ರಾಷ್ಟ್ರೀಯ ಅಥ್ಲೆಟಿಕ್‌ ಚಾಂಪಿಯನ್‌ ಷಿಪ್‌ನಲ್ಲಿ ಕಂಚು ಗೆದ್ದ ರಶ್ಮಿ ಶೆಟ್ಟಿ ಪುತ್ತೂರು - BUNTS NEWS WORLD

ರಾಷ್ಟ್ರೀಯ ಅಥ್ಲೆಟಿಕ್‌ ಚಾಂಪಿಯನ್‌ ಷಿಪ್‌ನಲ್ಲಿ ಕಂಚು ಗೆದ್ದ ರಶ್ಮಿ ಶೆಟ್ಟಿ ಪುತ್ತೂರು

Share This
BUNTS NEWS,ಕ್ರೀಡೆ: ಲಖನೌನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಅಥ್ಲೆಟಿಕ್ಚಾಂಪಿಯನ್ಷಿಪ್ನಲ್ಲಿ ರಶ್ಮಿ ಶೆಟ್ಟಿ ಕಂಚಿನ ಪದಕ ಪಡೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ರಶ್ಮಿ ಶೆಟ್ಟಿ ರಾಷ್ಟ್ರೀಯ ಅಥ್ಲೆಟಿಕ್ಚಾಂಪಿಯನ್ಷಿಪ್ನಲ್ಲಿ ನಡೆದ ಜಾವಲಿನ್ ತ್ರೋ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಗೆದ್ದಿದ್ದಾರೆ. ಇವರು 2010ರ ಕಾಮನ್’ವೆಲ್ತ್’ನಲ್ಲಿ  ಕಂಚಿನ ಪದಕ ವಿಜೇತ ಕಾಶಿನಾಥ್ Naik ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

ರಶ್ಮಿ ಶೆಟ್ಟಿ ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು 6 ವರ್ಷಗಳ ಕಾಲ ತರಬೇತಿ ಪಡೆದಿದ್ದರು. ರಾಷ್ಟ್ರೀಯ ಅಥ್ಲೆಟಿಕ್ಚಾಂಪಿಯನ್ಷಿಪ್ನಲ್ಲಿ ರೈಲ್ವೇ ತಂಡವನ್ನು ಪ್ರತಿನಿಧಿಸಿದ್ದಾರೆ. © www.buntsnews.com
------------------------------------------------------------------------------------------------------------------------

Pages