ಬಂಟ್ಸ್ ನ್ಯೂಸ್.ಕಾಂ, ಬಹರೈನ್: ಇಲ್ಲಿನ ಅನಿವಾಸಿ ಬಂಟರ
ಸಂಘಟನೆಯಾದ " ಬಂಟ್ಸ್ ಬಹರೈನ್ ಪ್ರಸ್ತುತಪಡಿಸಿದ
"ಕರಾವಳಿ ಉತ್ಸವ -2016 " ಎನ್ನುವ ಬ್ರಹತ್ ಸಾಂಸ್ಕ್ರತಿಕ
ಕಾರ್ಯಕ್ರಮವನ್ನು ಅಕ್ಟೋಬರ್ ತಿಂಗಳ 14ರಂದು ಮನಾಮದಲ್ಲಿರುವ
ಅಲ್ ರಾಜಾ ಸ್ಕೂಲಿನ ಸಭಾಂಗಣದಲ್ಲಿ
ಆಯೋಜಸಲಾಗಿತ್ತು.
ಕಳೆದ ಹನ್ನೆರಡು ವರುಷಗಳಿಂದ ದ್ವೀಪದಲ್ಲಿ ಅಸ್ತಿತ್ವದಲ್ಲಿದ್ದು ಸಮುದಾಯದ ನೋವು ನಲಿವುಗಳಿಗೆ
ಸ್ಪಂದಿಸುವುದರ ಜೊತೆಗೆ ಸಾಂಸ್ಕ್ರತಿಕ ರಂಗದಲ್ಲೂ
ಮುಂಚೂಣಿಯಲ್ಲಿರುವ ಬಂಟ್ಸ್ ಬಹರೈನ್ ಪ್ರಪ್ರಥಮ
ಬಾರಿಗೆ ದ್ವೀಪದ ತುಳುವ ,ಕನ್ನಡ
ಸಮುದಾಯವನ್ನು ತನ್ನ ಮುಖ್ಯವಾಹಿನಿಯಲ್ಲಿ ಸೇರಿಸ್ಕೊಂಡು
"ಕರಾವಳಿ ಉತ್ಸವ -2016 " ಎನ್ನುವ ಬ್ರಹತ್ ಸಾಂಸ್ಕ್ರತಿಕ
ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು .
"ಭಲೇ
ತೆಲಿಪಾಲೆ " ಹಾಸ್ಯ ಪ್ರಹಸನ ಸ್ಪರ್ಧೆಯ
ಮೂರು ಆವೃತ್ತಿಗಳಲ್ಲೂ ಶ್ರೇಷ್ಠ ಪ್ರದರ್ಶನ ನೀಡಿ
ಪ್ರಥಮ ಬಹುಮಾನವನ್ನು ಗಳಿಸುವುದರ ಜೊತೆಗೆ ತುಳುರಂಗಭೂಮಿಯಲ್ಲಿ ಹಾಸ್ಯದ ಹೊಸ
ಅಧ್ಯಾಯವನ್ನು ಬರೆದು , ದೇಶ ವಿದೇಶಗಳಲ್ಲಿ
ಪ್ರದರ್ಶನ ನೀಡಿ ಎಲ್ಲರ ಮನೆ
ಮಾತಾಗಿರುವ " ಪ್ರಶಂಸಾ " ತಂಡವು ಕರಾವಳಿ ಉತ್ಸವದ
ಪ್ರಮುಖ ಆಕರ್ಷಣೆಯಾಗಿ ತಮ್ಮ ಹಾಸ್ಯ ಪ್ರದರ್ಶನದಿಂದ
ದ್ವೀಪದ ಜನರಿಗೆ ನಗೆಯ ಕಚಗುಳಿ
ನೀಡಿದೆ . "ರಂಗಿ ತರಂಗ " ಹಾಗು
"ಯೂ ಟರ್ನ್ " ಚಿತ್ರಗಳ ಖ್ಯಾತಿಯ ನಾಯಕ
ನಟಿ ಚೇತನಾ ರಾಧಿಕ್ ರವರು
ಈ ಕಾರ್ಯಕ್ರಮಕ್ಕಾಗಿಯೇ ದ್ವೀಪಕ್ಕೆ
ವಿಶೇಷವಾಗಿ ಆಗಮಿಸಲಿದ್ದು ಕರಾವಳಿ ಉತ್ಸವಕ್ಕೆ ಹೆಚ್ಚಿನ
