ವೀರ ಯೋಧ ಏಕನಾಥ ಶೆಟ್ಟಿ ಅವರ ಸೇನಾ ಸಮವಸ್ತ್ರ ಹುಟ್ಟೂರಿಗೆ - BUNTS NEWS WORLD

ವೀರ ಯೋಧ ಏಕನಾಥ ಶೆಟ್ಟಿ ಅವರ ಸೇನಾ ಸಮವಸ್ತ್ರ ಹುಟ್ಟೂರಿಗೆ

Share This
ಬಂಟ್ಸ್ ನ್ಯೂಸ್.ಕಾಂ, ಬೆಳ್ತಂಗಡಿ: ಜುಲೈ 22 ರಂದು ನಾಪತ್ತೆಯಾದ ಸೇನಾ ವಿಮಾನದಲ್ಲಿದ್ದ ಯೋಧರಲ್ಲಿ ಓರ್ವರಾಗಿದ್ದ ಏಕನಾಥ ಶೆಟ್ಟಿ ಅವರ ಸೇನಾ ಸಮವಸ್ತ್ರವು ಹುಟ್ಟೂರಿಗೆ ತಲುಪಿದೆ.
ಮುಂಜಾನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಯೋಧ ಏಕನಾಥ ಶೆಟ್ಟಿ ಅವರ ಸೇನಾ ಸಮವಸ್ತ್ರವನ್ನು ಭಾರತೀಯ ಸೇನೆಯು ಅವರ ಕುಟುಂಬಿಕರಿಗೆ ಗೌರವಯುತವಾಗಿ ಹಸ್ತಾಂತರಿಸಿತು. ಈ ಸಂದರ್ಭ ಏಕನಾಥ ಶೆಟ್ಟಿ ಅವರ ಸಹೋದರ ಬಾಬು ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲು, ಭೂಷಣ್ ಬೋರ್ಸೆ ಐಪಿಎಸ್, ಕ್ಯಾ.ಗಣೇಶ್ ಕಾರ್ಣಿಕ್, ವೇದವ್ಯಾಸ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

ನಂತರ ಯೋಧ ಏಕನಾಥ ಶೆಟ್ಟಿಯವರ ಸಮವಸ್ತ್ರವನ್ನುಮಡಂತ್ಯಾರಿನಿಂದ ಗುರುವಾಯನಕೆರೆಯಲ್ಲಿರುವ ಏಕನಾಥ ಶೆಟ್ಟಿಯವರ ಸ್ವಗೃಹದವರೆಗೆ ಮೆರವಣಿಗೆ ಮೂಲಕ ಗೌರವಯುತವಾಗಿ ತರಲಾಯಿತು.
-----------------------------------------------------------------------------------------------

Pages