ಬಂಟ್ಸ್ ನ್ಯೂಸ್.ಕಾಂ, ದೋಹಾ: ಬಂಟ್ಸ್ ಕತಾರ್ ಇದರ 5ನೇ
ವಾರ್ಷಿಕೋತ್ಸವವು ದೋಹಾದ ಗಿವಾನ ಬಾಲ್’ರೂಂ ಸಭಾಂಗಣದಲ್ಲಿ ನವೆಂಬರ್ 18ರಂದು ಸಂಭ್ರಮ ಸಡಗರದಿಂದ
ಜರಗಿತು.
ಕಾರ್ಯಕ್ರಮದ
ಮುಖ್ಯ ಅತಿಥಿಯಾಗಿ ಬಾಲಿವುಡ್’ನ ಖ್ಯಾತ ನಟ ಸುನೀಲ್ ಶೆಟ್ಟಿ, ಕತಾರ್ ಭಾರತೀಯ ರಾಯಭಾರಿ
ಪಿ.ಕುಮಾರನ್, ಪುತ್ತೂರು ಶಾಸಕಿ ಶಕುಂತಲ ಶೆಟ್ಟಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಕತಾರ್ ಬಂಟ
ಬಾಂಧವರಿಂದ ನಾನಾ ರೀತಿಯ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ಜರಗಿದವು. ಶಿಲ್ಪಾ ವೆಂಕಟೇಶ್
ಹಾಗೂ ನಿಶಾನ್ ರೈ ಅವರು ನಡೆಸಿಕೊಟ್ಟ ಸಂಗೀತ ರಸಮಂಜರಿಯು ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಖ್ಯಾತ ಬಾಲಿವುಡ್ ನಟ ಸುನೀಲ್ ಶೆಟ್ಟಿ ಹಾಗೂ ಶಾಸಕಿ ಶಕುಂತಲ ಶೆಟ್ಟಿ ಅವರಿಗೆ
ಗೌರವ ಸನ್ಮಾನವು ಕತಾರ್ ಬಂಟ್ಸ್ ಸಂಘದ ವತಿಯಿಂದ ನಡೆಯಿತು.
ವೇದಿಕೆಯಲ್ಲಿ
ಕತಾರ್ ಬಂಟ್ಸ್ ಸಂಘದ ಸ್ಥಾಪಕ ಅಧ್ಯಕ್ಷ ರವಿ ಶೆಟ್ಟಿ ಮೂಡಂಬೈಲ್, ಕತಾರ್ ಬಂಟ್ಸ್ ಸಂಘದ ಅಧ್ಯಕ್ಷ
ನವನೀತ ಶೆಟ್ಟಿ, ಉಪಾಧ್ಯಕ್ಷ ರಾಮಚಂದ್ರ ಶೆಟ್ಟಿ,
ಕಾರ್ಯದರ್ಶಿ ಉದಯ್ ಶೆಟ್ಟಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ರೋಶನ್
ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ಚೈತಾಲಿ ಉದಯ್ ಶೆಟ್ಟಿ ವಂದಿಸಿದರು. www.buntsnews.com
-----------------------------------------------------------------------------------------------------------------------
-----------------------------------------------------------------------------------------------------------------------