ಬಂಟರ ಹಿರಿಮೆಗೆ ಮತ್ತೊಂದು ಗರಿ “ಬಂಟ್ವಾಳದ ಬಂಟರ ಭವನ” ಲೋಕಾರ್ಪಣೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಂಟರ ಹಿರಿಮೆಗೆ ಮತ್ತೊಂದು ಗರಿ “ಬಂಟ್ವಾಳದ ಬಂಟರ ಭವನ” ಲೋಕಾರ್ಪಣೆ

Share This
ಬಂಟ್ಸ್ ನ್ಯೂಸ್.ಕಾಂ, ಬಂಟ್ವಾಳ: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಬಂಟರಭವನವನ್ನು ಸಾಂಪ್ರಾದಾಯಿಕ ಶೈಲಿಯಲ್ಲಿ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭ ನೂತನವಾಗಿ ಲೋಕಾರ್ಪಣೆಗೊಂಡ ಬಂಟರ ಭವನಕ್ಕೆ ಮಂಜುನಾಥ ಸ್ವಾಮೀಯ ಭಾವಚಿತ್ರ ಹಾಗೂ ಎರಡು ದೀಪಗಳನ್ನು ಕ್ಷೇತ್ರದ ವತಿಯಿಂದ ಕೊಡುಗೆಯಾಗಿ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಂಟ ಸಮಾಜದ ಪ್ರತಿಷ್ಠೆ, ಪರಂಪರೆ, ಸಾಧಾನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಕರಜನ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಶುಭಹಾರೈಸಿದರು. ಬಂಟರ ಯಾನೇ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಮಾಲಾಡಿ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ , ಸಂಸದ ನಳಿನ್ ಕುಮಾರ್ ಕಟೀಲ್ , ಸಚಿವ ಯು.ಟಿ.ಖಾದರ್, ಶಾಸಕರಾದ ಅಭಯಚಂದ್ರಜೈನ್, ಐವನ್ ಡಿ.ಸೋಜ, ಮೊಯ್ದೀನ್ ಬಾವಾ, ಶಾಸಕಿ ಶಕುಂತಳಾ ಶೆಟ್ಟಿ, ಜೆ.ಆರ್.ಲೋಬೋ, ಮುಂಭೈ ಸಂಸದ ಗೋಪಾಲ ಶೆಟ್ಟಿ , , ಕೆನರಾ ಬ್ಯಾಂಕ್ ಕಾರ್ಐನಿರ್ವಾಹಕ ನಿರ್ದೇಶಕ ಹರ್ದೀಶ್ ಕುಮಾರ್ ಶೆಟ್ಟಿ, ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಕಾರ್ಯದರ್ಶಿ ಡಾ.ಪಿ.ವಿ.ಶೆಟ್ಟಿ, ವೇದಿಕೆಯಲ್ಲಿ ಉದ್ಯಮಿಗಳಾದ ಬಿ.ಆರ್.ಶೆಟ್ಟಿ, ಪಿ.ವಿ.ಶೆಟ್ಟಿ ಬೆಳ್ಳೂರು ಪರಾರಿ, ಶಶಿಕಿರಣ್ ಶೆಟ್ಟಿ ಮುಂಬಯಿ, ಡಾ.ಆರ್.ಎನ್ ಶೆಟ್ಟಿ ಹುಬ್ಬಳ್ಳಿ, ಪ್ರಕಾಶ್ ಶೆಟ್ಟಿ, ಸುಧೀರ್ ಶೆಟ್ಟಿ,ಡಾ..ಜೆ.ಶೆಟ್ಟಿ, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಡಾ.ಎಂ.ಮೋಹನ್ ಆಳ್ವ, .ಸದಾನಂದ ಶೆಟ್ಟಿ, ಪದ್ಮನಾಭ ಪಯ್ಯಡೆ, ಜಲಂಧರ ಶೆಟ್ಟಿ, ಬಾಲಕೃಷ್ಣ ಹೆಗ್ಡೆ, ರಾಜೇಶ್ ಎಸ್.ಚೌಟ, ಕುಸುಮಾಧರ ಡಿ.ಶೆಟ್ಟಿ, ಸರಸ್ವತಿ ಜಿ.ರೈ, ಕೆ.ಪಿ.ಶೆಟ್ಟಿ ಮೊಡಂಕಾಪುಗೊತ್ತು, ಡಾ.ನಂದ ಕಿಶೋರ್ ಆಳ್ವ ಮಿತ್ತಳಿಕೆ, ರವಿಶೆಟ್ಟಿ ಮೂಡಂಬೈಲು, ವಿಶ್ವನಾಥ ಪಿ.ಶೆಟ್ಟಿ, ತಿಮ್ಮಪ್ಪ ನಾೈಕ್, ಸುಜೀರುಗುತ್ತು ಐತಪ್ಪ ಆಳ್ವ,, ಎಂ.ಸಿ.ಆರ್. ಶೆಟ್ಟಿ, ,ಪ್ಸನ್ನ ಶೆಟ್ಟಿ , ಕೃಷ್ಣಪ್ರಸಾದ್ ಅಡ್ಯಂತಾಯ, ಸಂತೋಷ್ ಶೆಟ್ಟಿ, ಸುರೇರ್ಶ ಆಳ್ವ, ಅಜಿತ್ ಚೌಟ, ಜಗನ್ನಾಥ ಚೌಟ, ಸುರೇಶ್ ರೈ, ರೋಹಿತ್ ಶೆಟ್ಟಿ ನಗ್ರಿಗುತ್ತು, ಸುಧಾಕರ ಪೂಂಜ, ಪದಾಧಿಕಾರಿಗಳಾದ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು, ಲೋಕನಾಥ ಶೆಟ್ಟಿ ಬಿ.ಸಿ.ರೋಡ್, ಸದಾನಂದ ಡಿ. ಶೆಟ್ಟಿ ರಂಗೋಲಿ, ಶಶಿರಾಜ ಶೆಟ್ಟಿ ಕೊಳಂಬೆ ಕಿರಣ್ ಹೆಗ್ಡೆ ಅನಂತಾಡಿ, ಪ್ರಫುಲ್ಲ ಆರ್. ರೈ ವಿಠಲಕೋಡಿ, ಚಂದ್ರಹಾಸ ಶೆಟ್ಟಿ ರಂಗೋಲಿ, ಜಗದೀಶ್ ಶೆಟ್ಟಿ ಇರಾಗುತ್ತು, ನವೀನ್ಚಂದ್ರ ಶೆಟ್ಟಿ ಮುಂಡಾಜೆಗುತ್ತು, ಚಂದ್ರಹಾಸ ರೈ ಬಾಲಾಜಿಬೈಲು, ಪದ್ಮನಾಭ ರೈ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಸ್ವಾಗತಿಸಿದರು. ಬಾಲಕೃಷ್ಣ ಆಳ್ವ ಕೋಡಾಜೆ, ಡಾ. ವಿಜೇತಾ ಶೆಟ್ಟಿ, ದೇವದಾಸ ಶಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ. ಪ್ರಶಾಂತ ಮಾರ್ಲ ವಂದಿಸಿದರು.

