ತುಳು ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸುವ ಅಗತ್ಯವಿದೆ: ಗಾಯಕ ಗುರುಕಿರಣ್ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ತುಳು ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸುವ ಅಗತ್ಯವಿದೆ: ಗಾಯಕ ಗುರುಕಿರಣ್

Share This
ಬಂಟ್ಸ್ ನ್ಯೂಸ್.ಕಾಂ,ಮಂಜೇಶ್ವರ: ತುಳು ಸಂಸ್ಕ್ರತಿ ಆಚಾರ ವಿಚಾರಗಳನ್ನು ಉಳಿಸಬೇಕಾದುದು ಅತೀ ಅಗತ್ಯ,ಇಂತಹ ಸಂಸ್ಕ್ರತಿಯನ್ನು ನೆನಪಿಸುವ ಗುತ್ತಿನ ಮನೆಗಳಿಗೆ ಬಂದಾಗ ಭಾವನೆಗಳು ಅರಳುತ್ತದೆ. ಹಳ್ಳಿಯ ಜೀವನದ ಆನಂದ ನಗರ ಪ್ರದೇಶದಲ್ಲಿ ಸಿಗಲು ಸಾಧ್ಯವಿಲ್ಲ ಎಂದು ಖ್ಯಾತ ಗಾಯಕ ಸಂಗೀತ ನಿರ್ದೇಶಕರಾದ ಗುರುಕಿರಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಪಟ್ಟತ್ತಮೊಗರು ಚಾವಡಿಮನೆಯಲ್ಲಿ ಮಜಿಬೈಲು ಬಂಟ್ಸ್ ವತಿಯಿಂದ ನಡೆದ ತುಡರ್ ಪರ್ಬ(ದೀಪಾವಳಿ ಹಬ್ಬ) ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಪಟ್ಟತ್ತಮೊಗರು ಚಾವಡಿಮನೆಯ ಯಜಮಾನರಾದ ರಾಮ್ ಪ್ರಕಾಶ್ ಆಳ್ವರವರು ಉದ್ಘಾಟಿಸಿದರು. ಯಜಮಾನ ದಿವಂಗತ ರಾಮಪ್ಪ ಆಳ್ವ ವೇದಿಕೆಯಲ್ಲಿ ದೀಪಾವಳಿ ಪರ್ಬದ ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಸಂಘ ಮಂಜೇಶ್ವರ ಫಿರ್ಕಾದ ಅಧ್ಯಕ್ಷ ಕುಳೂರು ಬೀಡು ದಾಸಣ್ಣ ಆಳ್ವ ವಹಿಸಿದ್ದರು.

ಕಾರ್ಯಕ್ರಮದಲ್ಲಿ .ಬಿ ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರೋ. ಡಾ.ಪ್ರಜ್ವಲ್ ಶೆಟ್ಟಿ ಮಜಿಬೈಲು, ತುಳು ಚಲನಚಿತ್ರ ರಂಗದ ನಿರ್ದೇಶಕರಾದ ಸೂರಜ್ ಶೆಟ್ಟಿ ಕಂಗುಮೆ ಮಜಿಬೈಲು ಇವರನ್ನು ಸನ್ಮಾನಿಸಲಾಯಿತು. ನೃತ್ಯ, ಯೋಗಾಸನ ಪ್ರದರ್ಶನ ಇನ್ನಿತರ ಸಾಂಸ್ಕೃತಿಕ ಮನೋರಂಜನಾ, ವಿವಿಧ ಆಟೋಟ ಸ್ಪರ್ದೆಗಳು ನಡೆದವು.
ನಮ್ಮ ಟಿ.ವಿ ಬಲೆ ತೆಲಿಪಾಲೆ ಸೀಸನ್ 3 ದ್ವೀತೀಯ ಪ್ರಶಸ್ತಿ ವಿಜೇತ ಸಮಗ್ರ ಸಾರಥಿ ತಂಡದಿಂದ ಬಲೆ ತೆಲಿಪಾಲೆ 1.30 ಗಂಟೆಗಳ ಹಾಸ್ಯ ಪ್ರಹಸನ ಕಾರ್ಯಕ್ರಮ ನಡೆಯಿತು. ಬಳಿಕ ತುಳುನಾಡಿನ ಸ್ವಾದೀಷ್ಟ ಭೋಜನ ,ತುಳುನಾಡಿನ ಪ್ರಾಚೀನ ಪರಿಕರಗಳ ಪ್ರದರ್ಶಾನ ಮತ್ತು ದೀಪಾವಳಿ ಹಬ್ಬದ ಅಂಗವಾಗಿ ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಿತು.

ಮುಖ್ಯ ಅತಿಥಿಗಳಾಗಿ ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಸದಾನಂದ ರೈ,ಕ್ಯಾಂಪೆÇ್ಕೀ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ, ಕಾಸರಗೋಡು ಜಿಲ್ಲಾ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಎಂ ದಾಮೋದರ ಶೆಟ್ಟಿ,ಬಂಟರ ಸಂಘ ಮೀಂಜ ಘಟಕದ ಅಧ್ಯಕ್ಷ ನಾರಾಯಣ ನಾಯ್ಕ್ ನಡುಹಿತ್ತಿಲು, ದೇವಿ ಚರಣ್ ಶೆಟ್ಟಿ,ರಘು ಶೆಟ್ಟಿ ಕುಂಜತ್ತೂರು, ವಿಶ್ವಹಿಂದೂ ಪರಿಷತ್ ಮುಖಂಡ ಜಗದೀಶ್ ಶೇಣವ, ಬಂಟರ ಸಂಘ ಮಂಜೇಶ್ವರ ಫಿರ್ಕಾದ ಅಧ್ಯಕ್ಷ ಕುಳೂರು ಬೀಡು ದಾಸಣ್ಣ ಆಳ್ವ,ಜಿಲ್ಲಾ ಬಂಟ್ಸ್ ಸಂಘದ ಸದಸ್ಯ ವಸಂತರಾಜ್,ಕಾರ್ಯದರ್ಶಿ ದಾಮೋದರ ಶೆಟ್ಟಿ ಮಜಿಬೈಲು,ಆನಂದ ಶೆಟ್ಟಿ ಮಾಟೆ,ವಿಶ್ವನಾಥ ಆಳ್ವ ಕರಿಬೈಲು,ರವೀಂದ್ರ ಶೆಟ್ಟಿ ಕರಿಬೈಲು,ಮಾರಪ್ಪ ಶೆಟ್ಟಿ ಕೌಡೂರು ಬೀಡು ಹಾಗೂ 5 ಗ್ರಾಮದ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉದಯ ಕುಮಾರ್ ಶೆಟ್ಟಿ ಕರಿಬೈಲು ಸ್ವಾಗತಿಸಿದರು. ಅಂತರಾಷ್ಟ್ರೀಯ ನಿರೂಪಕ ಸಾಹಿಲ್ ರೈ ಕಾರ್ಯಕ್ರಮ ನಿರೂಪಿಸಿದರು. ಅಣ್ಣಪ್ಪ ಹೆಗ್ಡೆ ಕರಿಬೈಲು ವಂದಿಸಿದರು.  www.buntsnews.com
--------------------------------------------------------------------------------------------------------------------------

Pages