ಬಂಟ್ಸ್ ನ್ಯೂಸ್.ಕಾಂ, ಮಂಗಳೂರು:
ಬಂಟರ ಯಾನೆ ನಾಡವರ ಮಾತೃಸಂಘದ
97ನೇ ವಾರ್ಷಿಕ ಸರ್ವ ಸದಸ್ಯರ
ಸಭೆಯು ಬಂಟ್ಸ್
ಹಾಸ್ಟೆಲ್ ಬಳಿಯ ಎಸ್ಅರ್ಎಸ್ ಹೋಮ್ ಇದರ
ವಠಾರದಲ್ಲಿ ಸೋಮವಾರ ಜರಗಿತು.
ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆಯನ್ನು
ಬಂಟರ ಯಾನೆ ನಾಡವರ ಮಾತೃ
ಸಂಘದ ಅಧ್ಯಕ್ಷ ಮಾಲಾಡಿ ಅಜಿತ್
ಕುಮಾರ್ ರೈ ವಹಿಸಿದ್ದರು. ಸಭೆಯನ್ನು
ದೀಪ ಬೆಳಗಿಸಿ ಉದ್ಘಾಟಿಸಿದ ಅವರು
ಸರ್ವ ಸದಸ್ಯರನ್ನು ಸ್ವಾಗತಿಸಿ, 230 ಕೋಟಿ ರೂ. ಯೋಜನೆಯ
ಕಟ್ಟಡ ಸಂಕೀರ್ಣದ
ಕೆಲಸ ಕಾರ್ಯಗಳು ಶೀಘ್ರದಲ್ಲಿ ಪ್ರಾರಂಭಗೊಳ್ಳಲಿದೆ. ಈ ಯೋಜನೆಯಲ್ಲಿ ಸಮಾಜದ
ಪ್ರತಿಯೊಬ್ಬ ಸದಸ್ಯರು ಕೈಜೋಡಿಸಬೇಕೆಂದು ತಿಳಿಸಿ
ಸರ್ವ ಸದಸ್ಯರ ಸಭೆಯ ಪ್ರಸ್ತಾವನೆಗೈದರು.
ವಿದ್ಯಾರ್ಥಿ
ಭವನಗಳ, ಶಾಲೆ ಕಾಲೇಜುಗಳ, ತಾಲೂಕು
ಸಮಿತಿಗಳ ವಾರ್ಷಿಕ ವರದಿಯನ್ನು ಸಭೆಯಲ್ಲಿ
ಮಂಡಿಸಲಾಯಿತು. ಎಂ. ಕರುಣಾಕರ ಶೆಟ್ಟಿ,
ನಿವೇದಿತಾ ಎನ್. ಶೆಟ್ಟಿ, ಚೇತನ್
ಕುಮಾರ್ ಶೆಟ್ಟಿ ಕಾರ್ಕಳ, ಕೃಷ್ಣ
ಪ್ರಸಾದ್ ರೈ, ಕಾವು ಹೇಮನಾಥ
ಶೆಟ್ಟಿ, ಜಯರಾಮ ಸಾಂತ, ಜಯಕರ
ಶೆಟ್ಟಿ ಇಂದ್ರಾಳಿ, ಸಂಪಿಗೇಡಿ ಸಂಜೀವ
ಶೆಟ್ಟಿ, ಸುನೀಲ್ ಕುಮಾರ್ ಶೆಟ್ಟಿ
ಕಾರ್ಕಳ, ಚಂದ್ರಹಾಸ ಡಿ. ಶೆಟ್ಟಿ, ಆಶಾಲತಾ
ಬಿ. ರೈ, ಬೆಳ್ತಂಗಡಿ, ಎಂ.
ದಯಾನಂದ ರೈ ಪುತ್ತೂರು, ಪಿ.ಬಿ. ದಿವಾಕರ ರೈ
ಸುಳ್ಯ, ಮುಕ್ತಾನಂದ ರೈ ಕಾಸರಗೋಡು ಸಭೆಯಲ್ಲಿ
ಆಯಾಯ ತಾಲೂಕಿನ ಪರವಾಗಿ ವರದಿ
ಮಂಡಿಸಿದರು.
ಸಭೆಯಲ್ಲಿ
ಪದಾಧಿಕಾರಿಗಳನ್ನು, ಕಾರ್ಯಕಾರಿ ಸಮಿತಿ ಸದಸ್ಯರನ್ನು ಗೌರವಿಸಲಾಯಿತು.
ಸಭೆಯಲ್ಲಿ ನಿಕಟಪೂರ್ವ ಕಾರ್ಯದರ್ಶಿ ಮೇಘನಾಥ ಶೆಟ್ಟಿ, ಕೋಶಾಧಿಕಾರಿ
ಸಿಎ ಮನಮೋಹನ ಶೆಟ್ಟಿ, ಚುನಾವಣಾಧಿಕಾರಿ
ಪೃಥ್ವಿರಾಜ್ ರೈ, ಉಪಚುನಾವಣಾಧಿಕಾರಿಗಳಾದ ಉಮೇಶ್
ಶೆಟ್ಟಿ, ನವೀನ್ ಶೆಟ್ಟಿ, ಲಾವಣ್ಯ
ಶೆಟ್ಟಿ, ಸಚ್ಚಿದಾನಂದ ಹೆಗ್ಡೆ, ಸಂಪರ್ಕ ಪತ್ರಿಕೆಯ
ಸಂಪಾದಕ ಬಿ. ರವೀಂದ್ರ ಶೆಟ್ಟಿ,
ಉಪಸಂಪಾದಕ ಜಗನ್ನಾಥ ಶೆಟ್ಟಿ ಬಾಳ
ಅವರನ್ನು ಸನ್ಮಾನಿಸಲಾಯಿತು.
ಮೇಘನಾಘ
ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು.
ಸಿಎ. ಮನಮೋಹನ ಶೆಟ್ಟಿ ಲೆಕ್ಕಪತ್ರಗಳನ್ನು
ಸಭೆಯಲ್ಲಿ ಮಂಡಿಸಿದರು. ಎಚ್. ಆರ್. ಶೆಟ್ಟಿ
ಲೆಕ್ಕ ಪರಿಶೋಧಕರನ್ನಾಗಿ ನೇಮಕ ಮಾಡಲಾಯಿತು. ಬಳಿಕ
ಸಂಘಕ್ಕೆ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅಧಿಕಾರ
ಸ್ವೀಕರಿಸಿದರು.ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಕೋಶಾಧಿಕಾರಿ
ರವೀಂದ್ರನಾಥ ಶೆಟ್ಟಿ, ಜೊತೆ ಕಾರ್ಯದರ್ಶಿ
ಹೇಮನಾಥ ಶೆಟ್ಟಿ ಉಪಸ್ಥಿತರಿದ್ದರು.
ನೂತನ ಕಾರ್ಯದರ್ಶಿ ವಸಂತ ಶೆಟ್ಟಿ ವಂದಿಸಿದರು.
ಪ್ರಕಾಶ್ ಮೇಲಾಂಟ ಕಾರ್ಯಕ್ರಮ ನಿರ್ವಹಿಸಿದರು.
www.buntsnews.com
-------------------------------------------------------------------------------------------------------------------------