ಬಂಟ್ವಾಳದ ಬಂಟರ ಭವನದ ಹಿನ್ನೆಲೆ: ತುಳುನಾಡಿನ ಪ್ರತಿಷ್ಠಿತ ಬಂಟ ಸಮಾಜದ ಹಿರಿಮೆಗೆ ಮತ್ತೊಂದು ಗರಿ. ಬಂಟವಾಳದ ಬಂಟರ ಸಂಘ ಸುಮಾರು ದಶಕಗಳ ಹಿಂದೆ 2003ನೇ ಇಸವಿಯಲ್ಲಿ ಹರೀಶ್ ಶೆಟ್ಟಿ ಬಂಟ್ವಾಳ ಇವರ ಸಾರಥ್ಯದಲ್ಲಿ ಯುವ ಬಂಟರ ಸಂಘ ಬಂಟ್ವಾಳ ಎಂದು ಕಾರ್ಯಗತಗೊಂಡು ನಂತರ 2005ರಲ್ಲಿ ಕಿರಣ್ ಹೆಗ್ಡೆ ಅನಂತಾಡಿ  ಸ್ಥಾಪಕಾಧ್ಯಕ್ಷರಾಗಿ, ನಡುಮೊಗರು ಗುತ್ತು ಶಿವರಾಮ ಶೆಟ್ರು ಗೌರವಾಧ್ಯಕ್ಷರಾಗಿ ಉದ್ಘಾಟನೆಗೊಂಡ ಬಂಟ್ವಾಳ ಬಂಟರ ಸಂಘವು ಇದೀಗ ತನ್ನದೇ ಆದ ಛಾಪನ್ನು ಮೂಡಿಸಿದೆ. ಇದೀಗ ತಾಲೂಕಿನ ಬಂಟರ ಹಿರಿಮೆಯ ಭವ್ಯವಾದ ಬಂಟರ ಭವನವು ಲೋಕಾರ್ಪಣೆಗೊಂಡಿರುವುದು ಬಂಟ ಸಮಾಜಕ್ಕೆ ನಿಜಕ್ಕೂ ಹೆಮ್ಮೆಯ ವಿಷಯ.

