನ್ ರೈ ಅವರ ಹಾಡುಗಾರಿಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಪುತ್ತೂರಿನ ಕರುಣಾಕರ ರೈ ಮತ್ತು ನಿರತಾ ರೈ ದಂಪತಿಯ ಪುತ್ರರಾಗಿರುವ ನಿಶಾನ್ ರೈ ಅವರು ಪ್ರಸ್ತುತ ಮಂಗಳೂರಿನ ಶ್ರೀ ಶಾರದಾ ವಿದ್ಯಾಲಯದಲ್ಲಿ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ನಿಶಾನ್ ರೈ ಅವರು ಮತ್ತಷ್ಟು ಸಾಧಾನೆ ಮಾಡುವ ಮೂಲಕ ಬಂಟ ಸಮಾಜಕ್ಕೆ, ರಾಜ್ಯಕ್ಕೆ ದೇಶಕ್ಕೆ ಹೆಸರು ತರಲೀ  ಎಂದು ಬಂಟ್ಸ್ ನ್ಯೂಸ್ ಹಾರೈಸುತ್ತದೆ. ಬರಹ: ಸುರೇಖಾ ಶೆಟ್ಟಿ [ಬಂಟ್ಸ್ ನ್ಯೂಸ್.ಕಾಂ ವರದಿಗಾರರು– www.buntsnews.com]
 ---------------------------------------------------------------------------------------------------------------------

Pages