ಬಂಟ್ಸ್ ನ್ಯೂಸ್.ಕಾಂ, ಮಂಗಳೂರು:
2016ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ
ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಸಮಾಜ ಸೇವಕ ರವಿ ಶೆಟ್ಟಿ ಮೂಡಂಬೈಲು ಅವರು ಪಡೆದಿದ್ದಾರೆ.
ಇಂದು ನೆಹರು ಮೈದಾನದಲ್ಲಿ
ನಡೆದ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಉಸ್ತುವಾರಿ ಸಚಿವ ರಮಾನಾಥ ರೈ, ಎಮ್ಎಲ್ಸಿ
ಐವನ್ ಡಿಸೋಜಾ ಅವರುಗಳು ರವಿ ಶೆಟ್ಟಿ ಮೂಡಂಬೈಲು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಹಿಂದೆಯಷ್ಟೇ ಮೂಡಂಬೈಲು ರವಿ
ಶೆಟ್ಟಿ ಅವರ ಸಮಾಜ ಸೇವೆಗಾಗಿ
ಪ್ರತಿಷ್ಠಿತ ಆರ್ಯಭಟ ಇಂಟರ್ನ್ಯಾಶೀನಲ್ ಆವಾರ್ಡ್
– 2015ಗೆ ಪಾತ್ರರಾಗಿದ್ದರು. ಮೂಡಂಬೈಲು
ರವಿ ಶೆಟ್ಟಿ ಅವರು ಈಗಾಗಲೇ
ತಮ್ಮ ಸಾಮಾಜಿಕ ಸೇವೆಗಳಿಗಾಗಿ ಹಲವು
ಪ್ರಶಸ್ತಿಗಳಿಗೆ ಪಾತ್ರರಾಗಿದ್ದು ಮುಂದಿನ ದಿನಗಳಲ್ಲಿ ಅವರ ನಿಸ್ವಾರ್ಥ ಸಮಾಜ
ಸೇವೆಗೆ ಇನ್ನಷ್ಟು ಪ್ರಶಸ್ತಿಗಳು ಸಿಗಲಿ ಎಂದು ಬಂಟ್ಸ್
ನ್ಯೂಸ್ ಹಾರೈಸುತ್ತಿದೆ.
ಇದೇ ಸಂದರ್ಭ ಯೋಗ
ಸಾಧಾನೆಗಾಗಿ ಜಗದೀಶ್ ಶೆಟ್ಟಿ ಅವರು ಕೂಡ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದರು.
------------------------------------------------------------------------------------------------