ಬಂಟರ ಭವನದ ವಿಶೇಷತೆಗಳು: ರಾಷ್ಟ್ರೀಯ ಹೆದ್ದಾರಿ ಬಿ ಸಿ ರೋಡ ನಿಂದ ಮಂಗಳೂರಿಗೆ ಹೋಗುವ ದಾರಿ ಮದ್ಯೆ ಬ್ರಹ್ಮರಕೊಟ್ಲು ಎಂಬಲ್ಲಿ 2.10 ಎಕರೆ ವಿಸ್ತೀರ್ಣದ ವಿಶಾಲವಾದ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ 3 ಅಂತಸ್ತಿನ ಕಟ್ಟಡವು  ನಿರ್ಮಾಣದ ಹಂತದಲ್ಲಿದೆ. ವಿಶೇಷವೆಂದರೆ ಕಟ್ಟಡವು ಬಂಟರ ಹಿರಿಮೆಯ ಗುತ್ತು ಮನೆತನವನ್ನು ಹೋಲುತ್ತದೆ.

2011 ರಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ದಿ! ಬೋಳಂತೂರು ಗುತ್ತು ಗಂಗಾಧರ ರೈ ಯವರು 65 ಸೆಂಟ್ಸ್ ಜಾಗವನ್ನು ಸಂಘಕ್ಕೆ ದಾನವಾಗಿ ಕೊಟ್ಟರು ಅವರ ಹೆಸರನ್ನೇ ಸಂಕೀರ್ಣಕ್ಕೆ ಬೋಳಂತೂರು ಗುತ್ತು ಗಂಗಾಧರ ರೈ ಸಂಕೀರ್ಣ ಎಂದು ಹೆಸರಿಡಲಾಗಿದೆ. ಪ್ರಸ್ತುತ  ಸಂಘದ ಅಧ್ಯಕ್ಷರಾಗಿ ನಗ್ರಿಗುತ್ತು ವಿವೇಕ್ ಶೆಟ್ಟಿಯವರು ಚಂದ್ರಹಾಸ್ ಶೆಟ್ಟಿ ರಂಗೋಲಿ ಕಾರ್ಯದರ್ಶಿಯಾಗಿ ಚಂದ್ರಹಾಸ್ ರೈ ಬಲಾಜಿಬೈಲ್ ಸಂಘಟನಾ ಕಾರ್ಯದರ್ಶಿ ಯಾಗಿ ನವೀನ್ ಚಂದ್ರ ಶೆಟ್ಟಿ ಮುಂಡಾಜೆಗುತ್ತು ಜೊತೆ ಕಾರ್ಯದರ್ಶಿ ಯಾಗಿ ಜಗದೀಶ್ ಶೆಟ್ಟಿ ಇರಾಗುತ್ತು ಕೋಶಾಧಿಕಾರಿಯಾಗಿದ್ದಾರೆ.


ಪ್ರಸ್ತುತ ಸಂಘವು 140 ಜನ ನಿರ್ದೇಶಕರನ್ನು ಹೊಂದಿದ್ದು ಕಟ್ಟಡದ ಖರ್ಚುವೆಚ್ಚ ಸರಿ ಸುಮಾರು 17 ಕೋಟಿ ರೂ. ಎಂದು ಅಂದಾಜಿಸಲಗಿದೆ. ಏಕಕಾಲದಲ್ಲಿ ಸುಮಾರು 500 ಕಾರ್ ಪಾರ್ಕಿಂಗ್ ವುಳ್ಳ ಸುಸ್ಸಜ್ಜಿತವಾದ ಕಟ್ಟಡವು 4 ಹವಾನಿಯಂತ್ರಿತ ಹಾಲ್ ಹಾಗೂ ಹೊರಾಂಗಣ ವೇದಿಕೆ ಯನ್ನು ಹೊಂದಿದೆ. www.buntsnews.com
-------------------------------------------------------------------------------------------------------------------------

Pages