ಬಂಟ್ಸ್ ನ್ಯೂಸ್.ಕಾಂ, ಮಂಜೇಶ್ವರ: ಕಾಸರಗೋಡು ಜಿಲ್ಲಾ ಬಂಟ್ಸ್ ಸಂಘದ
ಮನವಿಯ ಮೇರೆಗೆ ಬೆಂಗಳೂರು ಬಂಟ್ಸ್
ಸಂಘ ನೀಡಿದ ಕರಿಮಣಿ ಸರವನ್ನು
ಮಜಿಬೈಲ್ ಅಗ್ರಲ ಸಚಿಂದ್ರ ಶೆಟ್ಟಿಯವರ
ಪುತ್ರಿ ಕು. ನಿಶಾ ಅವರಿಗೆ
ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಬಂಟರ ಸಂಘದ
ಉಪದ್ಯಕ್ಷ ವಸಂತರಾಜ ಶೆಟ್ಟಿ, ಜಿಲ್ಲಾ
ಕಾರ್ಯದರ್ಶಿ ದಾಮೋದರ ಶೆಟ್ಟಿ ಮಜಿಬೈಲ್,
ಮಿಂಜ ಬಂಟರ ಸಂಘದ ಅಧ್ಯಕ್ಷರಾದ
ಕೆ.ನಾರಾಯಣ ನಾಯ್ಕ್ ನಡುಹಿತ್ಲು,
ಮಂಜೇಶ್ವರ ಪಿರ್ಕ ಬಂಟರ ಸಂಘದ
ಕಾರ್ಯದರ್ಶಿ ಸದಾನಂದ ಶೆಟ್ಟಿ, ಮಾತೃ
ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ಕಾರ್ತಿಕ್
ಶೆಟ್ಟಿ ಮಜಿಬೈಲ್, ಬಂಟ್ಸ್ ಮಜಿಬೈಲ್ ನ
ಸದಸ್ಯರಾದ ವಿಜಯ್ ಕುಮಾರ್ ಶೆಟ್ಟಿ
ಗಾನದಮೂಲೆ , ಪ್ರದೀಪ್ ಶೆಟ್ಟಿ ಬಲ್ಲಂಗುಡೆಲ್,
ಮಹಾಬಲ ಕುಂಬೆಹಿತ್ಲು ಮತ್ತಿತರ ಪ್ರಮುಖು ಉಪಸ್ಥಿತರಿದ್ದರು.
ಇದೇ ಸಂದರ್ಭ ಬೆಂಗಳೂರು
ಬಂಟರ ಸಂಘದ ಅಧ್ಯಕ್ಷರಾದ ದರ್ಬೆ
ಚಂದ್ರಹಾಸ ರೈ, ಕಾರ್ಯದರ್ಶಿ ಶ್ರೀಮತಿ
ಕಾಂತಿ ಶೆಟ್ಟಿಯವರಿಗೆ ಅಭಿನಂದನೆ ಸಲ್ಲಿಸಲಾಯಿತು. www.buntsnews.com
----------------------------------------------------------------------------------------------------------------------