ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳ ಆಯ್ಕೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

Share This
ಬಂಟ್ಸ್ ನ್ಯೂಸ್.ಕಾಂ, ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮಂಗಳೂರಿನಲ್ಲಿ ಇತ್ತಿಚೇಗೆ ನಡೆಯಿತು.
ಚುನಾವಣಾ ಆಯೋಗ ಪದಾಧಿಕಾರಿಗಳ ಆಯ್ಕೆಗೆ ಬಂಟ್ಸ್ ಹಾಸ್ಟೆಲ್ ಬಳಿಯ ಅಮೃತೋತ್ಸವ ಕಟ್ಟಡದಲ್ಲಿ ಕಾರ್ಯಸೂಚಿಯನ್ನು ಸಿದ್ದಪಡಿಸಿ ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸಿತ್ತು. ಉಪಾಧ್ಯಕ್ಷರಾಗಿ ಕೆಂಚನೂರು ಸೋಮಶೇಖರ ಶೆಟ್ಟಿ (ಕುಂದಾಪುರ), ಕಾರ್ಯದರ್ಶಿಯಾಗಿ ವಸಂತ ಶೆಟ್ಟಿ (ಮಂಗಳೂರು), ಕೋಶಾಧಿಕಾರಿಯಾಗಿ ರವೀಂದ್ರನಾಥ ಶೆಟ್ಟಿ (ಮಂಗಳೂರು), ಜತೆ ಕಾರ್ಯದರ್ಶಿಯಾಗಿ ಕಾವು ಹೇಮನಾಥ ಶೆಟ್ಟಿ (ಪುತ್ತೂರು ತಾಲೂಕು), ನಾಮಪತ್ರ ಸಲ್ಲಿಸಿದ್ದು ಬಳಿಕ ಅವರು ಅವಿರೋಧವಾಗಿ ಆಯ್ಕೆಗೊಂಡರು. ಚುನಾವಣಾಧಿಕಾರಿಗಳಾದ ಪೃಥ್ವೀರಾಜ ರೈ ಮತ್ತು ಉಮೇಶ್ ಶೆಟ್ಟಿ, ಪ್ರಕಿಯೆ ನಡೆಸಿಕೊಟ್ಟರುಲಾವಣ್ಯ ಶೆಟ್ಟಿ ಪ್ರಸ್ತಾವನೆಗೈದರು.

ಅವಿರೋಧವಾಗಿ ಆಯ್ಕೆಗೊಂಡ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಚುನಾವಣಾಧಿಕಾರಿಗಳು ಅಭಿನಂದಿಸಿದರು. ಸಭೆಯಲ್ಲಿ ಎಲ್ಲಾ ಪದಾಧಿಕಾರಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಿಗೆ ಸರ್ಟಿಫಿಕೇಟ್ ನೀಡಲಾಯಿತು. ಸಂಘದ ಅಧ್ಯಕ್ಷ ಅಜಿತ್ಕುಮಾರ್ ರೈ ಮಾಲಾಡಿ ಅವರು ಚುನಾವಣಾಧಿಕಾರಿಗಳ ಕರ್ತವ್ಯಕ್ಕೆ ಶಾಘನೆಯನ್ನು ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.

ಸಭೆಯಲ್ಲಿ ಚುನಾವಣಾಧಿಕಾರಿಗಳಾದ ಪೃಥ್ವಿರಾಜ್ ರೈ, ಉಮೇಶ್ ಶೆಟ್ಟಿ ಎಸ್, ನವೀನ್ ಶೆಟ್ಟಿ, ರವಿಶಂಕರ್ ಆಳ್ವ, ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್, ಲಾವಣ್ಯ ಶೆಟ್ಟಿ, ಚಂದ್ರಶೇಖರ ಹೆಗ್ಡೆ, ಶಿವರಾಮ ಆಳ್ವ, ಸುಬ್ಬಣ್ಣ ಶೆಟ್ಟಿ, ರಾಜು ಶೆಟ್ಟಿ, ಜಯರಾಮ ರೈ  ನಿಕಟಪೂರ್ವ ಕಾರ್ಯದರ್ಶಿ ಮೇಘನಾಥ ಶೆಟ್ಟಿ, ಸಿಎ ಮನಮೋಹನ್ ಶೆಟ್ಟಿ, ಜಯರಾಮ ಸಾಂತ, ಹಾಗೂ ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ನೂತನ ಕಾರ್ಯಕಾರಿ ಸಮಿತಿ ಸದಸ್ಯರು, ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ನವೀನ್ ಶೆಟ್ಟಿ ವಂದಿಸಿದರು.
--------------------------------------------------------------------------------------------------------------------------

Pages