ಮೆರುಗು ನೀಡಲಿದ್ದಾರೆ . ಈ ಉತ್ಸವವನ್ನು ಇನ್ನಷ್ಟು
ಅರ್ಥಪೂರ್ಣವಾಗಿಸಲು ನಾಡಿನಿಂದ ಅನೇಕ ಬಂಟ ಸಾಧಕರುಗಳು
ದ್ವೀಪಕ್ಕೆ ಆಗಮಿಸಿದ್ದು ಖ್ಯಾತ ಸಮಾಜಸೇವಕರೂ ,ಕೊಲ್ಲೂರು
ಮೂಕಾಂಬಿಕಾ ದೇಗುಲದ ಧರ್ಮದರ್ಶಿಗಳೂ ಆಗಿರುವ
ಕೃಷ್ಣ ಪ್ರಸಾದ್ ಅಡ್ಯಂತಯ್ಯ ,ಕಟ್ಟಡ
ನಿರ್ಮಾಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿ
ಅನೇಕ ರಾಷ್ಟ್ರೀಯ ಪುರಸ್ಕಾರಗಳಿಗೆ ಭಾಜನರಾಗಿರುವ ಖ್ಯಾತ ವಾಸ್ತು ಶಿಲ್ಪಿ
ಜೀವನ್ ಶೆಟ್ಟಿ ,ಅಂತರಾಷ್ಟ್ರೀಯ ರೂಪದರ್ಶಿ
ಮನೋಜ್ ಶೆಟ್ಟಿ ,ಅಬುಧಾಬಿಯ ಖ್ಯಾತ
ಸಮಾಜ ಸೇವಕ ರಾಜ್ಯೋತ್ಸವ ಪ್ರಶಸ್ತಿ
ವಿಜೇತ ಸರ್ವೋತ್ತಮ ಶೆಟ್ಟಿ ಮುಂತಾದವರು ಈ
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಪಾಲ್ಗೊಂಡಿದ್ದಾರೆ
.
ಕರಾವಳಿ
ಉತ್ಸವದಲ್ಲಿ ಕರಾವಳಿಯ ಸಾಂಪ್ರದಾಯಿಕ ಕಲೆ
,ಸಂಸ್ಕ್ರತಿಗಳಿಗೆ ವಿಶೇಷ ಮಾನ್ಯತೆ ನೀಡಲಾಗಿದ್ದು
ಕರಾವಳಿಯ ವೈವಿಧ್ಯಮಯ ಕಲಾ ಪ್ರಕಾರಗಳು ಈ
ಉತ್ಸವದಲ್ಲಿ ಅನಾವರಣಗೊಂಡಿದೆ. ಕರಾವಳಿಯ ಸಾಂಪ್ರದಾಯಿಕ ಆಹಾರ
ಪದಾರ್ಥಗಳ ಬ್ರಹತ್ ಪ್ರದರ್ಶನ ಈ
ಉತ್ಸವದಲ್ಲಿ ಆಯೋಜಿಸಲಾಗಿದೆ
. ಕೊಲ್ಲಿ ರಾಷ್ಟ್ರಗಳ ಕಲಾ ಪ್ರತಿಭೆಗಳಿಗೆ ಈ
ಉತ್ಸವದಲ್ಲಿ ವಿಶೇಷ ವೇದಿಕೆ ಕಲ್ಪಿಸಲಾಗಿದ್ದು
ದುಬೈ ಸೇರಿದಂತೆ ತಲಾ 15 ಕಲಾವಿದರುಗಳನ್ನೊಳಗೊಂಡ ಒಟ್ಟು
ಏಳು ತಂಡಗಳು 20 ನಿಮಿಷಗಳ
ವೈವಿಧ್ಯಮಯ ಕಲಾಪ್ರದರ್ಶನವನ್ನು ನೀಡಿದೆ. ಅಂತಿಮವಾಗಿ ಕ್ರಮವಾಗಿ
ವಿಶ್ವ ತರಂಗ ತಂಡ ಪ್ರಥಮ
ತುಳುನಾಡ ತುದಾರ್ ದ್ವಿತೀಯ ಮತ್ತು
ಯು ಏ ಈ ಬಂಟ್ಸ್
ತ್ರತೀಯಾ ಸ್ಥಾನ ಗಳನ್ನು ಪಡೆದುಕೊಂಡವು.
