ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ದರ್ಬೆತ್ತಡ್ಕದ ಕೃತಿಕಾ ಶೆಟ್ಟಿ ಆಯ್ಕೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ದರ್ಬೆತ್ತಡ್ಕದ ಕೃತಿಕಾ ಶೆಟ್ಟಿ ಆಯ್ಕೆ

Share This
ಬಂಟ್ಸ್ ನ್ಯೂಸ್.ಕಾಂ, ಪುತ್ತೂರು: ಬಾಗಲಕೋಟೆಯಲ್ಲಿ ಜರಗಿದ ರಾಜ್ಯಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಪುತ್ತೂರು  ದರ್ಬೆತ್ತಡ್ಕದ ಉದಯ್ ಕುಮಾರ್ ಶೆಟ್ಟಿ ಮತ್ತು ವೈಶಲತಾ ದಂಪತಿಯ ಪುತ್ರಿ ಕೃತಿಕಾ ಶೆಟ್ಟಿ ಅವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಂಟ್ಸ್ ನ್ಯೂಸ್.ಕಾಂ, ಪುತ್ತೂರು: ಬಾಗಲಕೋಟೆಯಲ್ಲಿ ಜರಗಿದ ರಾಜ್ಯಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಪುತ್ತೂರು  ದರ್ಬೆತ್ತಡ್ಕದ ಉದಯ್ ಕುಮಾರ್ ಶೆಟ್ಟಿ ಮತ್ತು ವೈಶಲತಾ ದಂಪತಿಯ ಪುತ್ರಿ ಕೃತಿಕಾ ಶೆಟ್ಟಿ ಅವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪುತ್ತೂರಿನ ವಿವೇಕಾನಂದ ಪ್ರಾಥಮಿಕ ಹಾಗೂ ಫ್ರೌಡಶಾಲೆ ತೆಂಕಿಲ, ಇಲ್ಲಿನ ಎಂಟನೇ ತರಗತಿ ವಿದ್ಯಾರ್ಥಿನಿಯಾಗಿರುವ ಕೃತಿಕಾ ಅವರು ಕ್ರೀಡಾಕೂಟದಲ್ಲಿ ವೈಯಕ್ತಿಕವಾಗಿ 100 ಮತ್ತು 200 ಮೀಟರ್ ಓಟದಲ್ಲಿ ತೃತೀಯ ಹಾಗೂ ಪ್ರಥಮ ಸ್ಥಾನ, 400 ಮೀಟರ್ ರಿಲೇಯಲ್ಲಿ ಪ್ರಥಮ ಹಾಗೇನೇ ಸಮಗ್ರ ಕ್ರೀಡಾ ಸಾಧನೆಗೆ ವೈಯುಕ್ತಿಕ ಚಾಂಪಿಯನ್ ಗಿಟ್ಟಿಸಿಕೊಂಡಿದ್ದಾಳೆ.

ಇವರು ಈಗಾಗಲೇ ಹೈದರಾಬಾದ್, ಕಂಠೀರವ ಕ್ರೀಡಾಂಗಣ ಬೆಂಗಳೂರು ಮತ್ತು ಧಾರವಾಡದಲ್ಲಿ ನಡೆದಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಅಕ್ಕ ಧನುಷಾ ಕೂಡ ಪ್ರತಿಭಾನ್ವಿತ ಕ್ರೀಡಾಪಟುವಾಗಿದ್ದು ಹಲವೆಡೆ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಪ್ರಸ್ತುತ ಸಹೋದರಿಯರಿಬ್ಬರು ಪ್ರೇಮನಾಥ ಶೆಟ್ಟಿ ಎಡಪದವು ಮತ್ತು ದಾಮೋದರ್ ಬೆಟ್ಟಂಪಾಡಿ ಇವರುಗಳಿಂದ ತರಬೇತಿ ಪಡೆಯುತ್ತಿದ್ದಾರೆ.www.buntsnews.com ಬಂಟ್ಸ್ ನ್ಯೂಸ್ ವರ್ಲ್ಡ್
ವರದಿ: ಸೂರಜ್ ರೈ ಕುಂಬ್ರ [ಬಂಟ್ಸ್ ನ್ಯೂಸ್.ಕಾಂ ವರದಿಗಾರರು – www.buntsnews.com
↔↔↔↔↔↔↔↔↔↔↔↔↔↔↔↔↔↔↔↔↔↔↔↔↔↔↔↔↔↔↔↔↔↔↔↔↔↔↔

Pages