ಬಂಟ್ಸ್ ನ್ಯೂಸ್.ಕಾಂ, ಅಹಮದಾಬಾದ್: ಗುಜರಾತಿನ ಅಹಮದಾದ್ ಬಂಟರ ಸಂಘದ 13ನೇ ಸರ್ವ ಸದಸ್ಯರ
ಮಹಾಸಭೆಯು ನವಂಬರ್ 20ರಂದು ಮೆಹದಿ ನವಾಬ್ ಜಂಗ್ ಸಭಾಭವನದಲ್ಲಿ ಜರಗಿತು.
ಮಹಾಸಭೆಯ ಅಧ್ಯಕ್ಷತೆಯನ್ನು
ಅಪ್ಪು ಪಿ ಶೆಟ್ಟಿಯವರು ವಹಿಸಿದ್ದರು. ಗಾಂಧೀಧಾಮದ ಉದ್ಯಮಿ ಸದಾಶಿವ ಶೆಟ್ಟಿಯವರು ಮುಖ್ಯ ಅಥಿತಿಗಳಾಗಿ
ಆಗಮಿಸಿದ್ದರು. ಸಮಾರಂಭದಲ್ಲಿ ಹಿರಿಯರಾದ ಶಿವರಾಮ ಶೆಟ್ಟಿ, ಯಶಸ್ವಿ ಸ್ವಉದ್ಯೋಗಿ ಬಂಟ ಮಹಿಳೆ ಶುಭದಾ
ಎಸ್ ಶೆಟ್ಟಿಯವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಭೆಯಲ್ಲಿ ಮುಂದಿನ ಎರಡು ವರ್ಷಗಳ
ಅವಧಿಗೆ ಅಧ್ಯಕ್ಷರಾಗಿ ಅಪ್ಪು ಪಿ ಶೆಟ್ಟಿ, ಉಪಾಧ್ಯಕ್ಷರಾಗಿ ಜಗನ್ನಾಥ ಶೆಟ್ಟಿ, ಶಕುಂತಳಾ ಶೆಟ್ಟಿಯವರು
ಆಯ್ಕೆಯಾದರು. ಸಂಘದ ಕಾರ್ಯದರ್ಶಿಗಳಾಗಿ ನಿತೇಶ್ ಎಸ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ರವೀಂದ್ರ
ಶೆಟ್ಟಿ, ಖಜಾಂಚಿಯಾಗಿ ಅಪ್ಪು ಎ ಶೆಟ್ಟಿ, ಉಪಖಜಾಂಚಿಯಾಗಿ ಸುದರ್ಶನ ಶೆಟ್ಟಿಯವರು ಸರ್ವಾನುಮತದಿಂದ
ಪುನರಾಯ್ಕೆಯಾದರು. ಇದಲ್ಲದೆ, 13 ಮಂದಿ ಸಮಿತಿ ಸದಸ್ಯರನ್ನೂ ಸರ್ವಾನುಮತದಿಂದ ಆರಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಜನೆಯಲ್ಲಿ
ಉತ್ತಮ ಅಂಕಗಳನ್ನು ಗಳಿಸಿದ, ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಗೈದ ಬಂಟಮಕ್ಕಳನ್ನು ಪ್ರೋತ್ಸಾಹಿಸಲಾಯಿತು.
ಬರೋಡಾ ತುಳುಸಂಘದ ಅಧ್ಯಕ್ಷ ಶಶಿಧರ ಶೆಟ್ಟಿಯವರು ಸಮಾರಂಭಕ್ಕೆ ಶುಭಕೋರಿದರು.
ತದನಂತರ, ನಮ್ಮ ತುಳು ಹಾಗೂ
ಬಂಟ ಸಂಸ್ಕ್ರತಿಯನ್ನು ಬಿಂಬಿಸುವ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಸಂಘದ ಸದಸ್ಯರಿಂದ ಪ್ರದರ್ಶಿಸಲ್ಪಟ್ಟವು.
ಸಂಘದ ಸ್ಥಾಪಕಾಧ್ಯಕ್ಷ ಅಜೆಕಾರು ಸಂಜೀವ ಶೆಟ್ಟಿಯವರು ಸ್ವಾಗತಿಸಿದರು. ಸುದರ್ಶನ ಶೆಟ್ಟಿಯವರು ವಂದನಾರ್ಪಣೆ
ಮಾಡಿದರು. ಪುರುಷೋತ್ತಮ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು.
ವರದಿ: ನಾರಾಯಣ ರೈ (ಬಂಟ್ಸ್ ನ್ಯೂಸ್ ಅಹಮದಾಬಾದ್
ವರದಿಗಾರರು – www.buntsnews.com )
------------------------------------------------------------------------