BUNTS NEWS, ಬೆಂಗಳೂರು: ಬೆಂಗಳೂರು ಬಂಟರ ಸಂಘದ ಯುವ ಘಟಕ ಹಾಗೂ ಸಮಾಜ ಸೇವಾ
ಘಟಕದ ಆಯೋಜನೆಯಲ್ಲಿ ಅಕ್ಟೋಬರ್ 2ರ ಗಾಂಧಿಜಯಂತಿಯಂದು “ಸ್ವಚ್ಛ ಭಾರತಕ್ಕಾಗಿ ಅರಿವಿನ ನಡಿಗೆ” ಕಾರ್ಯಕ್ರಮ
ನಡೆಯಲಿದೆ.
ವಿಜಯನಗರದಲ್ಲಿರುವ
ಬಂಟರ ಸಂಘದಲ್ಲಿ ಮುಂಜಾನೆ 7ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ
ಗೋವಿಂದರಾಜ ನಗರ ವಾರ್ಡ್ ಬಿಬಿಎಂಪಿ ಸದಸ್ಯ ಕೆ.ಉಮೇಶ್ ಶೆಟ್ಟಿ, ಅತ್ತಿಗುಪ್ಪೆ ವಾರ್ಡ್ ಬಿಬಿಎಂಪಿ
ಸದಸ್ಯ ಡಾ.ಎಸ್.ರಾಜು, ಮರೇನಹಳ್ಳಿ ವಾರ್ಡ್ ಮಧುಕುಮಾರಿ ವಾಗೇಶ್ ಹಾಗೂ ರಾಷ್ಟ್ರೀಯ ಪ್ರೋ ಕಬ್ಬಡಿ
ಕ್ರೀಡಾಪಟು ಪ್ರಶಾಂತ್ ರೈ ಭಾಗವಹಿಸಲಿದ್ದಾರೆ. ©
www.buntsnews.com
-------------------------------------------------------------------------------------------------------------------------