ನಾಳೆ ಪಟ್ಟತ್ತಮೊಗರು ಚಾವಡಿ ಮನೆಯಲ್ಲಿ ಬಂಟ್ಸ್ ಮಜಿಬೈಲು ‘ದೀಪಾವಳಿ ಪರ್ಬ’ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ನಾಳೆ ಪಟ್ಟತ್ತಮೊಗರು ಚಾವಡಿ ಮನೆಯಲ್ಲಿ ಬಂಟ್ಸ್ ಮಜಿಬೈಲು ‘ದೀಪಾವಳಿ ಪರ್ಬ’

Share This
ಬಂಟ್ಸ್ ನ್ಯೂಸ್.ಕಾಂ, ಮಂಜೇಶ್ವರ: ಬಂಟ್ಸ್ ಮಜಿಬೈಲ್ ವತಿಯಿಂದ ಅಕ್ಟೋಬರ್ 29ರಂದು ಪಟ್ಟತ್ತಮೊಗರು ಚಾವಡಿ ಮನೆಯಲ್ಲಿ ಮಜಿಬೈಲು  ಗ್ರಾಮದ ಸಮಸ್ತ ಬಂಟ ಬಾಂಧವರ ಒಗ್ಗೂಡುವಿಕೆಯಲ್ಲಿ ದೀಪಾವಳಿ ಪರ್ಬ ನಡೆಯಲಿದೆ.
ಸಮಾರಂಭವು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದ್ದು ಪಟ್ಟತ್ತಮೊಗರು ಚಾವಡಿ ಮನೆ ರಾಮ್ ಪ್ರಕಾಶ್ ಆಳ್ವ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಂಜೇಶ್ವರ ಪಿರ್ಕಾ ಬಂಟರ ಸಂಘದ ಅಧ್ಯಕ್ಷ ಕುಳೂರು ಬೀಡು ಕೆ. ದಾಸಣ್ಣ ಆಳ್ವ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಖ್ಯಾತ ಸಂಗೀತ ನಿರ್ದೇಶಕ – ಗಾಯಕರಾದ ಗುರುಕಿರಣ್, ಮುಖ್ಯ ಅತಿಥಿಗಳಾಗಿ ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾ. ಸದಾನಂದ ರೈ, ಕ್ಯಾಂಪ್ಕೊ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ,  ಕಾಸರಗೋಡು ಜಿಲ್ಲಾ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನ್ಯಾ.ಎಂ.ದಾಮೋದರ ಶೆಟ್ಟಿ ಮಜಿಬೈಲ್, ಮಿಂಜ ಬಂಟರ ಸಂಘದ ಅಧ್ಯಕ್ಷ ನಾರಾಯಣ ನ್ಯಾಕ್ ನಡುಹಿತ್ಲು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಎ.ಬಿ ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರೋ. ಡಾ.ಪ್ರಜ್ವಲ್ ಶೆಟ್ಟಿ ಕೆ. ಮಜಿಬೈಲ್ ಹಾಗೂ ತುಳುಚಿತ್ರರಂಗದ ನಿರ್ದೇಶಕ ಕೆ.ಸೂರಜ್ ಶೆಟ್ಟಿ ಕಂಗುಮೆ ಮಜಿಬೈಲ್ ಅವರಿಗೆ ಸನ್ಮಾನ ನಡೆಯಲಿದೆ. ಈ ಸಂದರ್ಭ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಸಹಾಯ ಧನ ವಿತರಣೆ, ವಿವಿಧ ಜಾನಪದ-ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು, ಆಟೋಟ ಸ್ಪರ್ಧೆಗಳು ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಸಮಸ್ತ ಬಂಟ ಬಾಂಧವರನ್ನು ಆದರ ಪೂರ್ವಕವಾಗಿ ಬಂಟ್ಸ್ ಮಜಿಬೈಲು ಸದಸ್ಯರು ಆಮಂತ್ರಿಸುತ್ತಿದ್ದಾರೆ.
-----------------------------------------------------------------------------------------------

Pages