ಸಾಂಸ್ಕೃತಿಕ ಮೆರವಣಿಗೆಯಲ್ಲಿ ತುಳುನಾಡ ಕಲಶ ತಂಡ
ಪ್ರಥಮ ಸ್ಥಾನ ಪಡೆದುಕೊಂಡಿತು. . ವಿಜೇತ
ತಂಡಗಳಿಗೆ ನಗದು ಬಹುಮಾನದ ಜೊತೆಗೆ
ಟ್ರೋಫಿಯನ್ನು ನೀಡಲಾಯಿತು. . ತುಳುನಾಡಿನ ಖ್ಯಾತ ನಟ ,ನಿರೂಪಕ
ಆರ್ .ಜೆ ರೂಪೇಶ್ ಶೆಟ್ಟಿ ಕಾರ್ಯಕ್ರಮವನ್ನು
ತುಂಬಾ ಚೆನ್ನಾಗಿ ನೆರವೇರಿಸಿ ಕೊಟ್ಟರು.
ಬಂಟ್ಸ್
ಬಹರೈನ್ ನ ಅಧ್ಯಕ್ಷರಾದ ಶ್ರೀ
ರಾಜೇಶ್ ಶೆಟ್ಟಿ ಯವರ ಸಾರಥ್ಯದಲ್ಲಿ
ಬಂಟ್ಸ್ ಬಹರೈನ್ ಆಡಳಿತ ಮಂಡಳಿಯು
ಇದಾಗಲೇ ಅನೇಕ ರೂಪುರೇಷೆಗಳನ್ನು ಹಾಕಿಕೊಂಡಿದ್ದು
ಈ ಉತ್ಸವ ದ್ವೀಪದಲ್ಲಿ
ಒಂದು ದೊಡ್ಡ ಮೈಲಿಗಲ್ಲಾಯಿತು . ಅಕ್ಟೋಬರ್
14ರ ಅಪರಾಹ್ನ ಒಂದು ಘಂಟೆಗೆ
ಪಾರ್ಥನೆಯೊಂದಿಗೆ ಈ ಉತ್ಸವಕ್ಕೆ ವಿದ್ಯುಕ್ತ
ಚಾಲನೆ ದೊರೆತಿದ್ದು ರಾತ್ರಿ 10 ಘಂಟೆಗೆ ಸಮಾರೋಪ ಸಮಾರಂಭದೊಂದಿಗೆ
ಮುಕ್ತಾಯಗೊಂಡಿದೆ. ದ್ವೀಪದ ಸುಮಾರು 1500 ಕ್ಕೂ
ಮಿಕ್ಕಿ ತುಳು ಕನ್ನಡ ಭಾಷಿಗರು
ಮೊದಲಿಂದ ಕೊನೆಯವರೆಗೂ ಕಾರ್ಯಕ್ರಮದ ಸವಿಯನ್ನುಂಡರು. www.buntsnews.com
------------------------------------------------------------------------------------------------------------------------