BUNTS NEWS, ಕಟೀಲು: ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರ ಕಟೀಲು ಶ್ರೀ
ದುರ್ಗಾಪರಮೇಶ್ವರಿ ಅಮ್ಮನವರಿಗೆ ಬಂಟ ಸಹೋದರರು ವಜ್ರ ಖಚಿತ ಕಿರೀಟವನ್ನು ನೀಡಿದ್ದಾರೆ.

ಶ್ರೀ ದೇವಳ ಭಕ್ತರಾದ
ಉದ್ಯಮಿ ಮಳವೂರಿನ ಪೊಪ್ಯುಲರ್ ಜಗದೀಶ ಶೆಟ್ಟಿ ಹಾಗೂ ಮುಂಬೈನ ಉದ್ಯಮಿ ಕರುಣಾಕರ ಶೆಟ್ಟಿ ಸಹೋದರರು ಶ್ರೀ ದೇವಿಗೆ
ವಜ್ರ ಖಚಿತ ಕಿರೀಟವನ್ನು ಶುಕ್ರವಾರ ಸಮರ್ಪಿಸಿದ್ದಾರೆ. ದೇವಳದ ಬಗ್ಗೆ ಅಪಾರ ಭಕ್ತಿ ಹೊಂದಿರುವ ಇವರು
ಹಿಂದೆ ದೇವಳದ ವಸಂತ ಮಂಟಪಕ್ಕೆ ಚಿನ್ನದ ಕವಚಯನ್ನು ನೀಡಿದ್ದರು.
ವಜ್ರದ ಕಿರೀಟ ಸಮರ್ಪಣಾ
ಸಂದರ್ಭ ದೇವಳದ ಆಡಳಿತ ಮೊಕ್ತೇಸರಾದ ಡಾ. ರವೀಂದ್ರನಾಥ ಪೂಂಜಾ, ಅನುವಂಶಿಕ ಅರ್ಚಕರಾದ ವಾಸುದೇವ ಅಸ್ರಣ್ಣ
ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. © www.buntsnews.com
---------------------------------------------------------------------------------------------------------------------